ತೆಕ್ಕಟ್ಟೆ : ಕೊಮೆ ಕೊರವಡಿ ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ (ರಿ.) ಇದರ ನೂತನ ಶಿಲಾಮಯ ಮಂದಿರದ ಶಿಲಾನ್ಯಾಸಗೈದು ಧಾರ್ಮಿಕ ಕಾರ್ಯಕ್ರಮವನ್ನು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಆನಂದ ಸಿ.ಕುಂದರ್ ಅವರು ಜ.17 ರಂದು ಕೊಮೆ ಕೊರವಡಿ ಶ್ರೀಬೊಬ್ಬರ್ಯ ಹಾಗೂ ಹಳೆಯಮ್ಮ ಮತ್ತು ಪರಿವಾರ ದೈವಸ್ಥಾನದ ಪ್ರಾಂಗಣದಲ್ಲಿ ಉದ್ಘಾಟಿಸಿದರು.
ವೇ| ಬ್ರ| ಜ್ಯೋತಿಷಿ ಕೆ. ಶ್ರೀಪತಿ ಭಟ್ ಕಂಬಿಕಲ್ಲು ಕಕ್ಕುಂಜೆ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ ಇದರ ಜಿಲ್ಲಾಧ್ಯಕ್ಷ ಭೋಜರಾಜ್ ಆರ್.ಕಿದಿಯೂರು , ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ (ರಿ.) ಬಿ.ಸಿ.ಟ್ರಸ್ಟ್ ಉಡುಪಿ ಜಿಲ್ಲೆ ಇದರ ನಿರ್ದೇಶಕ ಗಣೇಶ ಬಿ., ಕುಂದಾಪುರ ತಾಲೂಕು ಭಜನಾ ಒಕ್ಕೂಟದ ಅದ್ಯಕ್ಷ ಜಯಕರ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಭಜನಾ ಪರಿಷತ್‌ನ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಕೊಮೆ ಕೊರವಡಿ ಶ್ರೀಬೊಬ್ಬರ್ಯ ಹಾಗೂ ಹಳೆಯಮ್ಮ ಮತ್ತು ಪರಿವಾರ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಹತ್ವಾರ್, ಕೊಮೆ ಕೊರವಡಿ ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ (ರಿ.) ಇದರ ನೂತನ ಶಿಲಾಮಯ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಸ್, ವಿಠ್ಠಲ ಪೈ , ಕೊಮೆ ಕೊರವಡಿ ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ (ರಿ.) ಇದರ ಅಧ್ಯಕ್ಷ ಕೆ.ಚಂದ್ರ ಕಾಂಚನ್, ಕೊಮೆ ಕೊರವಡಿ ವಿ.ಸ,ಸಂಘದ ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಸ್, ವಿಠ್ಢಲ ಪೈ ಸ್ವಾಗತಿಸಿ, ಪ್ರಸ್ತಾವನೆಗೈದು, ಕೊಮೆ ಕೊರವಡಿ ವಿ.ಸ,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ನಿರೂಪಿಸಿ, ಟಿ.ಆರ್.ಮಂಜುನಾಥ ಪ್ರಾರ್ಥಿಸಿ, ಕಾರ್ಯದರ್ಶಿ ರಾಜು ಪೂಜಾರಿ, ಉಮೇಶ್ ಮೆಂಡನ್, ಗೋಪಾಲ ಕಾಂಚನ್, ರಾಘವೇಂದ್ರ ಹರಪನಕೆರೆ ಸಹಕರಿಸಿ, ವಂದಿಸಿದರು.