Advertisement

ಶ್ರೀ ಕಾಶೀ ಮಠಾಧೀಶ‌ರ ಚಾತುರ್ಮಾಸ್ಯ ವ್ರತಾರಂಭ

04:00 AM Jul 13, 2017 | |

ಮಂಗಳೂರು: ಕೊಂಚಾಡಿಯಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠದ ಅಧೀನದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತ ಆರಂಭಗೊಂಡಿದೆ.

Advertisement

ಸ್ವಾಮೀಜಿ ಅವರು ಜು. 3ರಂದು ತಮ್ಮ ಉಡುಪಿ ಮೊಕ್ಕಾಂನಿಂದ ಕೊಂಚಾಡಿಯ ಸ್ವಮಠಕ್ಕೆ ಆಗಮಿಸಿ
ದ್ದರು. ಜು. 10ರಂದು ಶ್ರೀಮತ್‌ ಸುಕೃತೀಂದ್ರತೀರ್ಥ ಸ್ವಾಮೀಜಿ ಅವರ ಪುಣ್ಯತಿಥಿ ಆರಾಧನೆಯ ಅಂಗ
ವಾಗಿ ಭಾವಚಿತ್ರ ಸಹಿತ ರಜತ ಪಲ್ಲಕಿ ಉತ್ಸವ, ಶ್ರೀ ಸುಕೃತೀಂದ್ರತೀರ್ಥ ಗುರುಗುಣಗಾನ, ಲಘುವಿಷ್ಣು ಅಭಿಷೇಕ, ಸ್ವರ್ಣ ಗರುಡ ವಾಹನ ಪೂಜೆ ನಡೆದಿದೆ. ಜು. 11ರಂದು ಸಂಸ್ಥಾನದ ದೇವರುಗಳಿಗೆ ಸಾನ್ನಿಧ್ಯಹವನಗಳು ನಡೆದಿವೆ. ಜು. 14ರಂದು ಶ್ರೀ ಸಂಸ್ಥಾನದ ದೇವರುಗಳಿಗೆ ಪಂಚಾಮೃತ ಅಭಿಷೇಕ, ಊಧ್ವರ್ಜನ, ಶತಕಲಶಾಭಿಷೇಕ, ಪವಮಾನಾಭಿಷೇಕ, ಕನಕಾಭಿಷೇಕ, ಮೃತ್ತಿಕಾನಯನ, ಮುದ್ರಾಧಾರಣ, ಮಹಾಪೂಜೆ, ಮೃತ್ತಿಕಾ ಪೂಜೆಗಳ ಬಳಿಕ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡಲಿದ್ದು, ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುವರು.

ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಆಗಮಿಸಲಿರುವ ಭಕ್ತರ ವಾಸ್ತವ್ಯ, ಊಟ ಹಾಗೂ ಇತರ ಅನುಕೂಲಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ.ಮಂಗಳೂರು ಮಹಾನಗರವೂ ಸೇರಿದಂತೆ, ಕಾವೂರಿನಿಂದ ವ್ಯಾಸನಗರದವರೆಗಿನ ಸಮಸ್ತ ಗೌಡಸಾರಸ್ವತ ಬ್ರಾಹ್ಮಣ ಸಮಾಜ ಸ್ತ್ರೀಪುರುಷ ಸಮವಸ್ತ್ರಧಾರೀ ಸ್ವಯಂ ಸೇವಕರ ತಂಡ ವಾರದ ಏಳು ದಿನಗಳಿಗೆ ಒಂದೊಂದು ವಿಭಿನ್ನ ತಂಡವಾಗಿ ಕರಸೇವೆಯಲ್ಲಿ ನಿರತವಾಗಿದೆ. ಶ್ರೀ ಮಠದ ದೇವರ ಬೆಳಗ್ಗಿನ ಪೂಜೆಯ ಸಮಯದಲ್ಲಿ ಸ್ತೋತ್ರ ಪಠಿಸುವ ಮಾತೆಯರ ತಂಡ ಮಧ್ಯಾಹ್ನ ಹಾಗೂ ರಾತ್ರಿ ಪೂಜಾ ಸಮಯದ ಭಜನಾ ತಂಡ ಹೂ, ತುಳಸಿ ಇತ್ಯಾದಿ ಪೋಣಿಸುವವರ ತಂಡ, ಭೋಜನಾ ಶಾಲೆ, ಪಾಕಶಾಲೆಗಳಲ್ಲಿ ಕಾರ್ಯನಿರತ ಸ್ವಯಂಸೇವಕರ ತಂಡ, ಕಾರ್ಯಾಲಯ, ಸ್ವಾಗತ ಸಮಿತಿ, ವಸತಿ ಸಮಿತಿ, ಉಗ್ರಾಣ ಸಮಿತಿ, ಪೂಜಾ ಸಮಿತಿ, ಸಾಂಸ್ಕೃತಿಕ ಸಮಿತಿ-ಹೀಗೆ ಹತ್ತು ಹಲವು ಸಮಿತಿಗಳು ರೂಪುಗೊಂಡು ಉತ್ಸಾಹದಿಂದ ಸೇವೆ ಸಲ್ಲಿಸುತ್ತಿವೆ ಎಂದು ಪ್ರಕಟನೆ ತಿಳಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next