ಮಾಂಡವ್ಯ ಮಹರ್ಷಿಗಳ ತಪೋಭೂಮಿ ಮಾಗಡಿ. ಶ್ರೀರಂಗನಾಥಸ್ವಾಮಿಯ ಪುಣ್ಯ ಕ್ಷೇತ್ರವೂ ಹೌದು. ಈ ಭೂ ಪ್ರದೇಶವು ಅಷ್ಟ ತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಕಣ್ವ ನದಿಗಳಿಂದ ಕೂಡಿದೆ. ಸುಂದರ ಗಿರಿ ಕಾನನಗಳಿಂದಲೂ ಕೂಡಿರುವ ರಮ್ಯತಾಣವಾಗಿದೆ. ಈ ದಿವ್ಯ ಕ್ಷೇತ್ರ.
ತಿರುಪತಿ ಶ್ರೀನಿವಾಸಸ್ವಾಮಿ ಆಜ್ಞಾನುಸಾರ ಮಾಂಡವ್ಯ ಮಹರ್ಷಿಗಳು ಸ್ವರ್ಣಾದ್ರಿ ಎಂಬ ಹೆಸರಿನಿಂದ ಕರೆಯಲ್ಪಡುವ ತಿರುಮಲೆ ಶ್ರೀ ಪಶ್ಚಿಮ ವೆಂಕಟಾಚಲಪತಿ ಸ್ವಾಮಿಯನ್ನು ಪ್ರತಿಷ್ಟಾಪಿಸಿ ಆರಾಧಿಸಿದ್ದರು ಎಂದು ಬ್ರಹ್ಮಾಂಡ ಪುರಾಣದಿಂದ ತಿಳಿಯುತ್ತದೆ.
ಚೋಳರ ರಾಜ, ರಾಜೇಂದ್ರ ಚೋಳ ಎಂಬ ರಾಜನು 11-12ನೇ ಶತಮಾನದಲ್ಲಿ ಮಾಗಡಿ ಪ್ರದೇಶಕ್ಕೆ ಬಂದಾಗ ಇಲ್ಲಿ ಕಾಣುವ ಸುಂದರ ಗಿರಿಕಾನನಗಳಿಗೆ ಆಕರ್ಷಿತನಾಗುತ್ತಾನೆ. ಜೊತೆಗೆ ಮಾಂಡವ್ಯ ಮಹರ್ಷಿಗಳ ಪವಿತ್ರ ಕ್ಷೇತ್ರವೆಂದು ತಿಳಿದು ಆನಂದದಿಂದ ಮಾಗಡಿ ಪಟ್ಟಣವನ್ನು ನಿರ್ಮಿಸಿದನು ಎಂದು ಹೇಳಲಾಗಿದೆ. ಮಾ ಎಂದರೆ ಲಕ್ಷಿ$¾à, ಗಡಿ ಎಂದರೆ ಸ್ಥಳ. ಶ್ರೀ ಲಕ್ಷಿ$¾àನಿವಾಸವಾಗಿದ್ದರಿಂದ ಮಾಗಡಿ ಎಂಬ ಹೆಸರು ಬಂತು ಎಂದು ಹೇಳಲಾಗಿದೆ. ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯವು ಮಾಂಡವ್ಯ ಮಹರ್ಷಿಗಳ ತಪೋ¸ೂಮಿ ಹಾಗೂ ವಿಜಯನಗರದ ಮಹಾಗಡಿಯಾಗಿದ್ದರಿಂದ ಮಾಗಡಿ ಎಂದು ಹೆಸರು ಬಂತು ಎಂದು ಪ್ರತೀತಿಯೂ ಇದೆ.
ಮಾಗಡಿ ಶ್ರೀರಂಗನಾಥಸ್ವಾಮಿ ದೇವಾಲಯದ ಬಗ್ಗೆ 1524 ಮತ್ತು 1579 ರ ಶಾಸನಗಳಿಂದ ಹಾಗೂ ದಾನ ಪತ್ರಗಳಲ್ಲಿ ಶ್ರೀರಂಗನಾಥಸ್ವಾಮಿಯನ್ನು “ತಿರುವೆಂಗಳನಾಥ’ ಎಂದು ಕರೆಯಲ್ಪಡುತ್ತಿತ್ತು. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕಾಲದಿಂದೀಚಗೆ ತಿರುಮಲೆ ಶ್ರೀರಂಗನಾಥಸ್ವಾಮಿ ಎಂದು ನಾಡಿನಾದ್ಯಂತ ಪ್ರಸಿದ್ಧಿ ಪಡೆದು ಪ್ರಖ್ಯಾತಗೊಂಡಿದೆ.
ಶ್ರೀರಂಗನಾಥಸ್ವಾಮಿ ಅನ್ನದಾಸೋಹ ಪ್ರತಿ ಶನಿವಾರ ಮತ್ತು ಭಾನುವಾರ ನಡೆಯುತ್ತದೆ. ಜೊತೆಗೆ ಶ್ರೀರಂಗ ಸೇವಾ ಟ್ರಸ್ಟ್ ಹೆಸರಿನಲ್ಲಿ ಸಹ ಅನ್ನದಾಸೋ ನಡೆದಿದೆ. ಟ್ರಸ್ಟ್ ವತಿಯಿಂದ ದೇವರಿಗೆ ಸುಮಾರು 2 ಕೋಟಿಗೂ ಹೆಚ್ಚು ವಜ್ರ ಖಚಿತ ಬಂಗಾರದ ಕಿರೀಟ, ಉತ್ಸವ ಮೂರ್ತಿಗೂ ಕಿರೀಟ, ಇತರೆ ಅಭರಣಗಳನ್ನು ನೀಡಿದೆ. ನಿತ್ಯ ವಿಶೇಷ ಅಲಂಕಾರ, ಶಾಸ್ತ್ರೋಕ್ತವಾಗಿ ಧಾರ್ಮಿಕ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಿರುವುದರಿಂದ ಈ ದೇವಾಲಯವು ದಿನೇ ದಿನೇ ಭಕ್ತರನ್ನು ಆಕರ್ಷಿಸಿದೆ.
ಕಪ್ಪು ಶಿಲೆಯಿಂದ ಕೂಡಿರುವ 4.5 ಎತ್ತರದ ಮೂಲ ವಿಗ್ರಹ ಅತ್ಯಂತ ಸುಂದರವಾಗಿದೆ. ಈ ವಿಗ್ರಹ ಮುಂದೆ ಮಾಂಡವ್ಯ ಮಹರ್ಷಿಗಳು ಆರಾಧಿಸಿದ ಸಾಲಿಗ್ರಾಮವಿದೆ. ಈ ಸಾಲಿಗ್ರಾಮಕ್ಕೆ ಎಷ್ಟೇ ಕೊಡ ನೀರು ಅಭಿಷೇಕ ಮಾಡಿದರೂ ಎಲ್ಲಿ ಸೇರುತ್ತದೆ ಎಂದು ಯಾರರಿಗೂ ತಿಳಿಯದು. ದೇಗುಲದ ಆವರಣದ ನವರಂಗದಲ್ಲಿ ಶ್ರೀದೇವಿ, ಭೂದೇವಿ ಸಮೇತರಾಗಿ ಪವಡಿಸುತ್ತಿರವ ನಿತ್ಯಲೋಲ ಶ್ರೀರಂಗನಾಥಸ್ವಾಮಿಯ ಕಂಚಿನ ಸುಂದರ ಮೂರ್ತಿ ಇದೆ. ದೇಗುಲಕ್ಕೆ ಪ್ರವೇಶವಾಗುತ್ತಿದ್ದಂತೆ ಆಲದ ಮುಂಭಾಗ ಎಡ ಭಾಗದಲ್ಲಿ ಗರುಡ, ಬಲದಲ್ಲಿ ಆಂಜನೇಯಸ್ವಾಮಿ ಮೂರ್ತಿಯಿದೆ. ಸುತ್ತಲೂ ರಾಮಾನುಜಾಚಾರ್ಯರ ಮತ್ತು ಆಳ್ವರುಗಳು ಮತ್ತು ವೈಷ್ಣವ ಭಕ್ತರ ಪ್ರತಿಮೆಗಳಿವೆ. ಮೂಲ ಮೂರ್ತಿ ಹಿಂಭಾಗ ಕಲ್ಲಿನ ಗೋಡೆಯಲ್ಲಿ ವಿರಾಜಮಾನವಾಗಿ ಮಲಗಿರುವ ಭಂಗಿಯಲ್ಲಿ ಶ್ರೀರಂಗನಾಥ ಸ್ವಾಮಿ ಇದೆ. ಈ ಮೂರ್ತಿ ಬೆಳೆಯೋರಂಗ, ಮಕ್ಕಳ ರಂಗ, ಮುದ್ದು ಮಾಗಡಿರಂಗ, ಮೂಲ ರಂಗ ಎಂದು ವಿವಿಧ ಹೆಸರುಗಳಿಂದ ಕರೆಯುವುದುಂಟು. ಆನತಿ ದೂರದಲ್ಲಿ ಸ್ಥಂಭಗಿರಿ ಎಂಬ ಹೆಸರಿನಿಂದ ಕೂಡಿರುವ ಶ್ರೀ ಯೋಗನರಸಿಂಹಸ್ವಾಮಿ ಬೆಟ್ಟವಿದೆ.
ಬ್ರಹ್ಮರಥೋತ್ಸವಕ್ಕೆ ಪೂಜೆ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಭಕ್ತರು ಜಮಾಯಿಸುತ್ತಾರೆ.
ತಿರುಮಲೆ ಶ್ರೀನಿವಾಸ್