Advertisement
ಶ್ರೀಲಂಕಾ ಸಹಿತ ಶ್ರೀರಾಮ ಸಂಚರಿಸಿದ್ದ ಎಂದು ಹೇಳಲಾಗುವ ಸ್ಥಳಗಳಿಗೆ 16 ದಿನಗಳ ಪ್ರವಾಸ ಆಯೋಜಿಸುವ ಯೋಜನೆ ಇದಾಗಿದೆ. ‘ಶ್ರೀ ರಾಮಾಯಣ ಎಕ್ಸ್‌ಪ್ರಸ್’ ವಿಶೇಷ ರೈಲಿನಲ್ಲಿ 800 ಮಂದಿ ಪ್ರಯಾಣಿಸಲು ಅವಕಾಶ ಇದ್ದು, ಪ್ರತಿಯೊಬ್ಬ ಯಾತ್ರಿಕನಿಗೆ 15,120 ರೂ. ನಿಗದಿ ಮಾಡಲಾಗಿದೆ. ದಿಲ್ಲಿಯಿಂದ ಯಾತ್ರೆ ಆರಂಭವಾಗಲಿದ್ದು, ಕರ್ನಾಟಕದ ಹಂಪಿಗೂ ಈ ರೈಲು ಪ್ರವೇಶಿಸಲಿದೆ. ಅಯೋಧ್ಯೆಯಲ್ಲಿ ಮೊದಲ ನಿಲುಗಡೆ. ರಾಮಜನ್ಮಭೂಮಿ ಅಯೋಧ್ಯೆ ವೀಕ್ಷಣೆಯ ಬಳಿಕ ರೈಲು ಮುಂದಕ್ಕೆ ಸಾಗಲಿದೆ. ಅನಂತರ ಹನುಮಾನ್ ಗಾರ್ಹಿ, ರಾಮಕೂಟ ಮತ್ತು ಕನಕ್ ಭವನ ದೇಗುಲಗಳಿಗೆ ಭೇಟಿ ನೀಡಲಿದೆ. ಅಲ್ಲಿಂದ ನಂದಿ ಗ್ರಾಮ, ಸೀತಾಮರ್ಹಿ, ಜನಕಪುರಿ, ವಾರಾಣಸಿ, ಪ್ರಯಾಗ, ಶೃಂಗವರಪುರ, ಚಿತ್ರಕೂಟ, ನಾಸಿಕ್, ಹಂಪಿ ಮತ್ತು ರಾಮೇಶ್ವರಗಳಿಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಆಹಾರ ಪೂರೈಕೆ, ವಸತಿ ಸಹಿತ ಮೂಲಸೌಲಭ್ಯಗಳು ಪ್ಯಾಕೇಜ್ ವೆಚ್ಚದಲ್ಲೇ ಸೇರಿರುತ್ತವೆ.
Advertisement
ಇಂದು ‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್’ಗೆ ಚಾಲನೆ
05:00 AM Nov 14, 2018 | Karthik A |
Advertisement
Udayavani is now on Telegram. Click here to join our channel and stay updated with the latest news.