Advertisement

ಅತಿರುದ್ರ ಮಹಾಯಾಗಕ್ಕೆ ಸಂಕಲ್ಪ ಕೈಗೊಂಡ ಎಚ್‌ಡಿಡಿ

06:50 AM Jan 04, 2018 | Team Udayavani |

ಶೃಂಗೇರಿ: ಇಲ್ಲಿಯ ಶಾರದಾ ಪೀಠದ ಚಂದ್ರಶೇಖರ ಭಾರತಿ ಸಭಾಂಗಣದ ಯಾಗಶಾಲೆಯಲ್ಲಿ ಬುಧವಾರ ಆರಂಭಗೊಂಡ ಹತ್ತು ದಿನಗಳ ಅತಿರುದ್ರ ಮಹಾಯಾಗಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕುಟುಂಬ ಸದಸ್ಯರೊಂದಿಗೆ ಸಂಕಲ್ಪ ಕೈಗೊಂಡರು.

Advertisement

ಬೆಳಗ್ಗೆ ಶಾರದಾಂಬಾ ದೇವಸ್ಥಾನದ ಹೊರ ಆವರಣದ ವಿದ್ಯಾಶಂಕರ, ಸುಬ್ರಮಣ್ಯಸ್ವಾಮಿ, ಶಂಕರಾಚಾರ್ಯ, ತೋರಣ ಗಣಪತಿ ದೇಗುಲ, ಶಾರದಾಂಬಾ ದೇಗುಲಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಯಾಗಶಾಲೆಯಲ್ಲಿ ಉಭಯ ಜಗದ್ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. 

ಸಂಕಲ್ಪದಲ್ಲಿ ಚನ್ನಮ್ಮ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಎಂಎಲ್ಸಿ ಶರವಣ, ಜೆಡಿಎಸ್‌ ಮುಖಂಡರಾದ ಎಚ್‌.ಜಿ. ವೆಂಕಟೇಶ್‌, ಎಚ್‌.ಟಿ.ರಾಜೇಂದ್ರ,ಜಿ.ಜಿ.ಮಂಜುನಾಥ್‌, ಸುಂಕುರ್ಡಿ ವಿವೇಕಾನಂದ, ಹೆಗ್ಗದ್ದೆ ಶಿವಾನಂದರಾವ್‌ ಮತ್ತಿತರರು ಇದ್ದರು.

ಹತ್ತು ದಿನಗಳ ಕಾಲ ನಡೆಯುವ ಅತಿ ರುದ್ರ ಮಹಾಯಾಗದಲ್ಲಿ ಮಠದ ಅರ್ಚಕರಾದ ಕೃಷ್ಣ ಭಟ್‌, ಶಿವಕುಮಾರ ಶರ್ಮಾ ಸೇರಿದಂತೆ 250 ಕ್ಕೂ ಹೆಚ್ಚು ಋತ್ವಿಜರು ಭಾಗವಹಿಸುತ್ತಿದ್ದಾರೆ. ಜ.14 ರಂದು ಯಾಗದ ಪೂರ್ಣಾಹುತಿ ನಡೆಯಲಿದ್ದು, ದೇವೇಗೌಡರ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಅನಿತಾ, ರೇವಣ್ಣ, ಭವಾನಿ, ಪ್ರಜ್ವಲ್‌ ಸಹಿತ ಕುಟುಂಬ ವರ್ಗ ಪೂರ್ಣಾಹುತಿಯಲ್ಲಿ ಭಾಗವಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next