Advertisement
ಹಿಂದಿನ ಕಾಂಗ್ರೆಸ್ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿಯಂತೆ 5 ವರ್ಷಕ್ಕೆ 50 ಸಾವಿರ ಕೋಟಿ ರೂಪಾಯಿ ವಿನಿಯೋಗ ಮಾಡುವುದಾಗಿ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಹೇಳಿದ್ದರು. ಈ ಬಗ್ಗೆ ನಮ್ಮಲ್ಲಿ ಸಾಕ್ಷಿ ಇದೆ ಎಂದು ಬಿಜೆಪಿ ಸದಸ್ಯರು ಸರ್ಕಾರದ ಮೇಲೆ ಮುಗಿ ಬಿದ್ದಿದ್ದರು.
ನೀವು ದಾಖಲೆಗಳನ್ನು ತಂದು ತೋರಿಸಿ ಎಂದರು. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ‘ನಮ್ಮ ಬಳಿ ದಾಖಲೆಗಳಿವೆ’ ಎಂದರು. ಈ ವೇಳೆ ಯಡಿಯೂರಪ್ಪ ಅವರು ತಲೆ ಅಲ್ಲಾಡಿಸುತ್ತಿದ್ದರು.
Related Articles
Advertisement
ಯಡಿಯೂರಪ್ಪ ಪ್ರತಿಕ್ರಿಯಿಸಿ ‘ನಮ್ಮಲ್ಲಿ ದಾಖಲೆ ಇಲ್ಲಾ ಅಂತಾದರೆ ನಾವು ನಿಮ್ಮ ಕ್ಷಮೆ ಕೇಳಲು ಸಿದ್ದ’ ಎಂದರು.
ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ‘ಯಡಿಯೂರಪ್ಪ ಕುಳಿತುಕೊಳ್ಳಿ..ನೀವು ಕ್ಷಮೆ ಕೇಳಬೇಕಾಗಿಲ್ಲ.ನಿಮಗೆ ವಯಸ್ಸಾಗಿದೆ’ ಎಂದರು. ಈ ವೇಳೆ ಸದನ ನಗೆ ಗಡಲಲ್ಲಿ ತೇಲಾಡಿತು.