Advertisement

ಪದಾರ್ಪಣ ಪಂದ್ಯದಲ್ಲೇ ಶಿವಂ ಮಾವಿ ಮಿಂಚು; ಭಾರತಕ್ಕೆ ರೋಚಕ ಗೆಲುವು

11:21 PM Jan 03, 2023 | Team Udayavani |

ಮುಂಬಯಿ: ನೂತನ ವರ್ಷವನ್ನು ಭಾರತ ತಂಡ ರೋಚಕ ಗೆಲುವಿನೊಂದಿಗೆ ಆರಂಭಿಸಿದೆ. ಶ್ರೀಲಂಕಾ ವಿರುದ್ಧ ಮಂಗಳವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಎರಡು ರನ್ನುಗಳಿಂದ ಗೆದ್ದು ಸಂಭ್ರಮಿಸಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 162 ರನ್‌ ಪೇರಿಸಿದರೆ, ಏಷ್ಯಾ ಕಪ್‌ ಚಾಂಪಿಯನ್‌ ಶ್ರೀಲಂಕಾ 20 ಓವರ್‌ಗಳಲ್ಲಿ 160ಕ್ಕೆ ಆಲೌಟ್‌ ಆಯಿತು.

ಭಾರತ ಡೆತ್‌ ಓವರ್‌ಗಳಲ್ಲಿ ದಿಟ್ಟ ಬ್ಯಾಟಿಂಗ್‌ ನಡೆಸಿ ಸವಾಲಿನ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. ದೀಪಕ್‌ ಹೂಡಾ-ಅಕ್ಷರ್‌ ಪಟೇಲ್‌ ಬ್ಯಾಟಿಂಗ್‌ ಹೀರೋಗಳೆನಿಸಿದರು.

ಬೌಲಿಂಗ್‌ ಆಕ್ರಮಣದ ವೇಳೆ ಮೊದಲ ಪಂದ್ಯವಾಡಿದ ಶಿವಂ ಮಾವಿ ಮಿಂಚಿನ ದಾಳಿ ಸಂಘಟಿಸಿದರು. ಲಂಕೆಗೆ ಆರಂಭದಲ್ಲೇ ಅವಳಿ ಆಘಾತವಿಕ್ಕಿ ಭಾರತಕ್ಕೆ ಮೇಲುಗೈ ಒದಗಿಸಿದರು. 22 ರನ್ನಿಗೆ 4 ವಿಕೆಟ್‌ ಕಿತ್ತು ತಮ್ಮ ಮೊದಲ ಪಂದ್ಯವನ್ನು ಸ್ಮರಣೀಯಗೊಳಿಸಿದರು.

ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌ ಕೂಡ ವಾಂಖೇಡೆ ಟ್ರ್ಯಾಕ್‌ನ ಭರಪೂರ ಲಾಭವೆತ್ತಿದರು.

Advertisement

ಕೊನೆಯ ಹಂತದಲ್ಲಿ ಶ್ರೀಲಂಕಾ ಗೆಲುವಿನ ಬಾಗಿಲಿಗೆ ಬಂತಾದರೂ ಅದೃಷ್ಟ ಕೈಕೊಟ್ಟಿತು. ಅಕ್ಷರ್‌ ಪಟೇಲ್‌ ಅವರ ಅಂತಿಮ ಓವರ್‌ನಲ್ಲಿ 13 ರನ್‌ ತೆಗೆಯಲು ಸಾಧ್ಯವಾಗಲಿಲ್ಲ. ಈ ಓವರ್‌ನಲ್ಲಿ ಎರಡು ರನೌಟ್‌ ಸಂಭವಿಸಿತು.

ಸ್ಕೋರುಪಟ್ಟಿ
ಭಾರತ 
ಇಶಾನ್‌ ಕಿಶನ್‌ ಸಿ ಧನಂಜಯ ಬಿ ಹಸರಂಗ 37
ಶುಭಮನ್‌ ಗಿಲ್‌ ಎಲ್‌ಬಿಡಬ್ಲ್ಯು ತೀಕ್ಷಣ 7
ಸೂರ್ಯಕುಮಾರ್‌ ಸಿ ರಾಜಪಕ್ಸ ಬಿ ಕರುಣಾರತ್ನೆ 7
ಸಂಜು ಸ್ಯಾಮ್ಸನ್‌ ಸಿ ಮದುಶಂಕ ಬಿ ಧನಂಜಯ 5
ಹಾರ್ದಿಕ್‌ ಪಾಂಡ್ಯ ಸಿ ಮೆಂಡಿಸ್‌ ಬಿ ಮದುಶಂಕ 29
ದೀಪಕ್‌ ಕೂಡಾ ಅಜೇಯ 41
ಅಕ್ಷರ್‌ ಪಟೇಲ್‌ ಅಜೇಯ 31
ಇತರೆ 5
ವಿಕೆಟ್‌ ಪತನ: 1-27, 2-38, 3-46, 4-77, 5-94.
ಬೌಲಿಂಗ್‌
ಕಸುನ್‌ ರಜಿತ -4- 0- 47- 0
ದಿಲ್ಶನ್‌ ಮದುಶಂಕ 4- 0- 35 -1
ಮಹೀಶ್‌ ತೀಕ್ಷಣ 4- 0- 29 -1
ಚಮಿಕ ಕರುಣಾರತ್ನೆ 3- 0- 22- 1
ಧನಂಜಯ ಡಿ ಸಿಲ್ವ 1 -0- 6- 1
ವನಿಂದು ಹಸರಂಗ 4- 0- 22- 1

ಶ್ರೀಲಂಕಾ
ಪಥುಮ್‌ ನಿಸ್ಸಂಕ ಬಿ ಮಾವಿ 1
ಕುಸಲ್‌ ಮೆಂಡಿಸ್‌ ಸಿ ಸ್ಯಾಮ್ಸನ್‌ ಬಿ ಹರ್ಷಲ್‌ 28
ಧನಂಜಯ ಡಿ ಸಿಲ್ವ ಸಿ ಸ್ಯಾಮ್ಸನ್‌ ಬಿ ಮಾವಿ 8
ಚರಿತ ಅಸಲಂಕ ಸಿ ಇಶಾನ್‌ ಬಿ ಮಲಿಕ್‌ 12
ಭನುಕ ರಾಜಪಕ್ಸ ಸಿ ಪಾಂಡ್ಯ ಬಿ ಹರ್ಷಲ್‌ 10
ದಸುನ್‌ ಶಣಕ ಸಿ ಚಹಲ್‌ ಬಿ ಮಲಿಕ್‌ 45
ವನಿಂದು ಹಸರಂಗ ಸಿ ಪಾಂಡ್ಯ ಬಿ ಮಾವಿ 21
ಚಮಿಕ ಕರುಣರತ್ನ ಔಟಾಗದೆ 23
ಮಹೀಶ್‌ ತೀಕ್ಷಣ ಸಿ ಸೂರ್ಯ ಬಿ ಮಾವಿ 1
ಕಸುನ್‌ ರಜಿತ ರನೌಟ್‌ 5
ದಿಲ್ಶನ್‌ ಮದುಶಂಕ ರನೌಟ್‌ 0
ಇತರ 6
ಒಟ್ಟು (20 ಓವರ್‌ಗಳಲ್ಲಿ ಆಲೌಟ್‌) 160
ವಿಕೆಟ್‌ ಪತನ: 1-12, 2-24, 3-47, 4-51, 5-68, 6-108, 7-129, 8-132, 9-159.
ಬೌಲಿಂಗ್‌:
ಹಾರ್ದಿಕ್‌ ಪಾಂಡ್ಯ 3-0-12-0
ಶಿವಂ ಮಾವಿ 4-0-22-4
ಉಮ್ರಾನ್‌ ಮಲಿಕ್‌ 4-0-27-2
ಯಜುವೇಂದ್ರ ಚಹಲ್‌ 2-0-26-0
ಹರ್ಷಲ್‌ ಪಟೇಲ್‌ 4-0-41-2
ಅಕ್ಷರ್‌ ಪಟೇಲ್‌ 3-0-31-0

Advertisement

Udayavani is now on Telegram. Click here to join our channel and stay updated with the latest news.

Next