ಉಡುಪಿ: ಆರೋಗ್ಯ ಸಿಬಂದಿ ಮತ್ತು ಸಂವಹನ ಕ್ಷೇತ್ರದಲ್ಲಿರುವ ಜನರು ಪರಸ್ಪರ ಬೆರೆತು ಸಂವಹನ ವೃದ್ಧಿಸಬೇಕು ಎಂದು ಮಣಿಪಾಲ ಆಸ್ಪತ್ರೆ ಆಡಳಿತ ನಿರ್ದೇಶಕ ಹಾಗೂ ಸಿಇಒ ಡಾ| ಅಜಯ್ ಭಕ್ಷಿ ಹೇಳಿದರು.
ಅವರು ಮಾ. 24ರಂದು ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ ಕಾಲೇಜಿನಲ್ಲಿ ಆರಂಭವಾದ ಎರಡು ದಿನಗಳ ಆರೋಗ್ಯ ವಿಷಯಗಳ ಕುರಿತ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿರುವ ಅನೇಕರಿಗೆ ಸಮರ್ಥವಾಗಿ ಸಂವಹನ ನಡೆಸುವ ಕೌಶಲ ಹೆಚ್ಚಿಸುವಲ್ಲಿ ಈ ಎರಡು ದಿನಗಳ ಕಾರ್ಯಕ್ರಮ ಅತ್ಯಂತ ಫಲಪ್ರದವಾಗಲಿದೆ ಎಂದು ಅವರು ಹೇಳಿದರು.
ಆರೋಗ್ಯ ಸಂವಹನ ಕ್ಷೇತ್ರದಲ್ಲಾಗುತ್ತಿರುವ ನವನವೀನ ಆವಿಷ್ಕಾರ ಸಾಮಾನ್ಯರಿಗೆ ತಲುಪುವಂತೆ ಮಾಡುವ ವಿಶೇಷ ಉದ್ದೇಶ ಈ ಸಮ್ಮೇಳನದ್ದಾಗಿದೆ. ಸಂವಹನ ಕ್ಷೇತ್ರದಲ್ಲಿರುವ ಮಂದಿಗೆ ಜಾಗೃತಿ ಮೂಡಿಸಲು ಇದು ಸಹಕಾರಿಯಾಗಲಿದೆ ಎಂದು ಸ್ಕೂಲ್ ಆಫ್ ಕಮ್ಯುನಿಕೇಶನ್ ನಿರ್ದೇಶಕರಾದ ಡಾ| ನಂದಿನಿ ಲಕ್ಷ್ಮೀಕಾಂತ ಹೇಳಿದರು.
ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಸಹಾಯಕ ನಿರ್ದೇಶಕರಾದ ಡಾ| ಪದ್ಮಾರಾಣಿ ಉಪಸ್ಥಿತರಿದ್ದರು.ಸಂವಹನ ವಿದ್ಯಾರ್ಥಿಗಳಾದ ರಿಚಾ ಸ್ವಾಗತಿಸಿ, ನೇಹಾ ವಂದಿಸಿದರು. ತೇಜಶ್ರೀ ಕಾರ್ಯಕ್ರಮ ನಿರೂಪಿಸಿದರು.