ಮಹೋತ್ಸವ ಜರಗಲಿದೆ.
Advertisement
ಎ.19ರಂದು ಸಿರಿಜಾತ್ರೆ, ಎ. 22ರಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ.ಎ. 9ರಂದು ಸಂಜೆ ವಾಸ್ತು ಹೋಮ, ವಾಸ್ತುಪೂಜೆ, ಪ್ರಾಸಾದ ಬಲಿ, ಎ. 10ರಂದು ಪೂರ್ವಾಹ್ನ ವೀರಭದ್ರ ದೇವರಿಗೆ ಪಂಚವಿಂಶತಿ ಕಲಶ ಮತ್ತು ಬ್ರಹ್ಮಲಿಂಗೇಶ್ವರ ದೇವರಿಗೆ ನವಕಕಲಶ ಸಹಿತ ಪ್ರಧಾನಹೋಮ, ಕಲಶಾಭಿಷೇಕ, ಪ್ರಸನ್ನಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಉತ್ಸವ ಬಲಿ, ರಥೊತ್ಸವ, ಹಾಗೂ ಮುಹೂರ್ತ ಬಲಿ, ಎ. 19ರಂದು ಧ್ವಜಾರೋಹಣ, ರಾತ್ರಿ ಆರಾಧನಾ ಪೂಜೆ, ಪೂರ್ಣಿಮಾ ಉತ್ಸವ, ರಾತ್ರಿ ಹಾಲುಹಬ್ಬ, ಸವಾರಿ ಬಲಿ, ಬ್ರಹ್ಮಮಂಡಲ, ಭೂತ ಬಲಿ, ಎ. 20ರಂದು ರಾತ್ರಿ ಆರಾಧನಾ ಪೂಜೆ,ಬೈಗಿನ ಬಲಿ, ಸವಾರಿ ಬಲಿ, ಎ. 21ರಂದು ರಾತ್ರಿ ಆರಾಧನಾ ಪೂಜೆ, ನಿತ್ಯಬಲಿ, ಸವಾರಿ ಬಲಿ, ಮಹಾರಂಗ ಪೂಜೆ, ಭೂತಬಲಿ, ಎ. 22ರಂದು ಮಧ್ಯಾಹ್ನ ರಥಾರೋಹಣ, ಸಂಜೆಶ್ರೀಮನ್ಮಹಾರಥೋತ್ಸವ, ಭೂತಬಲಿ,ಕವಾಟಪೂರಣ, ಎ. 23ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ ಆರಾಧನಾ ಪೂಜೆ, ಓಕುಳಿ, ಅವಭೃಥ ಸ್ನಾನ,ಧ್ವಜಾವರೋಹಣ, ಎ. 24ರಂದು
ಮಹಾಸಂಪ್ರೋಕ್ಷಣೆ, ಚಂಡಿಕಾಯಾಗ, ಮಾರಿಪೂಜಾ ಸಮಾರಾಧನೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಹಿರಿಯಡಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎಚ್. ಹಾಲಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.