ಪಣಜಿ: ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಪಕ್ಷ ಜವಾಬ್ದಾರಿ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಬರಲು ಸಿದ್ಧ ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.
ಮರಾಠಿ ಪತ್ರಕರ್ತರ ಸಂಘ ಹಾಗೂ ಗೋವಾ ಶ್ರಮಿಕ್ ಪತ್ರಕರ್ತರ ಸಂಘ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೇದಿಕೆಯಲ್ಲಿ ಜಯಂತ್ ಸಂಭಾಜಿ, ಗುರುದಾಸ್ ಸವಾಲ್, ವಾಮನ್ ಪ್ರಭು, ಗೋವಾ ರಾಜ್ಯ ಶೃಮಿಕ ಪತ್ರಕರ್ತರ ಸಂಘದ ಅಧ್ಯಕ್ಷ ರಾಜ್ ತಿಲಕ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
”ಪಕ್ಷವು ನನಗೆ ನಾಲ್ಕು ಬಾರಿ ಸಚಿವ ಸ್ಥಾನ ನೀಡಿದೆ. ಇಷ್ಟೆಲ್ಲಾ ಆದರೂ ನಾನು ಪಕ್ಷದಿಂದ ಯಾವುದೇ ಸ್ಥಾನವನ್ನು ಕೇಳಿರಲಿಲ್ಲ. ಪಕ್ಷ ಅವಕಾಶ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಸೇರಲು ನಾನೂ ಸಿದ್ಧ. ಸಚಿವ ಸಂಪುಟವಾಗಲಿ, ರಾಜ್ಯ ಸಚಿವರಾಗಲಿ ಜನಸೇವೆಯೇ ಮುಖ್ಯ. ನಾನು ಸಚಿವ, ಸಂಸದ, ಶಾಸಕ ಅಥವಾ ಇನ್ನಾವುದೇ ಹುದ್ದೆಯಲ್ಲದಿದ್ದರೂ ಜನರ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಶ್ರೀಪಾದ ನಾಯ್ಕ ನುಡಿದರು.
ರಾಜ್ಯದ ಅಭಿವೃದ್ಧಿಗೆ ತಮ್ನಾರ್ ನಂತಹ ಯೋಜನೆಗಳು ಅಗತ್ಯ. ಇದಕ್ಕೆ ಕೆಲವು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಪರಿಸರ ಸಂರಕ್ಷಿಸುತ್ತಲೇ ಈ ಯೋಜನೆ ಮಾಡಲು ಸಾಧ್ಯ. ಒಂದು ಮರ ಕಡಿದರೆ ಸಾವಿರ ಮರಗಳನ್ನು ನೆಡಬಹುದು. ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬಹುದು. ನಾವು ಕರ್ನಾಟಕ ಸರ್ಕಾರದೊಂದಿಗೆ ಸಾಮರಸ್ಯದ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ಕುರಿತು ಶೀಘ್ರದಲ್ಲೇ ಗೋವಾ ರಾಜ್ಯ ಸರ್ಕಾರದೊಂದಿಗೆ ಸಭೆ ನಡೆಸಲಿದ್ದೇವೆ ಎಂದು ಶ್ರೀಪಾದ ನಾಯ್ಕ ನುಡಿದರು.
ಇದನ್ನೂ ಓದಿ: Vihan- Amar; ಜೂ.21ಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಹಾಡು