Advertisement
ಚರಂಡಿಯಲ್ಲಿ ತುಂಬಿದೆ ಕಳೆ ಪೇಟೆಯ ಒಳ ಚರಂಡಿಯ ಬಹುತೇಕ ಕಡೆ ನಿರ್ವಹಣೆ ಇಲ್ಲ. ಕಳೆ ತುಂಬಿವೆ. ಚರಂಡಿಯ ಮೇಲಿನ ಸಿಮೆಂಟ್ ಸ್ಲಾéಬ್ ಕುಸಿದು ಕೆಳಗೆ ಬಿದ್ದಿವೆ. ಬಸ್ ನಿಲ್ದಾಣದ ಬಲ ಭಾಗದ ಚರಂಡಿಯಲ್ಲಿ ಹೂಳು ತುಂಬಿ ಮೊದಲ ಮಳೆಗೆ ನೀರು ಹೊರ ಚರಂಡಿಯಲ್ಲಿ ಹರಿದಿದೆ. ಪಕ್ಕದಲ್ಲಿರುವ ರಿಕ್ಷಾ ನಿಲ್ದಾಣ ಹಿಂಭಾಗದಲ್ಲಿ ಕಳೆ ಬೆಳೆದು ಕೊಳಚೆ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗುತ್ತಿ¤ವೆ. ಪರಿಸರ ವಾಸನೆ ಬೀರುತ್ತಿದೆ.
ಚರಂಡಿಯಲ್ಲಿ ಕೊಳಚೆ ನೀರು ಸರಿಯಾಗಿ ಹರಿದು ಹೋಗದೇ ಅಲ್ಲಲ್ಲಿ ಸಂಗ್ರಹವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರನ್ನು ಕಾಡುತ್ತಿದೆ. ಸೊಳ್ಳೆಗಳು ಉತ್ಪತ್ತಿಯಾಗಿ ಅಂಗಡಿ ಮುಂಗಟ್ಟು ಹಾಗೂ ಮನೆಗಳನ್ನು ಕಾಡುತ್ತಿವೆ. ಬಸ್ ನಿಲ್ದಾಣ ಎದುರುಗಡೆ ಹಾಗೂ ಕಡ್ರಿ ರಸ್ತೆ ಒಳ ಚರಂಡಿಯಲ್ಲಿ ಹೂಳು ತುಂಬಿದೆ. ದುರ್ಗಾ ಕಾಂಪ್ಲೆಕ್ಸ್‌ನ ಹಿಂಭಾಗದಲ್ಲಿ ಕೊಳಚೆ ನೀರು ತುಂಬಿದೆ. ಜೂನ್ ಪ್ರಥಮ ವಾರದಲ್ಲಿ ಕೆಲಸ ಶುರು
ಹೆಚ್ಚಾಗಿ ಒಳಚರಂಡಿಯ ಹೂಳೆತ್ತುವ ಕಾಮಗಾರಿ ಜೂನ್ ಪ್ರಥಮ ವಾರದಲ್ಲಿ ಶುರುಮಾಡುತ್ತೇವೆ. ಕಳೆದ ವರ್ಷ ಮಳೆ ತಡವಾಗಿ ಬಂದಿದ್ದರಿಂದ ಕಾಮಗಾರಿ ಕೂಡ ತಡವಾಗಿ ನಡೆದಿದೆ. ಈ ವರ್ಷ ಬೇಗ ಶುರುಮಾಡುತ್ತೇವೆ.
ಸತೀಶ್ ನಾಯ್ಕ, ಪಿಡಿಒ ಗ್ರಾ. ಪಂ. ಸಿದ್ದಾಪುರ
Related Articles
ಮಳೆಗಾಲ ಮುನ್ನವೇ ಒಳ ಚರಂಡಿಯ ಹೂಳೆತುವ ಕಾಮಗಾರಿ ಶುರುಮಾಡಿದ್ದಾರೆ ಸಮಸ್ಯೆಗಳು ಬರುವುದಿಲ್ಲ. ಆದರೆ ನಮ್ಮ ಸ್ಥಳೀಯಾಡಳಿತ ನಿಧಾನ ಧೋರಣೆ ಅನುಸರಿಸುವುದರಿಂದ ಕಾಮಗಾರಿಯೂ ನಿಧಾನವಾಗಿದೆ. ಇದರಿಂದ ಸಮಸ್ಯೆ ನಾಗರಿಕರಿಗೆ.
ಭಾಸ್ಕರ ಶೆಟ್ಟಿ, ಸ್ಥಳೀಯರು
Advertisement
ಸತೀಶ ಆಚಾರ್ ಉಳ್ಳೂರು