Advertisement

ಮೊದಲು ಅಧ್ಯಯನಕ್ಕೆ ಆದ್ಯತೆ: ಶ್ರೀ ವಿದ್ಯಾರಾಜೇಶ್ವರತೀರ್ಥರು

01:36 AM May 14, 2019 | Sriram |

– ಗುರುಗಳು ಎಂಟು ವರ್ಷಗಳ ಕಾಲ ಅಧ್ಯಯನ ನಡೆಸಬೇಕಾಗಿದೆ. ಅನಂತರ ಮಠದ ಜವಾಬ್ದಾರಿಗಳನ್ನು ನೀಡುತ್ತೇವೆಂದು ಹೇಳಿದ್ದಾರೆ. ಆಗ ನಿಮ್ಮ ಆದ್ಯತೆಗಳೇನಿರುತ್ತವೆ?
ನಮ್ಮದೇನಿದ್ದರೂ ಪ್ರಸ್ತುತ ಅಧ್ಯಯನ ಮತ್ತು ಅನುಷ್ಠಾನಕ್ಕೆ ಆದ್ಯತೆ. ದೇವರು ಆ ಸಂದರ್ಭ ಹೇಗೆ ಪ್ರೇರಣೆ ನೀಡುತ್ತಾನೋ ಆ ರೀತಿ ಮಾಡುತ್ತೇವೆ ಮತ್ತು ಗುರುಗಳು ಹೇಳಿದ ಪ್ರಕಾರ ನಡೆದುಕೊಳ್ಳುತ್ತೇವೆ. ಈಗೇನೂ ಯೋಚನೆ ಇಲ್ಲ.

Advertisement

– ಪೂರ್ವಾಶ್ರಮದ ಆಹಾರ ಕ್ರಮಕ್ಕೂ, ಆಶ್ರಮೋತ್ತರ ಆಹಾರ ಕ್ರಮಕ್ಕೂ ವ್ಯತ್ಯಾಸಗಳಿರುತ್ತವೆ. ಇದಕ್ಕೆ ಹೊಂದಾಣಿಕೆ ಆಗುತ್ತದೋ?
ಯಾವುದೇ ತೊಂದರೆ ಆಗುವುದಿಲ್ಲ.

– ಶ್ರೀಕೃಷ್ಣ ದೇವರ, ಪಟ್ಟದ ದೇವರ ಪೂಜೆ ಆರಂಭವಾಗುವುದು ಯಾವಾಗ?
ಒಂದು ಚಾತುರ್ಮಾಸ್ಯವ್ರತ ಆಚರಣೆ ಬಳಿಕ ಮುಹೂರ್ತ ನೋಡಿ ಪಟ್ಟದ ದೇವರ ಮತ್ತು ಶ್ರೀಕೃಷ್ಣ ದೇವರ ಪೂಜೆಯನ್ನು ಆರಂಭಿಸುವ ಕ್ರಮವಿದೆ. ಈಗ ಕೇವಲ ದೂರದಿಂದ ಮಂಗಲಾರತಿ ಮಾತ್ರ ಮಾಡುತ್ತೇವೆ.

ದಿನಚರಿ ಆಶ್ರಮ ಪೂರ್ವದಲ್ಲಿ
– ಬೆಳಗ್ಗೆ 5 ಗಂಟೆಗೆ ಏಳುವುದು.
– 5ರಿಂದ 6.30- ಸ್ನಾನ, ಅನುಷ್ಠಾನ
– 6ರಿಂದ 7- ಪಾರಾಯಣ
– 7ರಿಂದ 8- ಪಾಠದ ಪುನರಾವರ್ತನೆ
– 8ರಿಂದ 8.30- ಗಂಜಿ ಊಟ
– 8.30ರಿಂದ 12- ಪಾಠ
– 12ರಿಂದ 12.30- ಮಧ್ಯಾಹ್ನದ ಜಪ
– 12.30- ಊಟ
– 1ರಿಂದ 1.30- ವಿಶ್ರಾಂತಿ
– 1.30ರಿಂದ 5 – ಪಾಠ
– 5ರಿಂದ 6 – ಕ್ರೀಡೆ
– 6ರಿಂದ 6.30- ಸಂಧ್ಯಾವಂದನೆ
– 6.30ರಿಂದ 7.30-

ಪಾಠದ ಪುನರಾವರ್ತನೆ
– 7.30ರಿಂದ 8 – ಪಾರಾಯಣ
– 8ರಿಂದ 8.30- ಊಟ
– 8.30ರಿಂದ 9- ಪಾಠ ಪುನರಾವರ್ತನೆ
– ರಾತ್ರಿ 9 ಗಂಟೆ- ವಿಶ್ರಾಂತಿ

Advertisement

ಆಶ್ರಮೋತ್ತರದಲ್ಲಿ
– ಬೆಳಗ್ಗೆ 4 ಗಂಟೆ- ಏಳುವುದು
– 4ರಿಂದ 5: ಶ್ರೀ ವಿದ್ಯಾಧೀಶ ತೀರ್ಥರಿಂದ ಪಾಠ
– 5ರಿಂದ 7: ಸ್ನಾನ, ಜಪಾನುಷ್ಠಾನ
– 7ರಿಂದ 9.30: ವಿವಿಧ ಪಾರಾಯಣಗಳು
– 10ರಿಂದ 11.30: ಶ್ರೀ ವಿದ್ಯಾಧೀಶ ತೀರ್ಥರಿಂದ ಪಾಠ
– 11.30ರಿಂದ 2.30: ಸ್ನಾನ, ಪೂಜೆ, ಜಪಾನು ಷ್ಠಾನ, ಆಹಾರ ಸ್ವೀಕಾರ, ಲಘು ವಿಶ್ರಾಂತಿ
– 2.30ರಿಂದ 4.30: ಲಕ್ಷ್ಮೀನಾರಾಯಣ ಶರ್ಮರಿಂದ ಪಾಠ
– 4.30ರಿಂದ 5.30- ಪಾಠದ ಪುನರಾವರ್ತನೆ
– 5.30ರಿಂದ 6.30- ರಾಜಾಂಗಣದಲ್ಲಿ ಉಪನ್ಯಾಸದಲ್ಲಿ ಭಾಗಿ
– 6.30ರಿಂದ 7.30- ಸ್ನಾನ, ಜಪ, ಅನುಷ್ಠಾನ
– 7.30ರಿಂದ 8.30- ಉತ್ಸವದಲ್ಲಿ ಭಾಗಿ
– 8.30ರಿಂದ 8.45- ದ್ರವಾಹಾರ ಸೇವನೆ
– 9ರಿಂದ 10- ಶ್ರೀ ವಿದ್ಯಾಧೀಶತೀರ್ಥರಿಂದ ಪಾಠ
– ರಾತ್ರಿ 10ರ ಬಳಿಕ ವಿಶ್ರಾಂತಿ

Advertisement

Udayavani is now on Telegram. Click here to join our channel and stay updated with the latest news.

Next