Advertisement
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 18ಕ್ಕೆ ಇಥೆನಾಲ್ ಘಟಕ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಫೆಬ್ರವರಿ ಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಿದ್ದಗೊಂಡ ನಂತರ ಪ್ರಧಾನಿ ಅವರಿಂದ ಉದ್ಘಾಟನೆಯಾಗಲಿದ್ದು, ಪ್ರಧಾನಿಮಂತ್ರಿಗಳ ದಿನಾಂಕ ಪಡೆಯುವಂತೆ ಕೇಂದ್ರದ ಸಚಿವ ರಾದ ಪ್ರಹ್ಲಾದ ಜೋಶಿ, ಭಗವಂತ ಖೂಬಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಹೇಗಿದ್ದರೂ ಚುನಾವಣೆ ಇರುವುದರಿಂದ 15 ದಿನಕ್ಕೊಮ್ಮೆ ರಾಜ್ಯಕ್ಕೆ ಬರುವುದಾಗಿ ಹೇಳಿದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ಉದ್ಘಾಟನೆಗೆ ಮುಹೂರ್ತ ಸಿಗುವ ಸಾಧ್ಯತೆಗಳಿವೆ ಎಂದರು.
ತಾವಂತು ಸಚಿವ ಸ್ಥಾನ ಕೇಳಿಯೇ ಇಲ್ಲ. ಹೀಗಾಗಿ ಅಸಮಾಧಾನ ಮಾತೇ ಬರದು. ಆದ್ದರಿಂದ ಬೆಳಗಾವಿ ಅಧಿವೇಶನದಿಂದ ದೂರ ಉಳಿಯುವ ಪ್ರಶ್ನೆಯೇ ಎದುರಾಗದು. ಪಂಚಮಸಾಲಿ ಮೀಸಲಾತಿ, ವಕೀಲರ ರಕ್ಷಣೆ ಕಾಯ್ದೆ, ಓಪಿಎಸ್ ಪದ್ದತಿ ಜಾರಿ, ಕೋಲಿ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಿಕೆ, ಕುರುಬರಿಗೆ ಎಸ್ಟಿಗೆ ಸೇರಿಸುವುದು ಸೇರಿದಂತೆ ಹತ್ತಾರು ವಿಷಯಗಳ ಕುರಿತು ಪ್ರಮುಖ ವಾಗಿ ಚರ್ಚಿಸಬೇಕಿದೆ ಎಂದರು.
Related Articles
Advertisement
ಪಿಎಸ್ಐ ಹಗರಣದ ಪ್ರಮುಖ ಕಿಂಗ್ ಪಿನ್ ಮಹಾಂತೇಶ ಪಾಟೀಲ್ ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದರಿಂದ ಮಾಜಿ ಶಾಸಕ ಕಾಂಗ್ರೆಸ್ ನ ಅಲ್ಲಮಪ್ರಭು ಪಾಟೀಲ್ ಸನ್ಮಾನ ಮಾಡಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದ ಅವರು, ಬಿಟ್ಟಿದ್ದರೆ ತುಲಾಭಾರ ಸಹ ಮಾಡ್ತಾರೆ ಕಾಂಗ್ರೆಸ್ ನವರು. ಹಗರಣ ಎಲ್ಲ ಆಯಾಮಗಳಿಂದ ಸಂಪೂರ್ಣ ತನಿಖೆ ನಡೆಯುತ್ತಿಲ್ಲ. ಐಪಿಎಸ್ ಅಧಿಕಾರಿ ಪೌಲ್ ಅವರನ್ನು ಬಂಧಿಸಲಾಗಿದೆ.ಇದರ ಹಿಂದೆ ಅನೇಕ ರಾಜಕಾರಣಿಗಳಿದ್ದಾರೆ. ಮಾಜಿ ಮುಖ್ಯಮಂತ್ರಿ ಮಗ ಸಹ ಇದ್ದಾನೆ. ಇದೇ ಕಾರಣಕ್ಕೆ ತನಿಖೆ ಆಳವಾಗಿ ನಡೆಯುತ್ತಿಲ್ಲ. ಆದರೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.
ಕಾಂಗ್ರೆಸ್ ನವರು ಹಿಂದೂಗಳ ಹತ್ಯೆ ಯಾದ ಬಗ್ಗೆ ಒಮ್ಮೆಯಾದರೂ ಖಂಡಿಸಿದ್ದಾರೆಯೇ. ಅದೇ ಅಲ್ಪಸಂಖ್ಯಾತ ರ ಕೊಲೆಯಾದರೆ ಗಂಟಲು ಹರಿದುಕೊಳ್ಳುತ್ತಾರೆ. ಭಯೋತ್ಪಾದನೆ ಬೆಂಬಲವೇ ಇವರ ಅಜೆಂಡಾವಾಗಿದೆ ಎಂದು ಟೀಕಿಸಿದರು.