Advertisement

ಸಿದ್ಧರಾಮ ಶ್ರೀಗಳಿಂದ ಪೀಠಾರೋಹಣ

06:00 AM Oct 30, 2018 | |

ಗದಗ: ಬೆಳಗಾವಿ ಜಿಲ್ಲೆ ನಾಗನೂರು ರುದ್ರಾಕ್ಷಿಮಠದ ಡಾ| ಸಿದ್ಧರಾಮ ಸ್ವಾಮೀಜಿ ಡಂಬಳ-ಗದಗ ಜ| ತೋಂಟದಾರ್ಯ ಸಂಸ್ಥಾನಮಠದ 20ನೇ ಪೀಠಾಧಿಪತಿಯಾಗಿ ಸೋಮವಾರ ಅಧಿಕಾರ ವಹಿಸಿಕೊಂಡರು. ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮಿಗಳ ಸಾನ್ನಿಧ್ಯ, ನಿಡಸೋಸಿ ಸಿದಟಛಿಸಂಸ್ಥಾನಮಠದ ಜಗದ್ಗುರು ಪಂಚಮ
ಶಿವಲಿಂಗೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಬೆಳಗ್ಗೆ 6:30ರಿಂದ 10ರವರೆಗೆ ಧಾರ್ಮಿಕ ವಿಧಿ ವಿಧಾನ ನೆರವೇರಿತು. ಜಗದ್ಗುರು ಗುರುಸಿದಟಛಿ ರಾಜಯೋಗಿಂದ್ರ ಸ್ವಾಮೀಜಿ ತೋಂಟದಾರ್ಯಮಠದ ಪೂಜಾ ಮಂದಿರದಲ್ಲಿ ನೂತನ ಶ್ರೀಗಳಿಗೆ ಲಿಂಗಾಂಗ ಸಂಬಂಧ, ಮಂತ್ರೋಪದೇಶ, ಪ್ರಣವ ಪಂಚಾಕ್ಷರಿ ಮಂತ್ರ ಬೋಧಿಸಿದರು. ಷೋಡಷೋಪಚಾರಗಳಿಂದ ಲಿಂಗ ಪೂಜಿಸಿ, ಕರ್ಣಪ್ರಸಾದ ನೀಡಿದರು. ಬಳಿಕ ಉಭಯ ಜಗದ್ಗುರುಗಳು ಒಟ್ಟಾಗಿ ಪ್ರಸಾದ ಸ್ವೀಕರಿಸಿದರು.

Advertisement

ಬಳಿಕ ಶ್ರೀಮಠದ ಬೆಳ್ಳಿ ಸಿಂಹಾಸನ ಮೇಲೆ ಆಸೀನರಾದ ನೂತನ ಜಗದ್ಗುರುಗಳಿಗೆ ಬಿಲ್ವಪತ್ರೆ ಹಾಗೂ ಪುಷ್ಪವೃಷ್ಟಿಗೈಯುವ ಮೂಲಕ ಪಾದಪೂಜೆ ನೆರವೇರಿಸಲಾಯಿತು. ಕೆಳದಿ ಅರಸರು ಶ್ರೀಮಠಕ್ಕೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದ ಚಿನ್ನದ ಪಾದುಕೆಗಳನ್ನು ತೊಡಿಸಿ, ಕೈಗೆ ಬಂಗಾರದ ದಂಡ ನೀಡಿ, ಪೂಜಾ ಮಂದಿರದಿಂದ ಶ್ರೀಮಠದ ಆವರಣದಲ್ಲಿ ವ್ಯವಸ್ಥೆ ಮಾಡಿದ್ದ ವೇದಿಕೆ ಕಾರ್ಯಕ್ರಮಕ್ಕೆ
ಮೆರವಣಿಗೆಯೊಂದಿಗೆ ಕರೆ ತರಲಾಯಿತು.

ಈ ವೇಳೆ ಸಕಲ ಮಂಗಳವಾದ್ಯ ವೈಭವಗಳೊಂದಿಗೆ ಬಸವಾದಿ ಶರಣರ ವಚನಗಳ ಕಟ್ಟುಗಳನ್ನಿಟ್ಟು ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ಶ್ರೀಮಠದ ಒಳಾಂಗಣದಲ್ಲಿರುವ ಲಿಂ| ತೋಂಟದಾರ್ಯ ಸ್ವಾಮಿಗಳ ಕತೃì ಗದ್ದುಗೆ ಸುತ್ತ ಐದು ಬಾರಿ ಪ್ರದಕ್ಷಿಣೆ ಹಾಕಲಾಯಿತು. ನೂತನ ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ಲಿಂ| ತೋಂಟದ ಸಿದಟಛಿಲಿಂಗ ಸ್ವಾಮಿಗಳ ಕ್ರಿಯಾ ಸಮಾಧಿಗೆ ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿದರು. 

ಬಳಿಕ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಜಗದ್ಗುರು ಡಾ|ತೋಂಟದ ಸಿದಟಛಿರಾಮ ಸ್ವಾಮಿಗಳು ಜಗದ್ಗುರು ಗುರುಸಿದಟಛಿ ರಾಜಯೋಗಿಂದ್ರ ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನಂತರ ಹುಬ್ಬಳ್ಳಿ ಜಗದ್ಗುರುಗಳು ನೂತನ ಜಗದ್ಗುರುಗಳನ್ನು ಪೀಠಾರೋಹಣ ಮಾಡಿಸಿ ಸಾಷ್ಟಾಂಗ ನಮಸ್ಕಾರ ಮಾಡಿದರು. ನಂತರ ಪರಸ್ಪರ ಹಾರ ಬದಲಾಯಿಸಿಕೊಂಡು “ಜಗದ್ಗುರುಗಳೆಲ್ಲರೂ ಸಮಾನರು’ ಎಂಬ ಸಂದೇಶ ಸಾರಿದರು.

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾಮಠದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ, ಆಡಿ ಹಂದಿಗುಂದ ಸಿದ್ದೇಶ್ವರಮಠದ ಶ್ರೀ ಶಿವಾನಂದ ಸ್ವಾಮೀಜಿ, ನವಲಗುಂದ ಗವಿಮಠದ ಶ್ರೀ
ಬಸವಲಿಂಗ ಸ್ವಾಮೀಜಿ, ಅಥಣಿ ಮೋಟಗಿಮಠದ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಕಡೋಲಿ ವಿರಕ್ತಮಠದ ಶ್ರೀ ಗುರುಬಸವಲಿಂಗ ಸ್ವಾಮೀಜಿ ಸೇರಿದಂತೆ ಹರು-ಗುರು ಚರಮೂರ್ತಿಗಳು ಸಮ್ಮುಖ ವಹಿಸಿದ್ದರು.

Advertisement

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಸಂಸದ ಶಿವಕುಮಾರ ಉದಾಸಿ, ಶಾಸಕ ಎಚ್‌.ಕೆ. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಸೇರಿದಂತೆ ಹಲವು ಗಣ್ಯರು, ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. “ಡಾ.ಸಿದ್ಧಲಿಂಗ ಸ್ವಾಮಿಗಳ ಆಶಯದಂತೆ ನಡೆಯುವೆ’ ಲಿಂ. ತೋಂಟದ ಸಿದಟಛಿಲಿಂಗ ಸ್ವಾಮಿಗಳ ಆಶಯದಂತೆ ಎಲ್ಲ ಕಾರ್ಯಕ್ರಮಗಳನ್ನು ಯಥಾ ಪ್ರಕಾರವಾಗಿ ಮುಂದುವರಿಸಿಕೊಂಡು ಹೋಗುವುದಾಗಿ ಜಗದ್ಗುರು ತೋಂಟದ ಸಿದಟಛಿರಾಮ ಸ್ವಾಮೀಜಿ ಹೇಳಿದರು. ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಅವರು, ಲಿಂ. ತೋಂಟದ ಸಿದಟಛಿಲಿಂಗ ಸ್ವಾಮಿಗಳು ಬಸವಣ್ಣನ ವಿಚಾರಧಾರೆಗಳಂತೆಯೇ ಬದುಕಿದ್ದರು. ಸಮಾಜದ ಅನಿಷ್ಟ, ಅಸಮಾನತೆ ತೊಡೆದು ಹಾಕಿ, ಜನರಲ್ಲಿ
ವೈಚಾರಿಕ ಪ್ರಜ್ಞೆ ಮೂಡಿಸಿದ್ದರು. ಸಾಹಿತ್ಯ, ಪರಿಸರ ಸಂರಕ್ಷಣೆಯಲ್ಲಿ ಮಹಾಕ್ರಾಂತಿಯನ್ನೇ ಮಾಡಿದ್ದರು. ವ್ಯಸನಮುಕ್ತ ಸಮಾಜದ ಕಸನು ಅವರದ್ದಾಗಿತ್ತು ಎಂದರು.

ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಡ ಮಕ್ಕಳಿಗೆ ಜ್ಞಾನದಾಸೋಹ ನೀಡಿದ್ದರು. ಕೃಷಿ, ಸಾಮಾಜಿಕ, ಪರಿಸರ ಸಂರಕ್ಷಣೆ ಕುರಿತು ಅವರ ಹೋರಾಟ ಅವಿಸ್ಮರಣೀಯ. ಹೀಗಾಗಿ ಅವರನ್ನು ಜನಸಾಮಾನ್ಯರ ಸ್ವಾಮೀಜಿ ಎಂದು ಕರೆಯಲಾಗುತ್ತದೆ. ಲಿಂ. ತೋಂಟದ ಸಿದಟಛಿಲಿಂಗ ಶ್ರೀಗಳು ಕಳೆದ 45 ವರ್ಷಗಳ ಕಾಲ ಶ್ರೀಮಠವನ್ನು ಮುನ್ನಡೆಸಿದ ಪರಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಶ್ರೀಗಳ ಸಾಧನೆಗೆ ದೇಶವೇ ಬೆರಗಾಗಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next