Advertisement

IPL Retentions: ಗುಜರಾತ್‌ನಲ್ಲಿ ಪ್ರಮುಖರ ಉಳಿಕೆಗಾಗಿ ವೇತನ ಕಡಿತಕ್ಕೆ ಒಪ್ಪಿದ ಗಿಲ್‌ ?

08:40 PM Oct 30, 2024 | Team Udayavani |

ನವದೆಹಲಿ: ತಂಡದಲ್ಲಿ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಸಲುವಾಗಿ ಗುಜರಾಟ್‌ ಟೈಟಾನ್ಸ್‌ನ ನಾಯಕ ಶುಭಮನ್‌ ಗಿಲ್‌ ತನ್ನ ವೇತನವನ್ನೇ ಕಡಿತ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಶುಭಮನ್‌ರನ್ನು ಫ್ರಾಂಚೈಸಿ 2ನೇ ಆದ್ಯತೆಯ ಆಟಗಾರನಾಗಿ ಉಳಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ. ಐಪಿಎಲ್‌ ಫ್ರಾಂಚೈಸಿಗಳು ಉಳಿಕೆ ಆಟಗಾರರ ಅಂತಿಮ ಪಟ್ಟಿ ಪ್ರಕಟಿಸಲು ಗುರುವಾರ ಅಂತಿಮ ದಿನವಾಗಿದೆ.

Advertisement

ಶುಭಮನ್‌ ಗಿಲ್‌ ಅವರ ವೇತನ ತ್ಯಾಗದಿಂದಾಗಿ ಫ್ರಾಂಚೈಸಿ ಈ ಬಾರಿ ತಂಡದ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹೀಗಾಗಿ ತಾರಾ ಸ್ಪಿನ್ನರ್‌ ಅಫ್ಘಾನಿಸ್ತಾನದ ರಶೀದ್‌ ಖಾನ್‌ (18 ಕೋಟಿ ರೂ.), ಶುಭಮನ್‌ (14 ಕೋಟಿ), ಬ್ಯಾಟರ್‌ ಸಾಯಿ ಸುದರ್ಶನ್‌ (11 ಕೋಟಿ), ಅನ್‌ ಕ್ಯಾಪ್ಡ್ ಆಟಗಾರರಾದ ರಾಹುಲ್‌ ತೆವಾಟಿಯಾ (18 ಕೋಟಿ), ಶಾರುಖ್‌ ಖಾನ್‌ (4 ಕೋಟಿ) ಅವರನ್ನು ತಂಡದಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೆಕೆಆರ್‌ನಿಂದ ನಾಯಕ ಶ್ರೇಯಸ್‌ ಬಿಡುಗಡೆ?
ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ ತಂಡವನ್ನು ಕಳೆದ ಬಾರಿ ಮುನ್ನಡೆಸಿದ್ದ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನೇ ಕೈಬಿಡಲು ತಂಡ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಉಳಿಕೆ ವಿಚಾರದಲ್ಲಿ ಫ್ರಾಂಚೈಸಿ ಮತ್ತು ಶ್ರೇಯಸ್‌ ಮಧ್ಯೆ ನಡೆದ ಮಾತುಕತೆ ವಿಫ‌ಲವಾದ ಕಾರಣ ಅವರು ತಂಡ ತೊರೆಯುವ ಸಾಧ್ಯತೆಯಿದೆ. 2022ರ ಹರಾಜಿನ ವೇಳೆ ಶ್ರೇಯಸ್‌ ಅವರನ್ನು ಕೆಕೆಆರ್‌ 12.25 ಕೋಟಿ ರೂ.ಗೆ ಖರೀದಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next