Advertisement

18ರಂದು ಸರ್ಕಾರ ರಚನೆ ಬಗ್ಗೆ ನಿರ್ಧಾರ: ಚರಂತಿಮಠ

07:00 AM Sep 15, 2018 | Team Udayavani |

ಬಾಗಲಕೋಟೆ: “ಬಿಜೆಪಿಯಿಂದ 104 ಶಾಸಕರಿದ್ದೇವೆ. ಈಗ ಬೇಕಾಗಿರುವುದು ಕೇವಲ 9 ಜನ ಶಾಸಕರು ಮಾತ್ರ. ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ, ಜಗಳ, ಭಿನ್ನಾಭಿಪ್ರಾಯ ನಿತ್ಯ ನಡೆಯುತ್ತಿವೆ. ಇಲ್ಲದ ಸರ್ಕಾರ ನಾವು ಬೀಳಿಸುವ ಅಗತ್ಯವೇ ಇಲ್ಲ. ಸೆ.18ರಂದು ಬಿಜೆಪಿ ಶಾಸಕಾಂಗ ಪಕ್ಷದ ವಿಶೇಷ ಸಭೆ ನಡೆಯಲಿದೆ. 

Advertisement

ಸರ್ಕಾರ ರಚನೆ ಕುರಿತಾಗಿಯೇ ಈ ವಿಶೇಷ ಸಭೆ ಕರೆಯಲಾಗಿದೆ. ಸಭೆಯ ಬಳಿಕ ಬಿಜೆಪಿ ಸರ್ಕಾರ ರಚನೆಯ ಬಗ್ಗೆ ತಿಳಿಸುತ್ತೇವೆ’ ಎಂದು ಬಿಜೆಪಿ ಶಾಸಕ ಡಾ.ವೀರಣ್ಣ ಚರಂತಿಮಠ ತಿಳಿಸಿದ್ದಾರೆ. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಬಿಜೆಪಿಯ 104 ಶಾಸಕರಲ್ಲಿ ಒಬ್ಬರನ್ನಾದರೂ ಸೆಳೆದುಕೊಳ್ಳಲಿ ನೋಡೋಣ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು 4 ತಿಂಗಳಾಗಿವೆ. ಈವರೆಗೆ 3-4 ಜಿಲ್ಲೆಗಳಲ್ಲಿ ಬಿಟ್ಟರೆ ಉಳಿದೆಡೆ ಸರ್ಕಾರವೇ ಇಲ್ಲ. ಹೀಗಾಗಿ ಬಿಜೆಪಿಯವರು ಏನಾದರೂ ಮಾಡಿ ಸರ್ಕಾರ ರಚನೆ ಮಾಡಲಿ ಎಂಬ ಭಾವನೆ ಜನರಲ್ಲೂ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next