Advertisement
ಜೋನಸ್ ಮೇ 14ರ ರಾತ್ರಿ ಪೊಲೀಸ್ ಕಾರ್ಯಾಚರಣೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ಆರೋಪಿಯನ್ನು ಆತವಾಸವಾಗಿದ್ದ ಬಾಡಿಗೆ ಮನೆಗೆ ಕರೆದೊಯ್ದು ಮಹಜರು ನಡೆಸಿದರು. ಮನೆಯಲ್ಲಿ ಮಹಿಳೆಯ 4 ಉಂಗುರಗಳು ಹಾಸಿಗೆಯ ಅಡಿಯಲ್ಲಿ ಪತ್ತೆಯಾಗಿವೆ. ಕೊಲೆಗೆ ಸಂಬಂಧಿಸಿದ ಕೆಲವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಳಿಕ ಆತನನ್ನು ಶ್ರೀಮತಿ ಶೆಟ್ಟಿಯ ದೇಹದ ಭಾಗಗಳನ್ನು ಕತ್ತರಿಸಿ ಎಸೆದಿದ್ದ ವಿವಿಧ ತಾಣಗಳಿಗೆ ಕರೆದೊಯ್ದು, ಹೆಚ್ಚಿನ ಮಾಹಿತಿ ಪಡೆದರು.
ಶ್ರೀಮತಿ ಅವರನ್ನು ಕೊಲೆ ಮಾಡಿ ರಾತ್ರಿ ವೇಳೆ ತುಂಡರಿಸಿ ರುಂಡವನ್ನು ಕದ್ರಿ ಪಾರ್ಕ್ ಬಳಿ, ದೇಹದ ಭಾಗವನ್ನು ನಂದಿಗುಡ್ಡೆಯಲ್ಲಿ ಹಾಗೂ ಪಾದದ ಭಾಗವನ್ನು ಪಾದುವಾ ಶಾಲೆ ಎದುರಿನ ಶ್ರೀನಿವಾಸ ಮಲ್ಯ ಪಾರ್ಕ್‌ನಲ್ಲಿ ಹಾಗೂ ಶ್ರೀಮತಿ ಶೆಟ್ಟಿಯ ಸ್ಕೂಟರನ್ನು ನಾಗುರಿಯ ರಸ್ತೆ ಬದಿ ಗ್ಯಾರೇಜ್ ಒಂದರ ಬಳಿ ಎಸೆದಿದ್ದನು. ಸ್ಕೂಟರ್ ಕೀ ಅದೇ ಸ್ಥಳದಲ್ಲಿ ಪತ್ತೆಯಾಗಿದೆ. ಪಶ್ಚಾತ್ತಾಪ ಕಾಣಲಿಲ್ಲ
ಇಡೀ ನಗರವನ್ನೇ ಬೆಚ್ಚಿ ಬೀಳಿಸುವಂತೆ ಪೈಶಾಚಿಕ ರೀತಿಯಲ್ಲಿ ಕೊಲೆ ಮಾಡಿದ್ದರು ಕೂಡ ಪೊಲೀಸರ ವಿಚಾರಣೆ ಆರೋಪಿಯ ಮುಖ ದಲ್ಲಿ ಪಶ್ಚಾತ್ತಾಪ ಭಾವ ಕಂಡುಬರಲಿಲ್ಲ. ಕರೆದೊಯ್ದ ಕಡೆಯೆಲ್ಲ, ಅಲ್ಲಿ ರುಂಡ ಎಸೆದಿದ್ದೆ, ಇಲ್ಲಿ ಕಾಲು ಕತ್ತರಿಸಿ ಹಾಕಿದ್ದೆ ಎಂಬ ಧಾಟಿಯಲ್ಲಿ ಆರಾಮವಾಗಿ ಪೊಲೀಸರು ಕೇಳುತ್ತಿದ್ದ ಪ್ರಶ್ನೆ ಗಳಿಗೆ ಉತ್ತರಿಸುತ್ತಿದ್ದ. ಕೆಲವು ಕಡೆ ನಗು ಮುಖದಲ್ಲಿಯೇ ಉತ್ತರಿಸು ತ್ತಿದ್ದುದೂ ಕಂಡುಬಂತು. ಕೃತ್ಯದಲ್ಲಿ ಬೇರೆ ಯಾರೂ ಭಾಗಿಯಾದ ಬಗ್ಗೆ ಮಾಹಿತಿ ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ಮೇ 21ರಂದು ಶ್ರೀಮತಿ ನನ್ನ ಮನೆಗೆ ಬಂದು ಬಾಕಿ ಹಣಕ್ಕಾಗಿ ಪೀಡಿಸಿದಳು. ಮಾತಿಗೆ ಮಾತು ಬೆಳೆದಾಗ ಕೋಪದಿಂದ ತಲೆಗೆ ಒಂದೇಟು ನೀಡಿದೆ. ಆಕೆ ಕುಸಿದು ಸಾವನ್ನಪ್ಪಿದಳು. ಮುಂದೇನು ಮಾಡುವುದೆಂದು ತೋಚದೆ ಸಂಜೆ ತನಕವೂ ದೇಹವನ್ನು ಇರಿಸಿ ಬಳಿಕ ಶವವನ್ನು ವಿಲೇವಾರಿ ಮಾಡಲು ಗೋಣಿಯಲ್ಲಿ ತುಂಬಿಸಲು ಪತ್ನಿಯ ಜತೆ ಸೇರಿ ಯತ್ನಿಸಿದೆ. ಸಾಧ್ಯವಾಗದ ಕಾರಣ ಕೊನೆಗೆ ಮನೆಯಲ್ಲಿದ್ದ ಕತ್ತಿ ಯಿಂದ ತುಂಡರಿಸಿ ಬಳಿಕ ಗೋಣಿ ಚೀಲದಲ್ಲಿ ತುಂಬಿಸಿ ಬೇರೆ ಬೇರೆ ಕಡೆ ಬಿಸುಟು ಬಂದೆ ಎಂದು ಆರೋಪಿ ಮಾಹಿತಿ ನೀಡಿದ್ದಾನೆ.
Advertisement