Advertisement
ಅವರು ಕಾಪು ಕಳತ್ತೂರು ಕುಶಲಶೇಖರ ಶೆಟ್ಟಿ ಅಡಿಟೋರಿಯಂನಲ್ಲಿ ಶ್ರೀ ಸ್ವಾಮೀಜಿಗಳವರು ಕುತ್ಯಾರಿನ ಶ್ರೀ ಮಠದ ನಿವೇಶನದಲ್ಲಿ ಕೈಗೊಳ್ಳಲಿರುವ ಚಾತುರ್ಮಾಸ್ಯ ವ್ರತಾಚರಣೆ ಸಂಬಂಧ ನಡೆಯಲಿರುವ ಪುರಪ್ರವೇಶೋತ್ಸವದ ಸಂಬಂಧ ಸಾರ್ವಜನಿಕ ಸ್ವಾಗತ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭೆ ಸಂತ ದರ್ಶನ ಕಾರ್ಯಕ್ರಮದಡಿ ಪೌರಸಮ್ಮಾನವನ್ನು ಸ್ವೀಕರಿಸಿ ತಮ್ಮ ಆಶೀರ್ವಚನದಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ, ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದು ಧರ್ಮದ ಜಗದ್ಗುರುಗಳಾದ ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರಿಂದ ಆತಂಕದ ನಡುವೆಯೂ ಹಿಂದೂ ಧರ್ಮ ವನ್ನು ಕಟ್ಟುವ ಕಾಯಕ ಕಾರ್ಯರೂಪಕ್ಕಿಳಿ ಯಬೇಕಿದೆ. ನಮ್ಮ ಧರ್ಮ, ಸ್ವಾಭಿಮಾನ, ವಿಶ್ವಾಸ ನಂಬಿಕೆ ಇದ್ದಲ್ಲಿ ನಿಶ್ಚಯವಾಗಿ ಗೆಲುವು ಲಭಿಸುತ್ತದೆ. ಚಾತುರ್ಮಾಸ್ಯವು ಹಿಂದು ಸಮಾಜಕ್ಕೆ ಶಕ್ತಿ ಸಾಮರ್ಥ್ಯ ಕೊಡಲಿ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಯಕ್ಷಗಾನ ಅರ್ಥಧಾರಿಗಳಾದ ಉಜಿರೆ ಅಶೋಕ ಭಟ್, ಧಾರ್ಮಿಕ, ವೇದೋಕ್ತ ಅನುಷ್ಠಾನ ಚಾತುರ್ಮಾಸ್ಯ, ತ್ಯಾಗದಿಂದ ಮಾತ್ರ ಗುರುಗಳ ಅನುಗ್ರಹವಾಗುತ್ತದೆ. ಸಮಾಜವನ್ನು ಸಂಘಟಿಸುವ, ಸಮಾಜವನ್ನು ಮೋಕ್ಷದೆಡೆ ಕೊಂಡೊಯ್ಯುವ ಧಾರ್ಮಿಕ ಸಂದೇಶ ಗುರುಗಳಿಂದಾಗುತ್ತದೆ. ಕ್ರಿಯಾ ಯಜ್ಞ, ಜ್ಞಾನಯಜ್ಞ, ತ್ಯಾಗದ ಆದರ್ಶವೇ ಚಾತುರ್ಮಾಸ್ಯವಾಗಿದೆ ಎಂದರು.
Related Articles
Advertisement
ಮಾಜಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ಪ್ರತಿಷ್ಠಾನ ಅಧ್ಯಕ್ಷರಾದ ತ್ರಾಸಿ ಸುಧಾಕರ ಆಚಾರ್ಯ, ಚಾತು ರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷರಾದ ಕೆ.ಕೇಶವ ಆಚಾರ್ಯ, ಮಾತೃ ಮಂಡಳಿ ಅಧ್ಯಕ್ಷೆ ಶಿಲ್ಪಾ ಜಿ. ಸುವರ್ಣ, ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್, ಶ್ರೀ ಕ್ಷೇತ್ರ ಎಲ್ಲೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ವಿವಿಧ ಸಮಾಜದ ಮುಖ್ಯಸ್ಥರು ವೇದಿಕೆಯಲ್ಲಿದ್ದರು.
ಸಾರ್ವಜನಿಕ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಮುರಲೀಧರ ಪೈ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ವಂದಿಸಿದರು. ರೇಶ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಭಕ್ತಾದಿಗಳೊಂದಿಗೆ ಶ್ರೀ ಸ್ವಾಮೀಜಿಯವರ ಬೃಹತ್ ಶೋಭಾ ಯಾತ್ರೆಯ ಮೂಲಕ ಪಡುಕುತ್ಯಾರಿನ ಶ್ರೀ ಮಠದ ನಿವೇಶನಕ್ಕೆ ತೆರಳಲಾಯಿತು.
ಸನಾತನ ಧರ್ಮವು ಎಲ್ಲ ಧರ್ಮಕ್ಕೂ ಮಾತೃಸ್ಥಾನದಲ್ಲಿದೆ. ಯಾವುದನ್ನು ಅರಿತು, ವಿಮರ್ಶೆ ಮಾಡಿ, ಅರಿತುಕೊಂಡು ಮುಕ್ತವಾದುದನ್ನು ಅಳವಡಿಸಿಕೊಂಡು ಧಾರ್ಮಿಕನನ್ನಾಗಿಸುತ್ತದೋ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂತರಂಗದಿಂದ ಆದ ಸುಧಾರಣೆಯಿಂದ ಪರಿವರ್ತನೆ ಸಾಧ್ಯ. ವ್ಯಕ್ತಿ ಹಿತಚಿಂತನೆ ಬಿಟ್ಟು, ಸಮಷ್ಟಿಯ ಚಿಂತನೆ ಹಿಂದೂ ಬಾಂಧವರು ಬೆಳೆಸಿಕೊಳ್ಳಬೇಕು. ಕಾನೂನು ಮಾಡದೆ ಸಮಾಜದ ಸುಧಾರಣೆಯು ಸಂತರ ಸಂಪರ್ಕದಿಂದಾಗುತ್ತದೆ ಎಂದರು.
ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚಿಸಿದರು.