Advertisement

ಜೂ. 6: ನೆರೂಲ್‌ ಶನೀಶ್ವರ ಮಂದಿರದಲ್ಲಿ ಶ್ರೀರಾಮ ದರ್ಶನ ಯಕ್ಷಗಾನ

05:04 PM Jun 05, 2019 | Vishnu Das |

ಮುಂಬಯಿ: ನೆರೂಲ್‌ ಶ್ರೀ ಶನೀಶ್ವರ ಮಂದಿರದ ವಿಶ್ವಸ್ತ ಮಂಡಳಿ ಹಾಗೂ ಕಲಾಭಿಮಾನಿಗಳ ಸಹಯೋಗದೊಂದಿಗೆ ಉಡುಪಿ ಚೇರ್ಕಾಡಿ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದವರಿಂದ ಶ್ರೀರಾಮ ದರ್ಶನ ಯಕ್ಷಗಾನ ಪ್ರದರ್ಶನವು ಜೂ. 6 ರಂದು ಸಂಜೆ 5.30ಕ್ಕೆ ನೆರೂಲ್‌ ಶ್ರೀ ಶನೀಶ್ವರ ಮಂದಿರದ ವಠಾರದಲ್ಲಿ ಜರಗಲಿದೆ.

Advertisement

ಮಂಜುನಾಥ ಪ್ರಭು ಚೇರ್ಕಾಡಿ ಅವರ ನಿರ್ದೇಶನದಲ್ಲಿ ನಡೆಯ
ಲಿರುವ ಈ ಯಕ್ಷಗಾನ ಪ್ರಸಂಗದಲ್ಲಿ ಭಾಗವತರಾಗಿ ಶಶಿಕಲಾ ಪ್ರಭು ಚೇರ್ಕಾಡಿ, ಮದ್ದಳೆಯಲ್ಲಿ ಮಂಜು ನಾಥ ಪ್ರಭು ಚೇರ್ಕಾಡಿ, ಚೆಂಡೆವಾದಕರಾಗಿ ಬಸವ ಮರಕಾಲ ಮುಂಡಾಡಿ ಇವರು ಸಹಕರಿಸಲಿದ್ದಾರೆ. ಕಲಾವಿದರಾಗಿ ಕು| ವೈಷ್ಣವಿ,
ಕು| ನಿಮಿಷಾ, ಕು| ಶ್ರೀನಿಧಿ, ಕು| ವೃಂದಾ, ಕು| ಕೃತಿ, ಕು| ಸ್ಮಿತಾ, ಕು| ಪ್ರಣಮ್ಯ ಭಾಗವಹಿಸಲಿದ್ದಾರೆ.

ಡಾ| ಕೆ. ಶಿವರಾಮ ಕಾರಂತರಿಂದ 1992ರಲ್ಲಿ ಸ್ಥಾಪನೆಗೊಂಡ ಈ ಯಕ್ಷಗಾನ ಮೇಳವು ನಡುಬಡಗಿನ ಶುದ್ಧ ಸಾಂಪ್ರದಾಯಿಕ ಯಕ್ಷಗಾನ ಮೇಳವಾಗಿದೆ. ಹಾರಾಡಿ ಹಾಗೂ ಮಟ್ಟಾಡಿ ತಿಟ್ಟಿನ ಶೈಲಿಯನ್ನು ಉಳಿಸಿ ಕೊಂಡು ಇದುವರೆಗೆ ದೇಶದಾದ್ಯಂತ 2000ಕ್ಕೂ ಅಧಿಕ ಪ್ರದರ್ಶನ ನೀಡಿದ ಹೆಗ್ಗಳಿಕೆ ಈ ಮೇಳಕ್ಕಿದೆ.

ಉಚಿತ ಪ್ರವೇಶವಿರುವ ಈ ಕಾರ್ಯಕ್ರಮ ದಲ್ಲಿ ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸು ವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next