Advertisement

ಸಾರ್ಲೋರ್‌ಲಕ್ಸ್‌ ಓಪನ್‌ ಫೈನಲ್‌ ಪ್ರವೇಶಿಸಿದ ಶುಭಂಕರ್‌

06:15 AM Nov 05, 2018 | Team Udayavani |

ಸಾರ್‌ಬ್ರುಕೆನ್‌ (ಜರ್ಮನಿ): ಭಾರತದ ಬ್ಯಾಡ್ಮಿಂಟನ್‌ ತಾರೆ ಶುಭಂಕರ್‌ ಡೇ ಚೀನದ ರೆನ್‌ ಪೆನೊಬ್‌ ಅವರನ್ನು ಸೋಲಿಸಿ “ಸಾರ್ಲೋರ್‌ಲಕ್ಸ್‌ ಓಪನ್‌ ಟೂರ್ನಿ’ಯ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಶುಭಂಕರ್‌ ಅವರು ರೆನ್‌ ಪೆನೊYಬ್‌ ವಿರುದ್ಧ 21-18, 11-21, 24-22 ಅಂತರದ ಗೆಲುವು ದಾಖಲಿಸಿದರು. ಮೊದಲ ಗೇಮ್‌ನ ಆರಂಭಲ್ಲಿ 3-2 ಅಂಕಗಳ ಮುನ್ನಡೆ ಹೊಂದಿದ್ದ ಶುಭಂಕರ್‌ ಸತತ 6 ಅಂಕಗಳನ್ನು ಗಳಿಸಿ ಮುನ್ನಡೆಯನ್ನು 9-2ಕ್ಕೆ ಏರಿಸಿದರು. 2ನೇ ಗೇಮ್‌ನ ಆರಂಭದಲ್ಲಿ 4-4ರ ಸಮಬಲ ಆಟ ಕಂಡುಬಂತು. ಬಳಿಕ ರೆನ್‌ ಸತತ 7 ಅಂಕಗಳನ್ನು ಸಂಪಾದಿಸಿ 11-4ಕ್ಕೆ ಮುನ್ನಡೆ ವಿಸ್ತರಿಸಿದರು. ಶುಭಂಕರ್‌ ಸಾಕಷ್ಟು ಪ್ರತಿರೋಧ ಒಡ್ಡುವ ಪ್ರಯತ್ನ ಮಾಡಿದರಾದರೂ ಸಫ‌ಲರಾಗಲಿಲ್ಲ.

ಈ ಸೋಲಿನಿಂದ ಎಚ್ಚೆತ್ತುಕೊಂಡ ಶುಭಂಕರ್‌ 3ನೇ ಗೇಮ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ 7-3 ಅಂಕಗಳ ಮುನ್ನಡೆ ಕಾಯ್ದುಕೊಂಡರು. ಇಬ್ಬರ ನಡುವೆ ಅಂಕ ಗಳಿಸಲು ತೀವ್ರ ಪೈಪೋಟಿಯೇ ನಡೆಯಿತು. ಒಂದರ ಹಿಂದೆ ಒಂದರಂತೆ ಇಬ್ಬರೂ ಅಂಕ ಗಳಿಸುತ್ತ ಬಂದರು. 20-18 ಮುನ್ನಡೆಯಲ್ಲಿದ್ದಾಗ  ಶುಭಂಕರ್‌ ಮ್ಯಾಚ್‌ ಪಾಯಿಂಟ್‌ ಅವಕಾಶವನ್ನು ಕೈಚೆಲ್ಲಿದ್ದರು. ಅನಂತರ ಎರಡು ಮ್ಯಾಚ್‌ ಪಾಯಿಂಟ್‌ಗಳನ್ನು ಉಳಿಸಿಕೊಂಡು 24-22 ಅಂತರದಿಂದ ಜಯಿಸಿದರು.

ಮತ್ತೂಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ‌ ಮಾಜಿ ಯೂರೋಪಿಯನ್‌ ಚಾಂಪಿಯನ್‌ ರಾಜೀವ್‌ ಔಸೆಫ್ ಅವರು ಟೆಮಾ ಜೂನಿಯರ್‌ ಪೊಪೋವ್‌ ಅವರನ್ನು 21-8, 19-21, 21-19 ಗೇಮ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದ್ದಾರೆ.  ಫೈನಲ್‌ನಲ್ಲಿ ಶುಭಂಕರ್‌-ರಾಜೀವ್‌ ಮುಖಾಮುಖೀಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next