Advertisement

ವಿದ್ಯಾರ್ಥಿಗಳ ಆಕ್ರಂದನ, ಕಣ್ಣೀರು

12:50 AM Jan 23, 2019 | Team Udayavani |

ತುಮಕೂರು: ಶ್ರೀಮಠದಲ್ಲಿ ವಿದ್ಯಾರ್ಥಿಗಳ ಅಕ್ರಂದನ ಮುಗಿಲು ಮುಟ್ಟಿತ್ತು. ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ವೇಳೆಯಲ್ಲೂ ಮಕ್ಕಳು ಕಣ್ಣೀರು ಹಾಕಿದ್ದರು. ಶ್ರೀಗಳ ಲಿಂಗಕಾಯ ಮೆರವಣೆಗೆ ವೇಳೆಯಲ್ಲಿ ಶಿವನಾಮವನ್ನು ಜಪಿಸುತ್ತಿದ್ದ ವಿದ್ಯಾರ್ಥಿಗಳ ಕಣ್ಣು ತೇವವಾಗಿತ್ತು. ನಮ್ಮೊಂದಿಗೆ ಇದ್ದ ದೇವರನ್ನೇ ಕಳೆದುಕೊಂಡಿದ್ದೇವೆ ಎಂಬ ಸೂತಕದ ಛಾಯೆ ಇಡೀ ವಿದ್ಯಾರ್ಥಿ ಸಮೂಹದಲ್ಲೇ ಮಡಗಟ್ಟಿತ್ತು. ಕಿರಿಯ ಶ್ರೀಗಳಂತೂ ಇಡೀ ದಿನ ಮೌನಕ್ಕೆ ಜಾರಿದ್ದರೂ, ಶ್ರೀಗಳ ಲಿಂಗಕಾಯದ ಪಕ್ಕದಲ್ಲೆ ಕುಳಿತಿದ್ದರೂ, ಆಗಾಗೆ ಶ್ರೀಗಳನ್ನು ನೆನೆದು ಭಾವುಕರಾಗುತ್ತಿದ್ದರು. ಅವರ ಕಣ್ಣಲ್ಲಿ ನೀರು ಹರಿಯುತ್ತಿದ್ದದ್ದು ಕಂಡುಬರುತ್ತಿತ್ತು.ಮಠದ ಆವರಣದಲ್ಲಿ ಮಕ್ಕಳ ಪಾಲಕ, ಪೋಷಕರ ಹಾಗೂ ಭಕ್ತರ ಶ್ರೀಗಳ ಸೇವೆ ನೆನೆದು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

Advertisement

ಗೋಸಲಾ ಸಿದ್ಧೇಶ್ವರ ವೇದಿಕೆಯಲ್ಲಿ ಶ್ರೀಗಳ ಲಿಂಗಶರೀರದ ಅಂತಿಮ ದರ್ಶನ ಆರಂಭವಗುತ್ತಿದ್ದಂತೆ ವಿವಿಧ ಗಾಯನ ತಂಡದಿಂದ ಶಿವಕೀರ್ತಿ, ಶಿವಸ್ತುತಿ, ಸಿದ್ಧಗಂಗಾ ಮಠ, ಶಿವಕುಮಾರ ಸ್ವಾಮೀಜಿಯವರ ಕುರಿತದ ಭಕ್ತಿಗೀತೆಗಳ ಗಾಯನ ದಿನಪೂರ್ತಿ ನಡೆದಿದೆ. ಸೋಮವಾರ ಸಂಜೆ 4 ಗಂಟೆಗೆ ಆರಂಭವಾಗಿದ್ದ ಭಕ್ತಿಗೀತೆಗಳ ಗಾಯನ ಮಂಗಳವಾರ ರಾತ್ರಿಯವರಗೂ ನಿರಂತರವಾಗಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next