ನಂಜನಗೂಡು: ಸಮ ಸಮಾಜ ಹಾಗೂ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಅಂತ ರ್ಜಾತಿ ವಿವಾಹಗಳು ಹೆಚ್ಚು ನಡೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ “ಮಾಸಿಕ ಸಾಮೂಹಿಕ ವಿವಾಹ-95′ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಸವಣ್ಣನವರ ಕಾಲದಲ್ಲಿ ಅಂತರ್ಜಾತಿ ವಿವಾಹಗಳಾಗಿದ್ದವು. ಸಮಾಜ ದಲ್ಲಿ ಸಮಾನತೆ ತತ್ವ ಸಾರಲು ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಇದಕ್ಕಾಗಿ ಸಮಿತಿ ರಚಿಸಿದ್ದೆ. ಈಗಿನ ಸರ್ಕಾರ ಅದರ ಕೆಲಸ ಶುರು ಮಾಡುತ್ತಿದೆ. ಸಮಾಜದಲ್ಲಿ ಇರುವ ಜಾತಿ ಪದ್ಧತಿ ತೊಲಗಿಸಲು ಅನುಭವ ಮಂಟಪ ದಾರಿ ಮಾಡಿಕೊಡುತ್ತದೆ ಎಂದರು.
ಇದೇ ವೇಳೆ ಶರಣಿ ಎಂ.ಎ.ನೀಲಾಂಬಿಕಾರವರು ರಚಿಸಿರುವ ವಚನ ಕ್ಕೊಂದು ಕಥೆ ಎಂಬ ಪುಸ್ತಕವನ್ನು ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿ, ಶ್ರೀಕ್ಷೇತ್ರ ಸುತ್ತೂರು ಮಠದ ಈ ಕಾರ್ಯ ಶ್ಲಾಘನೀಯ ಹಾಗೂ ಮಾದರಿ ಎಂದರು.
ಇದನ್ನೂ ಓದಿ :ಸ್ವದೇಶಿ ಉತ್ಪನ್ನದಿಂದ ಭಾರತ ಶಕ್ತಿಶಾಲಿ: ಪೂಂಜ
ಸರಳ, ಸಾಂಪ್ರದಾಯಿಕ ಜಾತ್ರೆಗೆ ಚಾಲನೆ: ಸುತ್ತೂರು ಕ್ಷೇತ್ರದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. 6 ದಿನ ಅದ್ಧೂರಿಯಾಗಿ ನಡೆಯುತ್ತಿದ್ದ ಜಾತ್ರೆ ಯನ್ನು ಕೊರೊನಾ ಕಾರಣದಿಂದ ಎರಡೇ ದಿನಕ್ಕೆ ಸೀಮಿತಗೊಳಿಸಲಾಗಿದ್ದು, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖ ದಲ್ಲಿ ಜಾತ್ರೆ ಮಹೋತ್ಸವ ನಡೆಯುತ್ತಿದೆ. ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧಿ ಪತಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.