Advertisement

ಶ್ರೀಗೌರಿ ಶಂಕರ ರಥೋತ್ಸವ

11:52 AM Dec 04, 2018 | |

ಕಲಕೇರಿ: ಸಮೀಪದ ಅಸ್ಕಿ ಗ್ರಾಮದ ಆರಾಧ್ಯ ದೈವರಾದ ಗೌರಿಶಂಕರ ದೇವರ ರಥೋತ್ಸವ ಸಹಸ್ರಾರು ಭಕ್ತ ಸಮೂಹದ ಜಯ ಘೋಷಗಳೊಂದಿಗೆ ವಿಜ್ರಂಭಣೆಯಿಂದ ಜರುಗಿತು. ನೂತನ ರಥಕ್ಕೆ ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ 6ಗಂಟೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿ ನಂತರ ದರ್ಶನ ಪಡೆದರು.

Advertisement

ಸಂಜೆ 5:30ಕ್ಕೆ ಶ್ರೀ ಗೌರಿಶಂಕರ ನೂತನ ರಥೋತ್ಸವಕ್ಕೆ ಮಾಗಣಗೇರಿಯ ಡಾ| ವೀಶ್ವಾರಾಧ್ಯ ಶ್ರೀಗಳು, ಹಿರೂರಿನ ಜಯ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡಿದರು. ಸಹಸ್ರಾರು ಸಂಖೆಯಲ್ಲಿ ಸೇರಿದ ಜನಸ್ತೋಮ ರಥಕ್ಕೆ ಉತ್ತತ್ತಿ, ಬಾಳೆಹಣ್ಣನ್ನು ಎಸೆದು ರಥವನ್ನು ಎಳೆಯುವ ಮೂಲಕ ಧನ್ಯತಾಭಾವ ಮೆರೆದರು. ರಥೋತ್ಸವದಲ್ಲಿ ಅಸ್ಕಿ, ಕಲಕೇರಿ, ಬನ್ನೆಟ್ಟಿ, ಬೆಕಿನಾಳ, ಜಲಪೂರ, ಗೊಟಘಣಕಿ ಸೇರಿದಂತೆ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next