Advertisement

ಮಹಿಳಾ ತಂಡವನ್ನು ತಪ್ಪಾಗಿ ಅಭಿನಂದಿಸಿ ಬೈಸಿಕೊಂಡ ಶುಕ್ಲಾ!

06:25 AM Jul 23, 2017 | |

ಮುಂಬೈ: ಕೆಲವು ದಿನಗಳ ಹಿಂದಷ್ಟೇ ಮಿಥಾಲಿ ರಾಜ್‌ರನ್ನು ಅಭಿನಂದಿಸುವ ವೇಳೆ ಕೊಹ್ಲಿ, ಟ್ವೀಟರ್‌ನಲ್ಲಿ ದೀಪ್ತಿ ಶರ್ಮ ಚಿತ್ರ ಹಾಕಿ ವಿವಾದಕ್ಕೊಳಗಾಗಿದ್ದರು. ಈಗ ಐಪಿಎಲ್‌ ಮುಖ್ಯಸ್ಥ ರಾಜೀವ್‌ ಶುಕ್ಲಾ ಸರದಿ. 

Advertisement

ವಿಶ್ವಕಪ್‌ ಸೆಮಿಫೈನಲ್‌ಗೇರಿರುವ ಮಹಿಳಾ ಕ್ರಿಕೆಟ್‌ ತಂಡವನ್ನು ಅಭಿನಂದಿಸುವ ಭರದಲ್ಲಿ ಅವರು ಮಾಡಿರುವ ತಪ್ಪು ಟ್ವೀಟರ್‌ನಲ್ಲಿ ಹಿಗ್ಗಾಮುಗ್ಗಾ ಟೀಕೆಗೊಳಗಾಗಿದೆ. ಮಹಿಳಾ ವಿಶ್ವಕಪ್‌ ಫೈನಲ್‌ಗೇರಿರುವ ಭಾರತ ತಂಡ ಎನ್ನುವ ಬದಲು ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೇರಿರುವ ಭಾರತ ತಂಡ ಎಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟ್ವೀಟಿಗರು ಟೀಕಾಸ್ತ್ರಗಳ ಸುರಿಮಳೆಗರೆದಿದ್ದಾರೆ. ಒಬ್ಬರಂತೂ ನೀವು ಭಾರತದ ಅಧ್ಯಕ್ಷರಾಗಿದ್ದಕ್ಕೆ ಅಭಿನಂದನೆಗಳು ಎಂದು ಶುಕ್ಲಾಗೆ ವ್ಯಂಗ್ಯವಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮಿಥಾಲಿ ರಾಜ್‌ರನ್ನು ಅಭಿನಂದಿಸುವ ವೇಳೆ ಕೊಹ್ಲಿ, ಟ್ವೀಟರ್‌ನಲ್ಲಿ ದೀಪ್ತಿ ಶರ್ಮ ಚಿತ್ರ ಹಾಕಿ ವಿವಾದಕ್ಕೊಳಗಾಗಿದ್ದರು. ಈಗ ಐಪಿಎಲ್‌ ಮುಖ್ಯಸ್ಥ ರಾಜೀವ್‌ ಶುಕ್ಲಾ ಸರದಿ. 

ವಿಶ್ವಕಪ್‌ ಸೆಮಿಫೈನಲ್‌ಗೇರಿರುವ ಮಹಿಳಾ ಕ್ರಿಕೆಟ್‌ ತಂಡವನ್ನು ಅಭಿನಂದಿಸುವ ಭರದಲ್ಲಿ ಅವರು ಮಾಡಿರುವ ತಪ್ಪು ಟ್ವೀಟರ್‌ನಲ್ಲಿ ಹಿಗ್ಗಾಮುಗ್ಗಾ ಟೀಕೆಗೊಳಗಾಗಿದೆ. ಮಹಿಳಾ ವಿಶ್ವಕಪ್‌ ಫೈನಲ್‌ಗೇರಿರುವ ಭಾರತ ತಂಡ ಎನ್ನುವ ಬದಲು ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೇರಿರುವ ಭಾರತ ತಂಡ ಎಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟ್ವೀಟಿಗರು ಟೀಕಾಸ್ತ್ರಗಳ ಸುರಿಮಳೆಗರೆದಿದ್ದಾರೆ. ಒಬ್ಬರಂತೂ ನೀವು ಭಾರತದ ಅಧ್ಯಕ್ಷರಾಗಿದ್ದಕ್ಕೆ ಅಭಿನಂದನೆಗಳು ಎಂದು ಶುಕ್ಲಾಗೆ ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next