Advertisement

ಸೋಂಕು ದೃಢಪಟ್ಟರೂ ಸೀಲ್‌ಡೌನ್‌ ಆಗದ ಪ್ರದೇಶ

04:34 PM Jun 27, 2020 | Naveen |

ಸಿದ್ದಾಪುರ: ದೆಹಲಿಯಿಂದ ಮರಳಿದ್ದ ಕಾರಟಗಿ ಪಟ್ಟಣದ 19ನೇ ವಾರ್ಡ್‌ ಇಂದಿರಾನಗರದ ನಿವಾಸಿಯಾಗಿರುವ 23 ವರ್ಷದ ಯುವತಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಯುವತಿಯನ್ನು ಗುರುವಾರ ಸಂಜೆಯೇ ಕೊಪ್ಪಳದ ಕೋವಿಡ್‌-19 ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ ಆ ಯುವತಿ ವಾಸಿಸುತ್ತಿದ್ದ ಮನೆಯ ಸುತ್ತಮುತ್ತ ಶುಕ್ರವಾರ ಸಂಜೆವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆ ಪ್ರದೇಶವನ್ನು ಸೀಲ್‌ಡೌನ್‌ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

Advertisement

ಶುಕ್ರವಾರ ಬೆಳಗ್ಗೆ ಯುವತಿ ವಾಸಿಸುತ್ತಿದ್ದ ಮನೆಗೆ ತಹಶೀಲ್ದಾರ್‌ ಕವಿತಾ ಆರ್‌., ಪುರಸಭೆ ಮುಖ್ಯಾಧಿಕಾರಿ ಎನ್‌. ಶಿವಲಿಂಗಪ್ಪ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶಕುಂತಲಾ ಪಾಟೀಲ್‌, ಪಿಎಸ್‌ಐ ಅವಿನಾಶ ಕಾಂಬ್ಳೆ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಮನೆಯವರಿಂದ ಮಾಹಿತಿ ಸಂಗ್ರಹಿಸಿದರು. ಬಳಿಕ ಕೋವಿಡ್ ಬಗ್ಗೆ ಮನೆಯವರಿಗೆ ತಿಳಿಹೇಳಿ ಮನೆಯವರೆಲ್ಲರೂ ಹೊಂ ಕ್ವಾರಂಟೈನ್‌ಲ್ಲಿರುವಂತೆ ತಿಳಿಸಿ. ಆ ವಾರ್ಡ್‌ ಸುತ್ತಮುತ್ತ ಸಂಚರಿಸಿ ಕೋವಿಡ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಬಂದಿದ್ದರು.

ತಹಶೀಲ್ದಾರ್‌ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿದ ಬಳಿಕವಾದರೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆ ಪ್ರದೇಶವನ್ನು ಸೀಲ್‌ಡೌನ್‌ ಮಾಡಬೇಕಾಗಿತ್ತು. ಆದರೆ ಶುಕ್ರವಾರ ಸಂಜೆವರೆಗೂ ಸೀಲ್‌ ಡೌನ್‌ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next