ದೇವನಹಳ್ಳಿ: ತಾಲೂಕಿನ ಬುಳ್ಳಹಳ್ಳಿಯ ಆಲದಮರ, ದೇವಸ್ಥಾನಗಳಲ್ಲಿ ಆಶ್ರಯ ಪಡೆದಿದ್ದ 200ಕ್ಕೂ ಹೆಚ್ಚು ಕೋತಿಗಳು ಅಸ್ವಸ್ಥಗೊಂಡಿದ್ದು, ಕುಳಿತಿದ್ದ ಜಾಗದ ಲ್ಲಿಯೇ ತೂಕಡಿಸಿ ಹಾಗೆಯೇ ಸಾವಿಗೀಡಾಗುತ್ತಿವೆ. ಕೋತಿಗಳ ಸ್ಥಿತಿ ಕಂಡು ಜನ ಮರುಕಪಡುತ್ತಿದ್ದಾರೆ.
ಗ್ರಾಮದ ಆಲದ ಮರ, ದೇವಸ್ಥಾನಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಕೋತಿಗಳಿದ್ದು, ಗ್ರಾಮಸ್ಥರು ಅವುಗಳಿಗೆ ಬನ್, ಬಿಸ್ಕಿಟ್, ಬಾಳೆಹಣ್ಣನ್ನು ನೀಡುತ್ತಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಗ್ರಾಮಸ್ಥರು ನೀಡಿದ ತಿಂಡಿಗಳನ್ನು ತಿನ್ನದೆ ಇದ್ದ ಜಾಗದಲ್ಲಿಯೇ ಅಸ್ವಸ್ಥಗೊಂಡಿವೆ. ವಿಚಿತ್ರವಾಗಿ ವರ್ತಿಸುತ್ತಿವೆ. ಪಶು ವೈದ್ಯರ ಚಿಕಿತ್ಸೆಗೂ ಕೋತಿಗಳು ಸ್ಪಂದಿಸಿಲ್ಲ. ಕಳೆದ ಮೂರು ದಿನಗಳ ಹಿಂದೆ ಮೂರ್‍ನಾಲ್ಕು ಕೋತಿಗಳು ಮೃತಪಟ್ಟಿವೆ.
ಗ್ರಾಮದ ಸುತ್ತಮುತ್ತ ಶರತ್ ದ್ರಾಕ್ಷಿ ಬೆಳೆಯು ತ್ತಿದ್ದು, ಅವುಗಳನ್ನು ಸೇವಿಸಿ ಕೋತಿಗಳು ಹೀಗೆ ಆಡು ತ್ತಿರಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಶರತ್ ದ್ರಾಕ್ಷಿ ಇಲ್ಲಿನ ಕೋತಿಗಳಿಗೆ ಹೊಸ ದಲ್ಲ ಎಂದೂ ಹೇಳಲಾಗಿದೆ. ಆದರೆ, ದ್ರಾಕ್ಷಿಗಳಿಗೆ ಸಿಂಪ ಡಿಸಿದ ಔಷಧಿ ಪರಿಣಾಮ ದಿಂದ ಹೀಗೆ ಆಗಿರಬೇಕು ಎಂಬುದು ಕೆಲ ಪ್ರಾಣಿಪ್ರಿಯರ ಅಭಿಪ್ರಾಯ.
ಈ ಕುರಿತು ಪ್ರತಿಕ್ರಿಯಿಸಿರುವ ಪಶುವೈದ್ಯೆ ಡಾ.ಪ್ರಮೀಳಾ, ಕೆಲವು ಕೋತಿಗಳಿಗೆ ಚಿಕಿತ್ಸೆ ನೀಡ ಲಾಗಿದೆ. ಕೋತಿಗಳ ಮಲ, ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ನಂತರ ಈ ಸ್ಥಿತಿಗೆ ಕಾಯಿಲೆ ಕಾರಣವೋ ಅಥವಾ ದ್ರಾಕ್ಷಿಗೆ ಸಿಂಪಡಿಸಿದ ಔಷಧಿ ಕಾರಣವೋ ಎಂದು ಗೊತ್ತಾಲಿದೆ ಎಂದು ಹೇಳಿದ್ದಾರೆ.
ಗ್ರಾಮಸ್ಥ ನಾರಾಯಣಸ್ವಾಮಿ ಮಾತನಾಡಿ, “ಕೋತಿಗಳಿಗೆ ಏನಾದರೂ ಮಂಗನ ಕಾಯಿಲೆ ಬಂದಿ ದೆಯೇ ಅಥವಾ ಆಹಾರದಲ್ಲಿ ವ್ಯತ್ಯಾಸವಾಗಿ ದೆಯೇ ಎಂಬುವುದನ್ನು ಪಶುವೈದ್ಯರು ಕಂಡು ಹಿಡಿದು ಕೂಡಲೇ ಸೂಕ್ತ ಚಿಕಿತ್ಸೆ ನೀಡಿ ಕೋತಿಗಳ ರಕ್ಷಣೆ ಮಾಡಬೇಕು,” ಎಂದಿದ್ದಾರೆ.