Advertisement

Shri Ram ನನ್ನ ಕನಸಲ್ಲಿ ಬಂದು ನಾನು ಎಲ್ಲರಿಗೂ ದೇವರು ಎಂದಿದ್ದಾನೆ:ಸಚಿವ ಲಾಡ್

10:05 PM Jan 13, 2024 | Team Udayavani |

ಧಾರವಾಡ : ಬಿಜೆಪಿಯವರು ಶ್ರೀರಾಮ ಮಂದಿರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ನಾನು ಎಲ್ಲರಿಗೂ ದೇವರಾಗಿದ್ದೇನೆ ಎಂಬುದಾಗಿ ಕನಸಿನಲ್ಲಿ ಬಂದು ಶ್ರೀರಾಮರೇ ಹೇಳಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ಬರೀ ಚುನಾವಣೆ ಗಿಮಿಕ್ ಅಷ್ಟೇ. ಹಿಂದಿನ ವರ್ಷ ಈ ವಿಷಯ ಇರಲಿಲ್ಲ. ಕಳೆದ ಬಾರಿ ಪುಲ್ವಾಮಾ ಕಥೆ ತಂದರು. ಈ ರಾಮಮಂದಿರ, ಹಿಂದೂತ್ವ ತಂದರು. ಇವೆಲ್ಲ ಚುನಾವಣೆ ಸಂದರ್ಭದಲ್ಲಿ ಮಾತ್ರ. ಚುನಾವಣೆ ಮುಗಿದ ಮೇಲೆ ಏನಿರುತ್ತದೆ ಎಂಬುದನ್ನೂ ಮಾಧ್ಯಮದವರು ತೋರಿಸಬೇಕು. ದಯಮಾಡಿ ನಮ್ಮನ್ನೂ ಉಳಿಸಿ ಎಂದು ಲಾಡ್
ಮಾಧ್ಯಮದವರಿಗೆ ಕೈ ಮುಗಿದರು.

ರಾಮ ಎಲ್ಲ ಜನಾಂಗದವರಲ್ಲೂ ಇದ್ದಾರೆ. ಇದನ್ನೇ ಅವರು ಕನಸಲ್ಲಿ ಹೇಳಿದ್ದಾರೆ. ಮುಸ್ಲಿಂರು ಕೂಡ ರಾಮನ ಪೂಜೆ ಮಾಡಬಹುದು. ಈಗ ಎಲ್ಲರನ್ನೂ ಕರೆಯುತ್ತಿದ್ದಾರೆ. ಇಷ್ಟು ವರ್ಷ ಇವರು ಯಾರನ್ನೂ ಕರೆದಿಲ್ಲ. ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಎಷ್ಟು ಬಾರಿ ರಾಮಮಂದಿರಕ್ಕೆ ಹೋಗಿದ್ದಾರೆ. ಇವರ ಬಳಿ ಫೋಟೋ ಇವೆಯಾ? ಇದೆಲ್ಲ ಪ್ರಚಾರಕ್ಕೆ ಮಾತ್ರ ಎಂದರು.

ಕೆಲ ಸ್ನೇಹಿತರು ಈಗ ತಾನೇ ಬಂದು ನನಗೆ ಮಂದಿರ ಉದ್ಘಾಟನೆಯ ಆಹ್ವಾನ ಕೊಟ್ಟಿದ್ದಾರೆ. ಇತಿಹಾಸ ನೋಡಿದರೆ ಆರ್‌ಎಸ್‌ಎಸ್ ಅಜೆಂಡಾದಲ್ಲಿ ಯಾವತ್ತೂ ರಾಮಮಂದಿರ ಇರಲಿಲ್ಲ. ಆರ್‌ಎಸ್‌ಎಸ್ ಶುರುವಾಗಿ ನೂರು ವರ್ಷ ಆಗಿದೆ. 30 ವರ್ಷದ ಹಿಂದೆ ಬಾಬರಿ ಮಸೀದಿ ಗಲಾಟೆ ಆದ ಮೇಲೆ ರಾಮ ಮಂದಿರದ ಚರ್ಚೆ ಆಗಿದೆ. ಚುನಾವಣೆ ವೇಳೆಯಷ್ಟೇ ರಾಮಮಂದಿರ ಚರ್ಚೆ ಆಗುತ್ತದೆ. ಆಮೇಲೆ ಕ್ಲೋಸ್ ಆಗುತ್ತದೆ ಎಂದರು.

ಒಗಟ್ಟಿಗೆ ಸಲಹೆ
ರಾಷ್ಟ್ರ ನಾಯಕರು ನಮಗೆ ಎಲ್ಲಾ ಸಚಿವರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರದ ನಡುವೆ ಯಾವ ರೀತಿಯ ಬಾಂಧವ್ಯ ಇರಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಇದಲ್ಲದೇ ಲೋಕಸಭಾ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಹೇಳಿದ್ದಾರೆ. ಯಾವುದೇ ವಿವಾದಾತ್ಮಕ ಹೇಳಿಕೆ ಕೊಡದಂತೆ ಸೂಚನೆ ಕೊಟ್ಟಿದ್ದಾರೆ ಎಂದರು.

Advertisement

ಡಿಸಿಎಂ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲಾಡ್, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಾಸಕರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ಆಗಿದೆ ಎಂದರು. ಇದಲ್ಲದೇ
ಲೋಕಸಭಾ ಚುನಾವಣೆಗೆ ನಿಲ್ಲಲು ನನಗೆ ಆಸೆ ಇಲ್ಲ. ನಾನು ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಬೇಕು. ನಾನು ಇಲ್ಲೇ ಕೆಲಸ ಮಾಡಬೇಕು. ನಮ್ಮ ಪಕ್ಷದಲ್ಲಿ ಯಾರೇ ನಿಂತರೂ ನನ್ನಷ್ಟೇ ಸೂಕ್ತರಿದ್ದಾರೆ. ನೋಡೋಣ ಯಾರಿಗೆ ಕೊಡುತ್ತಾರೋ ಯಾರು ಕ್ಲಿಕ್ ಆಗುತ್ತಾರೋ ಎಂದರು.

ಇವರೆಲ್ಲ ರಾಜಕಾರಣವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋದರೆ ಹೇಗೆ?
ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯರು ಬಂದರೆ ಬರಲಿ ಬಿಟ್ಟರೆ ಬಿಡಲಿ, ಯಾವ ಸ್ವಾಮೀಜಿ ಬೇಕಾದರೆ ಬಂದರೆ ಬರಲಿ ಬಿಟ್ಟರೆ ಬಿಡಲಿ ಎನ್ನುವ ಮಾತುಗಳನ್ನು ಬಿಜೆಪಿಯವರು ಆಡುತ್ತಾರೆ. ಇವರ ಮಾತುಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ಅವರ ಸಂಸ್ಕೃತಿ ತೋರಿಸುತ್ತದೆ.
-ಎಚ್.ಕೆ.ಪಾಟೀಲ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next