ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಮೊಳಹಳ್ಳಿ ಮಠ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಬಿಂಬ ಪುನಃ ಪ್ರತಿಷ್ಠೆ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಉಮಾ ಮಹೇಶ್ವರ ದೇವರ ಪ್ರಾಸಾದ ಪ್ರತಿಷ್ಠಾ ಪೂಜೆ, ರತ್ನನ್ಯಾಸ ಪೂರ್ವಕ ಪೀಠ ಸ್ಥಾಪನೆ, ಅಷ್ಟಬಂಧ ,ಬಿಂಬ ಪ್ರತಿಷ್ಠೆ, ಜೀವ ಕುಂಭಾಭಿಷೇಕ, ಪ್ರಾಣಪ್ರತಿಷ್ಠೆ ಪೂಜೆ, ಶಿಖರ ಪ್ರತಿಷ್ಠೆ, ತತ್ವ ಕಲಶ ಸ್ಥಾಪನೆ, ಕಲಾತತ್ವ ಹೋಮ, ಕಲಶಾಭಿಷೇಕ ಮಹಾಪೂಜೆ, ಶ್ರೀಗಣಪತಿ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇ|ಮೂ| ಸುಧೀರ್ ಅಡಿಗ ಪಡುಮುಂಡು ಇವರ ಆಚಾರ್ಯತ್ವದಲ್ಲಿ ಎ.7ರಂದು ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಅರ್ಚಕ ಸುಬ್ರಹ್ಮಣ್ಯ ಉಡುಪ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ, ಮೊಳಹಳ್ಳಿ ಮಠ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಅನಿಲ್ ಕುಮಾರ್ ಶೆಟ್ಟಿ, ಖಜಾಂಚಿ ನಾರಾಯಣ ಶೆಟ್ಟಿ, ಮೊಳಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮನೋಜ್ ಕುಮಾರ್ ಶೆಟ್ಟಿ, ಮಾಜಿ ಗ್ರಾ.ಪಂ. ಸದಸ್ಯ ಗೌತಮ್ ಶೆಟ್ಟಿ , ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಹೆಗ್ಡೆ , ಸುರೇಶ್ ಶೆಟ್ಟಿ ಬಡಾಮನೆ, ದಿವಾಕರ್ ತೊಳಾರ್, ಅಕ್ಷಯ್ ಶೆಟ್ಟಿ ಹಾಗೂ ಮೊಳಹಳ್ಳಿ ಒಂಬತ್ತು ಮನೆಯವರು, ಮೊಳಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.