Advertisement

ಜರಿಮರಿಯ ಶ್ರೀ ಕ್ಷೇತ್ರ ಉಮಾಮಹೇಶ್ವರಿ ದೇವಸ್ಥಾನ: ನವರಾತ್ರಿ 

04:16 PM Sep 14, 2017 | Team Udayavani |

ಮುಂಬಯಿ: ಸಾಕಿನಾಕಾ ಜರಿಮರಿಯ ಶ್ರೀ ಉಮಾಮಹೇಶ್ವರಿ ಮಂದಿರ ಮಾರ್ಗದಲ್ಲಿರುವ ಶ್ರೀ ಕ್ಷೇತ್ರ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಸೆ. 21 ರಿಂದ ಸೆ. 30ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.

Advertisement

ಸೆ. 21ರಂದು ಪೂರ್ವಾಹ್ನ 9 ರಿಂದ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಗಣಯಾಗ, ಕಲಶಾಭಿಷೇಕ, ಮಧ್ಯಾಹ್ನ 12.30ರಿಂದ ಮಹಾಪೂಜೆ, ರಾತ್ರಿ 7ರಿಂದ ಭಜನೆ, ಮಹಾಪೂಜೆ, ತೀರ್ಥ ಪ್ರಸಾನ ವಿತರಣೆಯನ್ನು ಆಯೋಜಿಸಲಾಗಿದೆ. ಸೆ. 22ರಿಂದ ಸೆ. 30ರವರೆಗೆ ದಿನಂಪ್ರತಿ ಮಧ್ಯಾಹ್ನ ಮಹಾಪೂಜೆ, ರಾತ್ರಿ 7ರಿಂದ ಭಜನೆ, ರಾತ್ರಿ 9ರಿಂದ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನೆರವೇರಲಿದೆ.

ಸೆ. 25ರಂದು  ಲಲಿತ ಪಂಚಮಿಯ ದಿನದಂದು ಮಧ್ಯಾಹ್ನ 12.30ರಿಂದ ಮಹಾಪೂಜೆ, ರಾತ್ರಿ 7ರಿಂದ ಭಜನೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಜರಗಲಿದೆ. ಸೆ. 28ರಂದು ದುರ್ಗಾಷ್ಟಮಿಯ ದಿನದಂದು ಬೆಳಗ್ಗೆ 8 ರಿಂದ ದುರ್ಗಾ ಹೋಮ, ಮಧ್ಯಾಹ್ನ 12.30ರವರೆಗೆ ಮಹಾಪೂಜೆ, ರಾತ್ರಿ 7ರಿಂದ ಭಜನೆ, ರಾತ್ರಿ 9ರಿಂದ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿದೆ.

ಸೆ. 30ರಂದು ವಿಜಯ ದಶಮಿಯ ದಿನದಂದು ಬೆಳಗ್ಗೆ 9ರಿಂದ ಮಹಾಪೂಜೆ, ಮಧ್ಯಾಹ್ನ 12.30 ರಿಂದಮಹಾಪೂಜೆ, ಮಧ್ಯಾಹ್ನ 1ರಿಂದ ಅಪರಾಹ್ನ 3.30ರವರೆಗೆ ಅನ್ನ ಸಂತರ್ಪಣೆ, ರಾತ್ರಿ 7ರಿಂದ ಭಜನೆ, ರಾತ್ರಿ 8ರಿಂದ ಮಹಾಪಪೂಜೆ, ರಂಗ ಪೂಜೆ, ತೀರ್ಥ ಪ್ರಸಾದ ವಿತರಣೆ ನೆರವೇರಲಿದೆ.

ಮಂದಿರದಲ್ಲಿ ಪ್ರತೀ ಶುಕ್ಲಪಕ್ಷದ ಪಂಚಮಿಯ ದಿನದಂದು ಬೆಳಗ್ಗೆ 8.30 ರಿಂದ ನಾಗದೇವರ ಸನ್ನಿಧಿಯಲ್ಲಿ ತನು, ತಂಬಿಲ, ಪಂಚಾಮೃತ ಅಭಿಷೇಕ, ಪ್ರತಿ ಶುಕ್ರವಾರ ಮತ್ತು ಸಂಕಷ್ಟಿಯ ದಿನದಂದು ಸಂಜೆ 7ರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಕಷ್ಟಿ ಚತುರ್ಥಿಯ ಬೆಳಗ್ಗೆ 8.30 ರಿಂದ ಸಾಮೂಹಿಕ ಗಣಹೋಮ ನಡೆಯುತ್ತದೆ. 

Advertisement

ಶ್ರೀದೇವಿಯ ಸನ್ನಿಧಿಯಲ್ಲಿ ಕರ್ಪೂರಾರತಿ, ಕುಂಕುಮಾರ್ಚನೆ, ಹೂಪ್ರಶ್ನೆ, ಪಂಚಕಜ್ಜಾಯ, ತ್ರಿಮಧುರ ನೈವೇದ್ಯ, ಲಕ್ಷ್ಮೀ ಸ್ತೋತ್ರ, ಶಿವದೇವರಿಗೆ ರುದ್ರಾಭಿಷೇಕ, ಹೂವಿನ ಪೂಜೆ, ಅಶ್ವತ್ಥ ಪೂಜೆ, ಹಾಲು ಪಾಯಸ, ನಾಗತಂಬಿಲ, ದುರ್ಗಾ ಸಹಸ್ರನಾಮ, ಲಲಿತಾ ಸಹಸ್ರನಾಮ, ಸರ್ವ ಸೇವೆ, ಅಲಂಕಾರ ಪೂಜೆ, ದುರ್ಗಾ ಮಹಾ ಪೂಜೆ, ಶುಕ್ರವಾರದ ಮಹಾ ಪೂಜೆ, ರಂಗಪೂಜೆ, ಮಹಾ
ಪೂಜೆ ನಡೆಯಲಿದ್ದು, ಈ ಸೇವೆಗಳನ್ನು ನೀಡಲಿಚ್ಛಿಸುವವರು ಮುಂಚಿತವಾಗಿ  ಹೆಸರು ನೋಂದಾ ಯಿಸಿಕೊಳ್ಳಬಹುದೆಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next