ಸಿದ್ದಾಪುರ: ಗ್ರಾಮ ವಿಕಾಸ ಸಮಿತಿ, ಜಲಭಾರತಿ ಕರ್ನಾಟಕ ಮತ್ತು ವಿವಿಧ ಸಂಘ ಸಂಸ್ಥೆಗಳ ಜಂಟಿ ಅಶ್ರಯದಲ್ಲಿ ನಿರಂತರ 15ದಿನಗಳಿಂದ ಪುರಣ ಪ್ರಸಿದ್ಧ ಸಿದ್ದಾಪುರ ಕಾಶಿಕಲ್ಲು ಕೆರೆಯು ಶ್ರಮದಾನ, ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
ಜೂ.2ರಂದು ನಡೆದ ಶ್ರಮದಾನದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಶ್ರಮದಾನದಲ್ಲಿ ಪಾಲ್ಗೊಂಡರು. ಮೇ. 19ರಂದು ಶ್ರಮದಾನಕ್ಕೆ ಚಾಲನೆ ನೀಡಲಾಗಿದ್ದು, ಕೆರೆಯಲ್ಲಿದ್ದ ಹೂಳು ಮೇಲಕ್ಕೆತ್ತುವ ಮೂಲಕ ಸ್ವಚ್ಛತೆ ನಡೆದಿದೆ.
ಪ್ರವಾಸಿ ತಾಣ: ಪ್ರತಿನಿತ್ಯ ಊರ ಹಾಗೂ ವಿವಿಧ ಪ್ರದೇಶಗಳಿಂದ ನೂರಕ್ಕೂ ಹೆಚ್ಚು ಜನರು ಹಾಗೂ ಪ್ರವಾಸಿಗರು ಈ ಕೆರೆಯನ್ನು ನೋಡಲು ಬರುತ್ತಾರೆ. ಇತಂಹ ಅಪೂರ್ವ ಕೆರೆ ಕರ್ನಾಟಕದ ಬೇರಾವ ಪ್ರದೇಶದಲ್ಲಿಯೂ ಕಾಣ ಸಿಗುವುದಿಲ್ಲ ಎನ್ನುತ್ತಾರೆ ಇಲ್ಲಿಗೆ ಬರುವ ವೀಕ್ಷಕರು. ಕಾಶಿಕಲ್ಲು ಕೆರೆಯು ಹೆದ್ದಾರಿಗೆ ತಾಗಿಕೊಂಡಿರುವುದರಿಂದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬಹುದು ಎನ್ನುವುದು ಸಾವರ್ಜನಿಕರ ಅಭಿಪ್ರಾಯವಾಗಿದೆ.
ಜಲಭಾರತಿ ಕುಂದಾಪುರ ತಾಲೂಕು ಪ್ರಮುಖ್ ಆರ್ಗೋಡು ಶ್ರೀಕಾಂತ ಶೆಣೈ, ಶ್ರಮದಾನ ಸಮಿತಿಯ ಉಸ್ತುವಾರಿ ಚಂದ್ರಾನಂದ ಶೆಟ್ಟಿ, ತಾ. ಪಂ. ಸದಸ್ಯ ಎಸ್.ಕೆ. ವಾಸುದೇವ ಪೈ, ಉದ್ಯಮಿ. ಡಿ. ಗೋಪಾಲಕೃಷ್ಣ ಕಾಮತ್, ಸಿದ್ದಾಪುರ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಎಸ್. ಪಾಂಡುರಂಗ ಪೈ, ಸದಸ್ಯರಾದ ಶ್ರೀಕಾಂತ ನಾಯಕ್ ಐರಬೈಲು, ಪ್ರತಾಪ ಕಿಣಿ, ಸತ್ಯನಾಥ ಆಚಾರ್ಯ, ಗೋಪಾಲ ಕಾಂಚನ್, ಚಂದ್ರಕಾಂತ ಪೈ, ಶ್ರೀಧರ್ ಐತಾಳ್, ಮಹೇಶ್ ರಾವ್, ರತ್ನಾಕರ ನಾಯಕ್ ಅಂಸಾಡಿ, ಭಾಸ್ಕರ್ ಸಿದ್ದಾಪುರ, ಜಲಭಾರತೀಯ ಉಡುಪಿ ಜಿಲ್ಲಾ ಪ್ರಮುಖ್ ಅಶೋಕ್, ಕರ್ಣಾಟಕ ಬ್ಯಾಂಕ್‌ನ ಪ್ರಬಂಧಕ ಶ್ರೀನಿವಾಸ ಶೆಣೈ, ಹಿರಿಯರಾದ ವೆಂಕಟರಾಯ ಶೆಣೈ, ಜಿ. ಪಂ. ಸದಸ್ಯ ರೋಹಿತ್‌ಕುಮಾರ ಶೆಟ್ಟಿ, ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಉಪಾಧ್ಯಕ್ಷ ಭರತ್ ಕಾಮತ್, ಸದಸ್ಯರಾದ ಕೃಷ್ಣ ಪೂಜಾರಿ, ಕೆ. ಸತೀಶಕುಮಾರ ಶೆಟ್ಟಿ, ಮಂಜುನಾಥ ಕುಲಾಲ ಜನ್ಸಾಲೆ, ಪ್ರದೀಪ ಹೆಗ್ಡೆ, ಶೇಖರ ಕುಲಾಲ, ವೈ. ಸದಾನಂದ ಶೆಟ್ಟಿ, ಗೋಪಾಲ ಶೆಟ್ಟಿ, ಉಷಾ ಕಿಣಿ, ಜಲಜ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ವಲಯ ಮೇಲ್ವಿಚಾರಕ ಗಿರೀಶ್, ಸೇವಾಪ್ರತಿನಿಧಿಗಳಾದ ಸ್ವಾತಿ, ಪ್ರಭಾವತಿ, ಜ್ಯೋತಿ, ಭಾರತೀಯ ಕಿಸಾನ್ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷ ವಿ. ನಾಗಪ್ಪ ಶೆಟ್ಟಿ ಬಾಳೆಬೇರು, ಹಿರಿಯ ನಾಗರಿಕರ ವೇದಿಕೆಯ ಕೋಶಾಧಿಕಾರಿ ಎಚ್. ರಂಗನಾಥ ಉಡುಪ, ಎ. ಬಾಲಚಂದ್ರ ಭಟ್ ಮೊದಲಾದವರು ಶ್ರಮದಾನದಲ್ಲಿ ಪಾಲ್ಗೊಂಡರು.