Advertisement

ಮತಾಂತರಿಗಳ ಸದೆಬಡಿಯಲು ಶ್ರೀರಾಮ ಸೇನೆ ಸಿದ್ಧ

06:57 PM Oct 18, 2021 | Team Udayavani |

 ಗದಗ: ಆರೋಗ್ಯ, ಬಡತನದ ಹೆಸರಲ್ಲಿ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹಿಂದೂಗಳ ಮತಾಂತರಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೆ ತರಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಒತ್ತಾಯಿಸಿದರು.

Advertisement

ವಿಜಯದಶಮಿ ಅಂಗವಾಗಿ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಗಣವೇಷಧಾರಿಗಳ ಪಥ ಸಂಚಲನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದ ಅನೇಕ ಲಂಬಾಣಿ ತಾಂಡಾಗಳು ಕ್ರಿಶ್ಚಿಯನ್‌ ಮಯವಾಗಿವೆ. ಗದಗ ಜಿಲ್ಲೆಯೊಂದರಲ್ಲೇ ಸುಮಾರು 10 ಸಾವಿರ ಹಿಂದೂಗಳು ಮತಾಂತರಕ್ಕೆ ಒಳಗಾಗಿದ್ದಾರೆ. ಶಾಸಕ ಗೂಳಿಹಟ್ಟಿ ಶೇಖರ್‌ ಅವರ ತಾಯಿ ಎರಡು ವರ್ಷಗಳಿಂದ ಕ್ರಿಶ್ಚಿಯನ್‌ ಮತವನ್ನು ಸ್ವೀಕರಿಸಿದ್ದಾರೆ ಎಂದು ಸ್ವತಃ ಶಾಸಕರೇ ಸದನದಲ್ಲಿ ಹೇಳಿಕೊಂಡಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ನಿಮಗೆ ಮತ ನೀಡಲು ನಿಮ್ಮದೇ ಸಮುದಾಯದ ಜನರಿರುವುದಿಲ್ಲ. ಮಠಕ್ಕೆ ಬರಲು ಭಕ್ತರೂ ಇರುವುದಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಶಾಸಕರು, ಶ್ರೀಮಠಗಳ ಪೂಜ್ಯರು ಅರಿತುಕೊಳ್ಳಬೇಕು ಎಂದು ಎಚ್ಚರಿಸಿದರು. ಬ್ರಿಟಿಷ್‌ ಆಡಳಿತದಿಂದಲೂ ದೇಶದಲ್ಲಿ ಮತಾಂತರದ ಪ್ರಯತ್ನಗಳು ನಡೆಯುತ್ತಿವೆ. ಮೊದಲಿಗೆ ದಲಿತ ಸಮುದಾಯಗಳನ್ನು ಗುರಿಯಾಗಿಸಿದ್ದರು. ಇತ್ತೀಚೆಗೆ ಹಳ್ಳಿಹಳ್ಳಿಗೂ ಮತಾಂತರದ ಭೂತ ವ್ಯಾಪಿಸಿದೆ. ಬಡತನ, ಅನಾರೋಗ್ಯಕ್ಕೆ ತುತ್ತಾದವರ ಮನೆಗಳಲ್ಲಿ ದೇವರ ಪ್ರಾರ್ಥನೆ ಹೆಸರಲ್ಲಿ ಮತಾಂತರ ಮಾಡಲಾಗುತ್ತಿದೆ. ಅಂತಹ ಮತಾಂತರಿಗಳನ್ನು ಸದೆಬಡಿಯಲು ಶ್ರೀರಾಮ ಸೇನೆ ಪಡೆ ಸಿದ್ಧವಾಗುತ್ತಿದೆ. ಮತಾಂತರಕ್ಕೆ ಯತ್ನಿಸುವವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಗುಡುಗಿದರು.

ಮತಾಂತರಕ್ಕೆ ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾದರೂ, ಅಂತಹವರನ್ನು ತಕ್ಷಣ ಬಂಧಿ ಸಬೇಕು. ಕನಿಷ್ಟ ಒಂದು ವರ್ಷದವರೆಗೆ ಜಾಮೀನು ದೊರೆಯಬಾರದು. ಅಂತಹ ಕಟ್ಟುನಿಟ್ಟಾಗಿ ಮತಾಂತರ ನಿಷೇಧ ಕಾಯ್ದೆ ರೂಪಿಸಿ, ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಯಾವ ಕೈ ನಾಯಕರು ಶಿಕ್ಷೆ ಅನಭವಿಸಿದ್ದಾರೆ?: ಸ್ವಾತಂತ್ರÂ ಸೇನಾನಿ ವೀರ ಸಾವರಕರ್‌ ಅವರು 25 ವರ್ಷಗಳ ಕಾಲ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿದ್ದಾರೆ. ಕಾಂಗ್ರೆಸ್‌ನ ಯಾವ ಗಾಂ ಧಿ ಶಿಕ್ಷೆ ಅನುಭವಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ ಮುತಾಲಿಕ್‌, ಕಾಂಗ್ರೆಸ್‌ ಪಕ್ಷ ಮತ ಬ್ಯಾಂಕ್‌ಗಾಗಿ ಮುಸ್ಲಿಮರನ್ನು ತಲೆ ಮೇಲೆ ಕೂರಿಸಿಕೊಂಡಿದೆ. ಸ್ವಾತಂತ್ರÂದ ಇತಿಹಾಸ ಅರಿಯದ ಮುಸ್ಲಿಮರು ದೇಶ ಭಕ್ತ ಸಾವರಕರ್‌ ಭಾವಚಿತ್ರದ ಮೆರವಣಿಗೆಗೆ ವಿರೋ ಧಿಸುತ್ತಿದ್ದಾರೆ. ಪಾಕಿಸ್ತಾನ, ಬಾಂಗ್ಲಾದವರಂತೆ ವರ್ತಿಸುತ್ತಿದ್ದಾರೆ. ಬೆಂಗಳೂರಿನ ಬಡಾವಣೆಯೊಂದರಲ್ಲಿ ಶ್ರೀರಾಮನ ರಥಯಾತ್ರೆಗೆ ಅಡ್ಡಿಪಡಿಸಿ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ ಓಣಿಯಲ್ಲೇ ಬೃಹತ್‌ ಬೈಕ್‌ ರ್ಯಾಲಿ ನಡೆಸಿ, ಶ್ರೀರಾಮ ಸೇನೆ ಶಕ್ತಿ ಪ್ರದರ್ಶಿಸಿದೆ.

ಬಿಜೆಪಿ ವಿರುದ್ಧ ಮುತಾಲಿಕ್‌ ಕಿಡಿ:

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ಅವರ ಮನೆಯನ್ನು ಕೊಳ್ಳೆ ಹೊಡೆದು, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ದಾಳಿಕೋರರಿಂದ ಬೆದರಿದ ಲಕ್ಷಾಂತರ ಹಿಂದೂಗಳು ತಮ್ಮ ಊರು, ಏರಿಯಾಗಳನ್ನು ತೊರೆದಿದ್ದಾರೆ. ಆದರೆ, ಘಟನೆ ಕುರಿತು ಆಯೋಗ ನೇಮಿಸುವುದಕ್ಕೆ ಕೇಂದ್ರ ಸರಕಾರ ಸೀಮಿತವಾಗಿದೆ. ಇದರಿಂದಾಗಿ ಬಿಜೆಪಿ ಬೆಂಬಲಿಸಿದವರಿಗೆ ರಕ್ಷಣೆ ಇಲ್ಲವೆಂಬ ಸಂದೇಶ ಹೋಗುತ್ತಿದೆ. ಹಿಂದೂಗಳು ಕೇವಲ ಬಿಜೆಪಿಗೆ ಮತ ಚಲಾಯಿಸಲಷ್ಟೇ ಸಾಕೇ ಎಂದು ತರಾಟೆಗೆ ತೆಗೆದುಕೊಂಡರು. ಕ್ಯಾಂಡಲ್‌, ಕೇಕ್‌ ಕತ್ತರಿಸುವ ಸಂಸ್ಕೃತಿ ನಮ್ಮದಲ್ಲ. ದೀಪ ಬೆಳಗಿಸಿ, ಆರತಿ ಮಾಡುವುದು ಹಿಂದೂ ಸಂಸ್ಕೃತಿ. ನಮ್ಮ ಸಂಸ್ಕೃತಿ ಮತ್ತು ಆಚರಣೆಗಳ ಹಿಂದಿನ ವೈಜ್ಞಾನಿಕತೆಯನ್ನು ಅರಿತು, ಆಚರಿಸಬೇಕು ಎಂದು ಕರೆ ನೀಡಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next