Advertisement

ಮಂಗಲೋತ್ಸವ: ತುಳು-ಕನ್ನಡಿಗರ ಸಹಕಾರ ಅಗತ್ಯ

03:49 PM Nov 09, 2017 | |

ಮೀರಾರೋಡ್‌: ನಲಸೋಪರ ಪಶ್ಚಿಮದಲ್ಲಿ ನ. 11ರಂದು ನಡೆಯಲಿರುವ ಶ್ರೀನಿವಾಸ ಮಂಗಲೋತ್ಸವ ಕಾರ್ಯಕ್ರಮದಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲುಮೀರಾ-ಭಾಯಂದರ್‌ ನಗರದ ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಸಮಾಲೋಚನ ಸಭೆಯು ನ. 5ರಂದು ಪಲಿಮಾರು ಮಠದ ಬಾಲಾಜಿ ಸನ್ನಿಧಿಯ ಸಭಾಂಗಣದಲ್ಲಿ ಜರಗಿತು.

Advertisement

ವಿರಾರ್‌ ಶಂಕರ್‌ ಶೆಟ್ಟಿ ಅವರ ನೇತೃತ್ವ ಹಾಗೂ ಸಾಯಿಧಾಮ್‌ ಟ್ರಸ್ಟ್‌ ಇದರ ಸಹಭಾಗಿತ್ವದಲ್ಲಿ ಕಳೆದ 5 ವರ್ಷಗಳಿಂದ ಥಾಣೆ ಹಾಗೂ ಮುಂಬಯಿ ಮಹಾ ನಗರದ ತುಳು ಕನ್ನಡಿಗರ ಸರ್ವ ಸಂಘ-ಸಂಸ್ಥೆಗಳ ಹಾಗೂ ಇತರ ಭಕ್ತಾದಿಗಳ ಸಮ್ಮುಖದಲ್ಲಿ ವಿವಿಧೆಡೆ ನಡೆಯುತ್ತಾ ಬಂದಿರುವ ಶ್ರೀನಿವಾಸ ದೇವರ ಪವಿತ್ರ ಸೇವಾ ಕಾರ್ಯವು ಪ್ರಸ್ತುತ ವರ್ಷ ನಲಸೋಪರದಲ್ಲಿ ನಡೆಯಲಿದ್ದು, ಈ ಬಗ್ಗೆ ಮೀರಾ-ಭಾಯಂದರ್‌ ಮಹಾ ನಗರದ ಸಮಸ್ತ ತುಳು-ಕನ್ನಡಿಗರ ಸಹಕಾರ ವನ್ನು ಯಾಚಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿರಾರ್‌ ಶಂಕರ್‌ ಶೆಟ್ಟಿ ಅವರು, ಇಂತಹ ಮಂಗಲ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಒಂದು ರೀತಿಯ ಪುಣ್ಯದ ಕೆಲಸ.

ಈ ಬಗ್ಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಕಾರ್ಯಕ್ರಮ ಅಭೂತಪೂರ್ವವಾಗಿ ನೆರವೇರಲು ಸರ್ವರ ಸಹಕಾರ ಅಗತ್ಯ.ಭಾಗಿಯಾಗುವ ಎಲ್ಲರಿಗೂ ಸೇವಾ- ಸೌಲಭ್ಯಗಳನ್ನುಸಮರ್ಪಕವಾಗಿ ನೀಡುವಲ್ಲಿ ಎಲ್ಲರ ಸಹಕಾರ ಯಾಚಿಸಿದರು. ಅಂದು ನಡೆಯಲಿರುವ ಪೂಜಾ ಕೈಂಕರ್ಯಗಳ ಬಗ್ಗೆ ವಿವರಿಸಿದ ಅವರು, ಮಂಗಲೋತ್ಸವದ ಯಶಸ್ಸಿಗಾಗಿ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.

ಪ್ರಾರಂಭದಲ್ಲಿ ಬಾಲಾಜಿ ಸನ್ನಿಧಿಯ ಟ್ರಸ್ಟಿ ವೇದಮೂರ್ತಿ ರಾಧಾಕೃಷ್ಣ ಭಟ್‌ ಅವರು ಆಶೀರ್ವಚನ ನೀಡಿ ಶುಭ ಹಾರೈಸಿದರು. ವಿಶೇಷ ಆಮಂತ್ರಿತರಾಗಿ ಆಗಮಿಸಿದ ನೂತನ ನಗರ ಸೇವಕ ಅರವಿಂದ ಎ. ಶೆಟ್ಟಿ ಅವರನ್ನು ಸಂಘ-ಸಂಸ್ಥೆಗಳ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಎ. ಶೆಟ್ಟಿ ಅವರು, ಇಲ್ಲಿನ ತುಳು ಕನ್ನಡಿಗರು ಇಂತಹ ಕಾರ್ಯಕ್ರಮದಲ್ಲಿ ಏಕತೆಯಿಂದ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದರು.

Advertisement

ಕರ್ನಾಟಕ ಮಹಾಮಂಡಲ, ಕನ್ನಡ ಸೇವಾ ಸಂಘ, ಕರ್ನಾಟಕ ಸಂಘ ಮೀರಾರೋಡ್‌, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿ, ಮೊಗವೀರ ವ್ಯವಸ್ಥಾಪಕ ಮಂಡಲಿ ಸ್ಥಳೀಯ ಸಮಿತಿ, ಬಂಟ್ಸ್‌ ಫೋರಂ ಮೀರಾ-ಭಾಯಂದರ್‌, ಅಯ್ಯಪ್ಪ ಭಕ್ತವೃಂದ, ಹನುಮಾನ್‌ ಭಜನ ಮಂಡಳಿ, ದುರ್ಗಾ ಭಜನ ಮಂಡಳಿ, ಶನೀಶ್ವರ ಸೇವಾ ಸಮಿತಿ, ತುಳುನಾಡ ಸಮಾಜ, ಆರಾಧನಾ ವೃಂದ, ತುಳು-ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌, ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌, ಭಾಯಂದರ್‌ ಸಮಿತಿಗಳು, ನಮ ಜವನೆರ್‌, ದುರ್ಗಾಪರಮೇಶ್ವರಿ ಭಕ್ತವೃಂದ, ಯಕ್ಷಲಹರಿ, ಲಕ್ಷ್ಮೀನಾರಾಯಣ ಭಜನ ಸಮಿತಿ, ವಿವೇಕ ಸಂಪದ, ನವ ತರುಣ ಮಿತ್ರ ಮಂಡಳಿ, ಯುವಬ್ರಿಗೇಡ್‌, ಮೀರಾ-ಡಹಾಣೂ ಬಂಟ್ಸ್‌ ಮೊದಲಾದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುರೇಶ್‌ ಶೆಟ್ಟಿ ಗಂಧರ್ವ, ಶಿವರಾಮ್‌ ಶೆಟ್ಟಿ, ಸಂತೋಷ್‌ ರೈ ಬೆಳ್ಳಿಪಾಡಿ, ದಿವಾಕರ ಶೆಟ್ಟಿ, ಸಂಪತ್‌ ಶೆಟ್ಟಿ, ಅರುಣ್‌ ಶೆಟ್ಟಿ ಸಾಂತೂರು, ರವೀಂದ್ರ ಶೆಟ್ಟಿ ದೇರಳಕಟ್ಟೆ, ಜಯರಾಮ್‌ ಶೆಟ್ಟಿ, ವೈ. ಶೆಟ್ಟಿ ಹೆಜಮಾಡಿ, ಮಹಾಬಲ ಸಮಾನಿ, ದಿನೇಶ್‌ ಶೆಟ್ಟಿ ಕಾಪು, ಚೇತನ್‌ ಶೆಟ್ಟಿ, ಗುಣಕಾಂತ್‌ ಕರ್ಜೆ, ರಾಜೇಶ್‌ ಶೆಟ್ಟಿ ಕಾಪು, ಸುರೇಶ್‌ ಎಸ್‌. ಶೆಟ್ಟಿ, ದಿವಾಕರ ಶೆಟ್ಟಿ ಪೊಸ್ರಾಲ್‌, ಸೂಡ ರವೀಂದ್ರ ಶೆಟ್ಟಿ, ನಾರಾಯಣ ಗೌಡ, ಶಾಲಿನಿ ಎಸ್‌. ಶೆಟ್ಟಿ, ವಸಂತಿ ಶೆಟ್ಟಿ, ಸುಜಾತಾ ಜಿ. ಶೆಟ್ಟಿ, ಸುಮಂಗಳಾ ಕಣಂಜಾರು, ಲೀಲಾ ಡಿ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸುಮತಿ ಆರ್‌. ಶೆಟ್ಟಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದ್ರಶೇಖರ ವಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಮೀರಾ-ಭಾಯಂದರ್‌ ಪರಿ ಸರದ ಭಕ್ತಾದಿಗಳಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಬಸ್‌ನ ವ್ಯವಸ್ಥೆಯನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಗುಣಕಾಂತ್‌ ಶೆಟ್ಟಿ ಕರ್ಜೆ (9967471372), ರವೀಂದ್ರ ಶೆಟ್ಟಿ ದೇರಳಕಟ್ಟೆ (9769934837), ರಾಜೇಶ್‌ ಶೆಟ್ಟಿ ಕಾಪು (9820953404), ಜಯಶ್ರೀ ಬಿ. ಶೆಟ್ಟಿ (8767925138), ಸುಮಂಗಳಾ ಕಣಂಜಾರು (9920931608), ಮೋಹಿನಿ ಪೂಜಾರಿ (7710978436) ಇವರನ್ನು ಸಂಪರ್ಕಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next