Advertisement

ಅಹಿಂಸೆ, ಧರ್ಮ ಪ್ರಜ್ಞೆಯಿಂದ ಬದುಕು ಶ್ರೇಷ್ಠ: ಸುಬ್ರಹ್ಮಣ್ಯ ಶ್ರೀ

12:02 AM Feb 07, 2022 | Team Udayavani |

ವಿಟ್ಲ: ಅಹಿಂಸೆ ಮತ್ತು ಧರ್ಮ ಪ್ರಜ್ಞೆಯಿಂದ ಬದುಕು ಶ್ರೇಷ್ಠವಾಗುತ್ತದೆ. ಪ್ರತೀ ಮನೆಯಲ್ಲಿ ಭಗವದ್ಗೀತೆ ಇರಬೇಕು. ಅದು ಮಕ್ಕಳಲ್ಲಿ ಧರ್ಮಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.

Advertisement

ಅವರು ಕನ್ಯಾನ ಗ್ರಾಮದ ಕಣಿಯೂರು ಮಾತೃಶ್ರೀ ವೇದಿಕೆಯಲ್ಲಿ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಪುನಃಪ್ರತಿಷ್ಠಾ ಬ್ರಹ್ಮಕಲಶ, ಚಂಡಿಕಾಯಾಗದ ಅಂಗವಾಗಿ ನಡೆದ ಧರ್ಮ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ಶ್ರದ್ಧೆಯಿಂದ ಸಂಸ್ಕೃತಿಯೆಂಬ ಪುಷ್ಪ ಅರಳುತ್ತದೆ. ಧರ್ಮ ಮತ್ತು ಸತ್ಯದಿಂದ ಬದುಕು ಚಲನಶೀಲವಾಗಬೇಕು ಎಂದರು.

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತೀ ಜೀವರಾಶಿಯಲ್ಲಿ ಭಗವಂತನನ್ನು ಕಾಣಬೇಕು. ಪ್ರತಿಯೊಬ್ಬರೂ ದೇಗುಲ, ಮಂದಿರಗಳನ್ನು ತಮ್ಮದೆಂದು ಭಾವಿಸಿ, ಸೇವೆ ಸಲ್ಲಿಸಬೇಕು ಎಂದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿ, ಚಾಮುಂಡೇಶ್ವರೀ ದೇವಿಯು ಸಕಲ ಕೈಂಕರ್ಯಗಳನ್ನು ಮಾಡಿಸುತ್ತಿದ್ದಾಳೆ. ಯುವಕರು, ಹಿರಿಯರು ಕೈ ಜೋಡಿಸುವಂತೆ ಆಕೆ ಮಾಡಿರುವುದರಿಂದ ಕ್ಷೇತ್ರ ಎದ್ದುನಿಂತಿದೆ ಎಂದರು.

Advertisement

ಕಟೀಲು ಶ್ರೀ ಕ್ಷೇತ್ರದ ಕಮಲಾದೇವಿ ಪ್ರಸಾದ ಅಸ್ರಣ್ಣ ಮಾತನಾಡಿ, ಅಧ್ಯಾತ್ಮದ ನೆಲೆಯಿಂದ ಊರಿಗೆ ಬೆಲೆ ಬರುತ್ತದೆ. ಶಾಶ್ವತವಾದ ಸಾಧನೆಯಿಂದ ಬದುಕಿಗೆ ಮಹತ್ವ ಬರುತ್ತದೆ ಎಂದರು.

ಚಾಮುಂಡೇಶ್ವರೀ ದೇವೀ ಸೇವಾ ಟ್ರಸ್ಟ್‌ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷತೆ ವಹಿಸಿದರು.

ವಿಟ್ಲ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎಚ್‌. ಜಗನ್ನಾಥ ಸಾಲ್ಯಾನ್‌, ಕೇಪು ಖಂಡಿಗ ಶ್ರೀ ಕೈಲಾಸೇಶ್ವರ ದೇವಸ್ಥಾನದ ಧರ್ಮದರ್ಶಿ ರವೀಶ ಖಂಡಿಗ, ಒಡಿಯೂರು ಶ್ರೀ ವಿವಿಧೋದ್ದೇಶ ಸೌ.ಸ. ನಿ. ಅಧ್ಯಕ್ಷ ಎ. ಸುರೇಶ್‌ ರೈ, ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ, ಪಲ್ಲತ್ತಡ್ಕ ಹೊಸಮ್ಮ ದೇವಸ್ಥಾನದ ಪ್ರ. ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಉದ್ಯಮಿಗಳಾದ ರವಿ ಕಕ್ಕೆಪದವು, ಸದಾಶಿವ ಆಚಾರ್ಯ ಕೈಂತಿಲ ವಿಟ್ಲ, ಕನ್ಯಾನ ಪಿಡಿಒ ವಿಜಯ ಶಂಕರ ಆಳ್ವ, ಮಾಣಿ ಯುವ ವಾಹಿನಿ ನಿ.ಪೂ. ಅಧ್ಯಕ್ಷ ಪ್ರಶಾಂತ್‌, ಜೀಣೊìàದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅನೆಯಾಲ ಮಂಟಮೆ ಉಪಸ್ಥಿತರಿದ್ದರು.

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು ವಂದಿಸಿದರು. ಹೊರೆಕಾಣಿಕೆ ಸಮಿತಿಯ ವಿನೋದ್‌ ಶೆಟ್ಟಿ ಪಟ್ಲಗುತ್ತು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next