Advertisement

ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಮಂದಿರದ ವಿನ್ಯಾಸ ಹೇಗಿದೆ…ಹಲವು ಚಿತ್ರ ಬಿಡುಗಡೆ

06:06 PM Aug 04, 2020 | Nagendra Trasi |

ಲಕ್ನೋ: ಉತ್ತರಪ್ರದೇಶ ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಪ್ರಸ್ತಾವಿತ ಬೃಹತ್ ರಾಮಮಂದಿರದ ಹಲವಾರು ಚಿತ್ರಗಳನ್ನು ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಮಂಗಳವಾರ ಬಿಡುಗಡೆ ಮಾಡಿದೆ. ಮತ್ತೊಂದೆಡೆ ಅಯೋಧ್ಯೆಯಲ್ಲಿ ಆಗಸ್ಟ್ 5(2020) ನಡೆಯುವ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ.

Advertisement

ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಘೋಷಿಸಿರುವಂತೆ, ಶ್ರೀರಾಮ್ ಜನ್ಮಭೂಮಿ ಮಂದಿರ ಭಾರತೀಯ ಶಿಲ್ಪಕಲೆಗೊಂದು ಅದ್ವಿತೀಯ ಉದಾಹರಣೆಯಾಗಲಿದೆ ಎಂದು ಉಲ್ಲೇಖಿಸಿ, ಪ್ರಸ್ತಾವಿತ ವಿನ್ಯಾಸದ ಹಲವಾರು ಚಿತ್ರಗಳನ್ನು ಹಂಚಿಕೊಂಡಿದೆ.

ಆಗಸ್ಟ್ 5ರಂದು ನಡೆಯಲಿರುವ ಭೂಮಿ ಪೂಜೆಗಾಗಿ ಆಯ್ದ ಗಣ್ಯ ವ್ಯಕ್ತಿಗಳನ್ನು ಮಾತ್ರ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಗಳು ಆಹ್ವಾನ ನೀಡಿದ್ದಾರೆ. 135 ಸಂತರು, 35 ಧಾರ್ಮಿಕ ಸಂಘಟನೆಗಳ ಮುಖಂಡರು ಸೇರಿ 175 ಗಣ್ಯರನ್ನು ಮಾತ್ರ ಆಹ್ವಾನಿಸಿದೆ.

Advertisement

ದೇಶಾದ್ಯಂತ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next