Advertisement

ಅರಕೇರಾ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಿದ್ಧಲಿಂಗ ಮಹಾಸ್ವಾಮಿ ಶಿವೈಕ್ಯ

03:57 PM Aug 21, 2020 | keerthan |

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಅರಕೇರಾ (ಕೆ) ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಿದ್ಧಲಿಂಗ ಮಹಾಸ್ವಾಮಿಗಳು ಇಂದು ದೇಹ ತ್ಯಾಗ ಮಾಡಿದ್ದಾರೆ.

Advertisement

2 ಅಕ್ಟೋಬರ್ 1972ರಲ್ಲಿ ಯಾದಗಿರಿ ತಾಲೂಕಿನ ಬಾಚವಾರದಲ್ಲಿ ಮಾತೋಶ್ರೀ ಅನಂತಮ್ಮ ಶರಣಪ್ಪರ ಉದರದಲ್ಲಿ ಜನ್ಮಿಸಿದ ಪೂಜ್ಯರು, ಬಾಲ ಬ್ರಹ್ಮಚಾರಿಯಾಗಿ 1986 ರಲ್ಲಿ ತನ್ನ 14 ನೇ ವಯಸ್ಸಿನಲ್ಲಿ ಬಸವಾನಂದ ಮಹಾಸ್ವಾಮಿಗಳಿಂದ ದೀಕ್ಷೆ ಪಡೆದರು.

ಈ ಭಾಗದ ಭಕ್ತರು ದೂರದ ಹುಬ್ಬಳ್ಳಿಗೆ ತೆರಳಿ ಸಿದ್ಧಾರೂಢರ ದರ್ಶನ ಪಡೆಯಲು ಕಷ್ಟಸಾಧ್ಯ ಎನ್ನುವುದು ಅರಿತ ಶ್ರೀಗಳು, ಸಿದ್ಧಾರೂಢರ ದರ್ಶನ ಭಾಗ್ಯ ಇಲ್ಲಿಯೇ ಸಿಗಲು ಮಠದ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದರು ಎನ್ನಲಾಗಿದೆ.

ಮೊದಲಿಗೆ ಹುಟ್ಟೂರು ಬಾಚವಾರದಲ್ಲಿಯೇ ಮಠವೊಂದನ್ನು ಆರಂಭಿಸಿದ್ದ ಶ್ರೀ, 2000-2001ರಲ್ಲಿ ಅರಕೇರಾವನ್ನು “ಅರಿವಿನ ಕೆರೆ”ಯಾಗಿ ಪರಿವರ್ತಿಸಲು ಸತತ ನೇರ ನಡೆ, ನುಡಿಯ ಅಕ್ಷರ ಕ್ರಾಂತಿಯ ಮೂಲಕ ಭಕ್ತರಲ್ಲಿ ಅಂಧಕಾರ, ಮೌಢ್ಯ ಹೋಗಲಾಡಿಸಲು ಈವರೆಗೆ ಶ್ರಮಿಸಿದರುವುದು ಅವಿಸ್ಮರಣೀಯ.

Advertisement

ಆರೂಢರ ಸ್ಮರಿಸಿ ಸಾವಿರಾರು ವಚನ, ಆಧ್ಯಾತ್ಮಿಕ ಗ್ರಂಥಗಳನ್ನು ಬರೆದಿದ್ದು ಜ್ಞಾನ ಭಾಸ್ಕರ, ಆರೂಢರ ವಚನಾಮೃತ,ಸಹಸ್ರ ಸಹಸ್ರ ನುಡಿ ಮುತ್ತುಗಳು, ಸಂತರ ಸಂದೇಶ, ಮರಣದಿಂ(ದ) ಮುನ್ನೇನು, ಕಥಾಮೃತಧಾರೆ, ಸುಖದ ಸೂತ್ರ, ಸ್ತೋತ್ರಮಾಲೆ ಹಾಗೂ ಶ್ರೀ ಆರೂಢರ ಸಾಕ್ಷಾತ್ಕಾರ ಹೀಗೆ ಸಾಕಷ್ಟು ಜ್ಞಾನ ಭಂಡಾರವನ್ನೇ ಭಕ್ತರಿಗೆ ಉಣಬಡಿಸಿದ್ದಾರೆ.

ಹುಟ್ಟು ಸಾವಿಗೆ ಬೇಸತ್ತವನಿಗೆ ಕೆಟ್ಟ ಹೋಗುವ ದೇಹ ಕಂಡು ಸಂಶಯಪಟ್ಟವಗೆ, ನಿಷ್ಠೆ ಗುರುದೈವದಲ್ಲಿ ಸದಾ ಇಟ್ಟವನಿಗೆ ಗಟ್ಟಿಯಾಗಿ ಮೋಕ್ಷ ಕಟ್ಟಿಟ್ಟ ಬುತ್ತಿ ನೋಡೆಂದ ಆರೂಢ! ಎನ್ನುವ ಅರ್ಥ ಗರ್ಭಿತವಾದ ವಚನದ ಮೂಲಕ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next