ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಅಸ್ಪೃಶ್ಯತೆಯ ಪ್ರಕರಣದ 99 ಜನರಿಗೆ ಧಾರವಾಡ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ.
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಅಸ್ಪೃಶ್ಯತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 9 ವರ್ಷದ ಹಿಂದೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಗ 117 ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಈ ಪ್ರಕರಣ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಕಳೆದ ಅಕ್ಟೋಬರ್ 24 ರಂದು ಜಿಲ್ಲಾ ನ್ಯಾಯಾಧೀಶ ಸಿ ಚಂದ್ರಶೇಖರ ಅವರು 101 ಜನರು ದೋಷಿಗಳೆಂದು ತೀರ್ಪು ನೀಡಿದ್ದರು. ಹಾಗಾಗಿ 101 ಜನರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಜೈಲು ಸೇರಿದ್ದ 99 ಅಪರಾಧಿಗಳು ಧಾರವಾಡ ವಿಭಾಗೀಯ ಪೀಠದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಿಭಾಗೀಯ ಪೀಠ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 97 ಜನ ಹಾಗೂ 5 ವರ್ಷ ಶಿಕ್ಷೆಗೆ ಗುರಿಯಾದ ಇಬ್ಬರು ಸೇರಿ ಒಟ್ಟು 99 ಜನರಿಗೆ ಜಾಮೀನು ಮಂಜೂರು ಮಾಡಿದೆ. A-1 ಆರೋಪಿ ಮಂಜುನಾಥ ಜಾಮೀನಿಗೆ ಅರ್ಜಿ ಸಲ್ಲಿಸದ ಕಾರಣ ಆತನಿಗೆ ಜಾಮೀನು ದೊರೆತಿಲ್ಲ.
ಮರಕುಂಬಿ ಅಸ್ಪೃಶ್ಯತೆ ಆಚರಣೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ 99 ಜನರಿಗೆ ಧಾರವಾಡ ಹೈ ಕೋರ್ಟ್ ಜಾಮೀನು ನೀಡಿದೆ. ಓರ್ವ ಮೃತಪಟ್ಟಿದ್ದು, ಎ1 ಆರೋಪಿ ಅರ್ಜಿ ಸಲ್ಲಿದ ಕಾರಣ ಜಾಮೀನು ಸಿಕ್ಕಿಲ್ಲ.
– ಉಮೇಶ ಮಾಳೆಕೊಪ್ಪ. ಅರ್ಜಿದಾರರ ಪರ ವಕೀಲ
ಇದನ್ನೂ ಓದಿ: High Court; ಸತೀಶ್ ಸೈಲ್ ಸೇರಿ ಇತರರಿಗೆ ರಿಲೀಫ್: ನಾಳೆ ಬಿಡುಗಡೆ ಸಾಧ್ಯತೆ