Advertisement

ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳುಗಾರಿಕೆ

05:38 PM Mar 30, 2019 | |
ಸಿದ್ದಾಪುರ: ಸಮೀಪದ ಹೆಬ್ಟಾಳ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಮರಳು ಅಕ್ರಮ ಸಾಗಾಟ ಹಗಲು-ರಾತ್ರಿಯನ್ನದೇ ರಾಜಾರೋಷವಾಗಿ ನಡೆದಿದ್ದು, ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲಾಡಳಿತ ಮರಳು ಅಕ್ರಮ ಸಾಗಾಟ ತಡೆಗೆ ಕ್ರಮಕೈಗೊಂಡಿದೆ. ಆದರೆ ಹೆಬ್ಟಾಳ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಿವುವವರು ಇಂತಹ ಯಾವುದೇ ಕಠಿಣ ಕ್ರಮಕ್ಕೂ ಮಣಿಯದೇ ರಾಜರೋಷವಾಗಿ ಟ್ರ್ಯಾಕ್ಟರ್‌ ಮೂಲಕ ಮರಳು ಸಾಗಿಸುತ್ತಿದ್ದಾರೆ.
ಮೂರು ಪ್ರಕಾರದಲ್ಲಿ ಅಕ್ರಮ: ಟ್ರ್ಯಾಕ್ಟರ್‌ ಮೂಲಕ ಮೂರು ಪ್ರಕಾರಗಳಲ್ಲಿ ಅಕ್ರಮ ಮರಳು ಸಾಗಾಟ ನಡೆದಿದೆ. ಬೇಸಿಗೆ ಸಮಯವಾಗಿದ್ದರಿಂದ ನದಿಯಲ್ಲಿ ನೀರು ಹರಿಯುವಿಕೆ ಕಡಿಮೆಯಾಗಿದ್ದು, ಹರಿಯುವ ನದಿಯಲ್ಲಿ ನೇರವಾಗಿ ಟ್ರ್ಯಾಕ್ಟರ್‌ ಇಳಿಸಿ ಮರಳನ್ನು ತೆಗೆಯುವುದು ಒಂದು ಪ್ರಕಾರ. ನದಿ ದಡದಲ್ಲಿ ಮಳೆಗಾಲ ಬಂದಾಗ ಅಥವಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಹರಿದು ಬಂದ ಮರಳು ಗುಡ್ಡೆಯಲ್ಲಿ ಮರಳು ತುಂಬಿ ಸಾಗಾಟ ಮತ್ತು ಸಂಗ್ರಹ ಮಾಡುವುದು ಮತ್ತೂಂದು ಪ್ರಕಾರ. ಇಲ್ಲಿ ಸಂಗ್ರಹವಾಗಿರುವ ಮರಳಿನಲ್ಲಿ ಸಣ್ಣಪುಟ್ಟ ಕಲ್ಲುಗಳನ್ನು ಬೆರ್ಪಡಿಸಲು ಜಲ್ಲುಡಿ ಕಲ್ಲುಗಳನ್ನು ಬೆರ್ಪಡಿಸುವ ಪುಟ್ಟೆ)ಯನ್ನು ಬಳಸಿಕೊಂಡು ಕಲ್ಲುಗಳನ್ನು ಮತ್ತು ಉತ್ತಮ ಮರಳನ್ನು ಸಂಗ್ರಹ ಮಾಡಿ ಮಾರಾಟ ಮಾಡುತ್ತದೆ.
ನದಿಯಲ್ಲಿ ಕಪ್ಪುಮಣ್ಣು ಮಿಶ್ರಿತ ಮರಳು ಸಂಗ್ರಹಿಸಿ, ಅದೇ ನದಿಯಲ್ಲಿ ನಿರ್ಮಿಸಿರುವ ಬೃಹತ್‌ ಸಿಮೆಂಟ್‌ ಕಾಂಕ್ರೀಟ್‌ನ ಕಣದಲ್ಲಿ ನೀರಿನಿಂದ ತೊಳೆದು(ಫಿಲ್ಟರ್‌ ಮಾಡಿ) ಗುಣಮಟ್ಟದ ಮರಳು ಸಂಗ್ರಹ ಮಾಡಿ ಮಾರಾಟ ಮಾಡುವುದು ಮೂರನೇ ಪ್ರಕಾರ. ಈ ಮೂರು ಪ್ರಕಾರದಲ್ಲಿ ಮರಳು ಸಾಗಾಟ ನಡೆದಿದೆ.
ನದಿಯಲ್ಲಿ ತಗ್ಗುದಿನ್ನೆಗಳು: ಮರಳು ಅಕ್ರಮ ಸಾಗಾಟದಿಂದಾಗಿ ನದಿಯಲ್ಲಿ ಎಲ್ಲೆಂದರಲ್ಲಿ ಬೃಹತ್‌ ಗುಂಡಿಗಳು ನಿರ್ಮಾಣವಾಗಿವೆ. ಮರಳು ತೆಗೆಯುತ್ತಿರುವ ಪರಿಣಾಮ ಅಂತರ್ಜಲಮಟ್ಟ ಕುಸಿಯುತ್ತಿದ್ದು, ಜಲಚರಗಳಿಗೂ ಆಪತ್ತು ಎದುರಾಗಿದೆ. ತುಂಗಭದ್ರಾ ನದಿಯ ನೀರು ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಅನೇಕ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳ ಜನರಿಗೆ ಕುಡಿಯಲು ಮೂಲಾಧಾರವಾಗಿದೆ. ಈ ಅಕ್ರಮ ಮರಳುಗಾರಿಕೆಯಿಂದ ನೀರು ಕಲುಷಿತಗೊಳ್ಳುಗೊತ್ತಿದೆ.
ಪಿಲ್ಲರ್‌ಗೆ ಧಕ್ಕೆ: ಬಳ್ಳಾರಿ ಜಿಲ್ಲೆಯ ಕುಡತಿನಿ ಶಾಕೋತ್ಪನ್ನ ವಿದ್ಯುತ್‌ ಕೇಂದ್ರಕ್ಕೆ ನೀರನ್ನು ಪೂರೈಸುವ ಪೈಪ್‌ಲೈನ್‌ ಹಾಕಿರುವ ಬಹೃತ್‌ ಪಿಲ್ಲರ್‌ ಕೆಳಗಡೆಯೇ ಮರಳು ತೆಗೆಯುತ್ತಿರುವುದರಿಂದ ಪಿಲ್ಲರ್‌ಗೆ ಧಕ್ಕೆಯಾಗುವ ಸಂಭವವಿದೆ. ಅಕ್ರಮವಾಗಿ ಮರಳು ಸಂಗ್ರಹಿಸುತ್ತಿರುವುದು ಅಧಿಕಾರಿಗಳಿಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಜಿಲ್ಲಾದ್ಯಂತ ಸ್ಯಾಂಡ್‌ ಮಾನಟರಿಂಗ್‌ ಕಮಿಟಿ ಕೆಲಸ ಮಾಡುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
ರೇಣುಕಾ ಸುಕುಮಾರ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಸಿದ್ದಾಪುರ: ಹೆಬ್ಟಾಳ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿರುವ ಬೃಹತ್‌ ಪಿಲ್ಲರ್‌ ಕೆಳಗಡೆಯೆ ಅಕ್ರಮ ಮರಳು ತುಂಬುತ್ತಿರುವುದು.
„ಸಿದ್ದನಗೌಡ ಹೊಸಮನಿ
Advertisement

Udayavani is now on Telegram. Click here to join our channel and stay updated with the latest news.

Next