ಶಿರ್ವ: ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಂದ ಬಂಟಕಲ್ಲು ಎಂಬ ಗ್ರಾಮೀಣ ಪರಿಸರದಲ್ಲಿ 2010ರಲ್ಲಿ ಸ್ಥಾಪಿಸಲ್ಪಟ್ಟ “ಶ್ರೀಮಧ್ವವಾದಿರಾಜ ತಾಂತ್ರಿಕ ಶಿಕ್ಷಣ ವಿದ್ಯಾಲಯ’ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ತಾಂತ್ರಿಕ ಶಿಕ್ಷಣ ನೀಡುತ್ತಿದ್ದು 13 ವರ್ಷಗಳಲ್ಲಿ ಹಲವು ಸಾಧನೆಗಳ ಮೂಲಕ ಪ್ರಸಿದ್ಧಿ ಪಡೆದಿದೆ.
ಕಾಲೇಜು ಪ್ರಾರಂಭವಾದ 9ನೇ ವರ್ಷದಲ್ಲಿ ನ್ಯಾಕ್‌ನಿಂದ “ಎ’ ಶ್ರೇಣಿಯ ಮಾನ್ಯತೆ, 11ನೇ ವರ್ಷದಲ್ಲಿ ರಾಷ್ಟ್ರೀಯ ಮೌಲ್ಯಾಂಕನ ಮಂಡಳಿಯಿಂದ ಎನ್‌ಬಿಎ ಮಾನ್ಯತೆ, ರಾಜ್ಯದ ಪ್ರತಿಷ್ಠಿತ “ಸೂಪರ್-30′ ವಿದ್ಯಾಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ, 13ನೇ ವರ್ಷದಲ್ಲಿ ರಾಷ್ಟ್ರಮಟ್ಟದ ಎನ್‌ಐಆರ್‌ಎಫ್ 2023ರ ಶ್ರೇಯಾಂಕದಲ್ಲಿ “ಆವಿಷ್ಕಾರ ಮತ್ತು ಉದ್ಯಮಶಿಲತೆ’ಯಲ್ಲಿ ರಾಷ್ಟ್ರಮಟ್ಟದ ವಿದ್ಯಾಸಂಸ್ಥೆಗಳಲ್ಲಿ ಉನ್ನತ 150-300 ಶ್ರೇಣಿಯಲ್ಲಿ ಒಳಗೊಂಡಿರುವುದು ವಿದ್ಯಾಸಂಸ್ಥೆಯ ಪ್ರಗತಿಯ ಮೈಲುಗಲ್ಲುಗಳು. ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿ.ವಿ. ರ್‍ಯಾಂಕ್, ವಿದ್ಯಾರ್ಥಿಗಳ ಆವಿಷ್ಕಾರಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗಳು, ಸತತ 6ನೇ ಬಾರಿಗೆ ರಾಜ್ಯಮಟ್ಟದ ವಿದ್ಯಾರ್ಥಿ ಘಟಕದ ಪ್ರತಿಷ್ಠಿತ ಐಎಸ್‌ಟಿಇ ಪ್ರಶಸ್ತಿ, ಅಧ್ಯಾಪಕರ ಘಟಕದ ಪ್ರಶಸ್ತಿ ಮೊದಲಾದವುಗಳು ವಿದ್ಯಾಸಂಸ್ಥೆಯ ಪ್ರಗತಿಗೆ ಕೈಗನ್ನಡಿಯಾಗಿದೆ.
ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ ಉತ್ತಮ ಉದ್ಯೋವಕಾಶಗಳನ್ನೂ ಕಲ್ಪಿಸುವ ದೃಷ್ಟಿಯಲ್ಲಿ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಪ್ಲೇಸ್‌ಮೆಂಟ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಿಂದ 2022-23ನೇ ಸಾಲಿನಲ್ಲಿ ಶೇ.90ಕ್ಕೂ ಅಧಿಕ ಅರ್ಹ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಅಮೆಜಾನ್, ಕಿಂಡ್ರಿಲೆ, ಮೈಂಡ್‌ಟ್ರೀ, ಕಾಗ್ನಿಜೆಂಟ್, ಇನ್ಫೋಸಿಸ್, ವಿಪೊ›, ಟಿಸಿಎಸ್, ರೋಬೊಸಾಫ್ಟ್, ಎಚ್‌ಪಿ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಪಡೆದು ದೇಶ ವಿದೇಶಗಳಲ್ಲಿ ವೃತ್ತಿ ಜೀವನ ಮುಂದುವರಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಯ ದೃಷ್ಟಿಯಿಂದ ಶೈಕ್ಷಣಿಕ ವಿಷಯದೊಂದಿಗೆ ಅತಿಥಿ ಉಪನ್ಯಾಸ ಕಾರ್ಯಕ್ರಮಗಳು, ಅತ್ಯಾಧುನಿಕ ತಂತ್ರಜ್ಞಾನ ಕುರಿತಾದ ಕಾರ್ಯಾಗಾರಗಳು, ಕೈಗಾರಿಕೆಗಳಿಗೆ ಭೇಟಿ, ಕೈಗಾರಿಕಾ ಪರಿಣಿತ ಉಪನ್ಯಾಸಗಳನ್ನೂ ಕಾಲಕಾಲಕ್ಕೆ ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೆ ಪಠ್ಯೇತರ ವಿಷಯಗಳಾದ ಕ್ರೀಡೆ, ಎನ್‌ಸಿಸಿ, ಎನ್ನೆಸ್ಸೆಸ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ಸಂಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್, ಸಿವಿಲ್ ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿಇ ಕೋರ್ಸ್‌ಗಳು ಲಭ್ಯವಿದ್ದು, 2023-2024ನೇ ಸಾಲಿನಲ್ಲಿ ಎಂಬಿಎ ಸ್ನಾತಕೋತ್ತರ ಕೋರ್ಸ್ ಆರಂಭವಾಗಲಿದೆ. ಕಾಲೇಜು ಕ್ಯಾಂಪಸ್‌ಲ್ಲಿಯೇ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತ ಹಾಸ್ಟೆಲ್, ವಿಶಾಲವಾದ ಗ್ರಂಥಾಲಯ, ಉತ್ತಮ ರೀತಿಯ ಕೆಫೆಟೇರಿಯ ಹಾಗೂ ಉಡುಪಿ, ಕುಂದಾಪುರ, ಕಾರ್ಕಳ, ಹಿರಿಯಡ್ಕ ಆಸುಪಾಸಿನ ವಿದ್ಯಾರ್ಥಿಗಳಿಗೆ ಕಾಲೇಜು ಬಸ್‌ನ ವ್ಯವಸ್ಥೆಗಳಿವೆ. 2023-24ನೇ ಸಾಲಿಗೆ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತರು ವಿದ್ಯಾಸಂಸ್ಥೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ: ಹೈನಾ ದಾಳಿಯಿಂದ ಮರಿಯನ್ನು ರಕ್ಷಿಸಿದ ತಾಯಿ ಜಿರಾಫೆ; ವಿಡಿಯೋ ನೋಡಿ