Advertisement

ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ

09:24 PM Jul 09, 2020 | Sriram |

ಉಡುಪಿ: ಸನ್ಯಾಸಿಗಳು ದೇವರು, ತಾಯಿ, ಗುರು ಹಾಗೂ ಗೋವು ಹೊರತು ಇತರರಿಗೆ ನಮಸ್ಕರಿಸುವ ಪದ್ಧತಿಯಿಲ್ಲ. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಠದ ಹಸುವಿಗೆ ಗೋಗ್ರಾಸ ನೀಡಿ ಸಾಷ್ಟಾಂಗ ನಮಸ್ಕರಿಸಿದ್ದರು. ಇದನ್ನು ಸುಧೀರ್‌ ಭಟ್‌ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಜಾಲತಾಣಗಳ ಧಾರ್ಮಿಕ ಗ್ರೂಪ್‌ ಗಳಲ್ಲಿ ವೈರಲ್‌ ಆಗಿದೆ.

Advertisement

ಮಠದ ಪಟ್ಟದ ದೇವರಾದ ಯೋಗನೃಸಿಂಹ ಮತ್ತು ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿದ ಅನಂತರ ಗೋಪೂಜೆ ಮಾಡಿ ಗೋವಿನ ಕಾಲಿಗೆರಗಿ ಸಾಷ್ಟಾಂಗ ನಮಸ್ಕಾರ ಮಾಡುವುದು ಶ್ರೀಪಾದರ ನಿತ್ಯ ದಿನಚರಿ. ಗೋವಿನ ಬಗ್ಗೆ ಅದಮ್ಯ ಪ್ರೀತಿ ಹೊಂದಿರುವ ಶ್ರೀಪಾದರು ಮಠದ ಗೋಶಾಲೆಯಲ್ಲಿ ಸಾಹಿವಾಲ್‌, ಗೀರ್‌, ಓಂಗೋರ್‌, ಹಳ್ಳಿಕಾರ್‌, ಮಲೆನಾಡು ಗಿಡ್ಡ ಮೊದಲಾದ ದೇಸಿ ತಳಿಯ ಗೋವುಗಳನ್ನು ಪೋಷಿಸುತ್ತಿದ್ದಾರೆ. ಹಿಂದಿನ ಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ದೇಸಿ ಗೋವುಗಳ ಸಂರಕ್ಷಣೆ, ಸಂವರ್ಧನೆ ಧ್ಯೇಯವಾಗಿರಿಸಿಕೊಂಡು ಕೃಷ್ಣಮಠದಲ್ಲಿ ಪ್ರಥಮ ಗೋ ಸಮ್ಮೇಳನವನ್ನೂ ಆಯೋಜಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next