ನವಿ ಮುಂಬಯಿ: ಶ್ರೀ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ 16ನೇ ವಾರ್ಷಿಕ ಪ್ರತಿ ಷ್ಠಾಪನಾ ಮಹೋತ್ಸವವು ಫೆ. 24 ರಂದು ಚಾಲನೆಗೊಂಡಿದ್ದು, ಫೆ. 28 ರವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆ. 24ರಂದು ಸಂಜೆ 6ರಿಂದ ಪುಣ್ಯಾಹ ವಾಚನ, ಪ್ರಸಾದ ಶುದ್ಧಿ, ವಾಸ್ತು ಹೋಮ, ವಾಸ್ತುಪೂಜೆ, ವಾಸ್ತು ಬಲಿ, ರಾತ್ರಿ ಪೂಜೆ ನಡೆಯಿತು. ಫೆ. 25ರಂದು ಬೆಳಗ್ಗೆ 7ರಿಂದ ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ತೋರಣ ಮುಹೂರ್ತ, ಶ್ರೀ ದೇವಿಗೆ ನವಕ ಪ್ರಧಾನ ಕಲಶಾಭಿಷೇಕ, ನವಗ್ರಹಯಾಗ, ದ್ವಾದಶ ನಾಳಿಕೇರ, ಅಷ್ಟದ್ರವ್ಯ ಮಹಾಗಣಪತಿ ಹೋಮ, ಮಧ್ಯಾಹ ಮಹಾಪೂಜೆ, ಅನ್ನದಾನ, ಸಂಜೆ 5ರಿಂದ ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ಉತ್ಸವ ಬಲಿ, ಅನ್ನಪ್ರಸಾದ ನಡೆಯಿತು.
ವಿವಿಧ ವೈದಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ವಿದ್ವಾನ್ ರಾಮಚಂದ್ರ ಬಾಯಾರಿ ಕಾರ್ಕಳ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರದಾನ ಅರ್ಚಕರಾದ ಗುರುಪ್ರಸಾದ್ ವಿ. ಭಟ್ ಇವರ ಪೌರೋಹಿತ್ಯದಲ್ಲಿ ಜರಗಿತು. ಹರೀಶ್ ತಂತ್ರಿ, ಅಶ್ವಿನಿ ಭಟ್, ಭವಾನಿ ಶಂಕರ್ ಭಟ್, ಸುಧೀಂದ್ರ ಭಟ್, ರಾಜೇಶ್ ಭಟ್, ಪ್ರಸನ್ನ ಭಟ್, ಅಶೋಕ್ ಭಟ್, ಶ್ಯಾಮ್ ಭಟ್ ಮೊದಲಾದವರು ಸಹಕರಿಸಿದರು.
ಕುಂಟಾಡಿ ಸುರೇಶ್ ಭಟ್ ಇವರಿಂದ ಉತ್ಸವ ಬಲಿ ನಡೆಯಿತು. ಚೆಂಡೆಯಲ್ಲಿ ತುಕರಾಮ್ ದೇವಾಡಿಗ, ರತ್ನಾಕರ ಪೂಜಾರಿ ಮತ್ತು ಬಳಗದವರಿಂದ ವಾದ್ಯ ಸೇವೆ ನಡೆಯಿತು.
ಈ ಧಾರ್ಮಿಕ ಉತ್ಸವದಲ್ಲಿ ತುಳು-ಕನ್ನಡಿಗರು ಸೇರಿದಂತೆ, ಇತರ ಭಾಷಿಗ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಶ್ರೀ ಕ್ಷೇತ್ರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಸಮಿತಿಯ ಸರ್ವ ಸದಸ್ಯರು, ಶ್ರೀ ಮೂಕಾಂಬಿಕಾ ಚಾರಿಟೆಬಲ್ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪ ಸಮಿತಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಫೆ. 28 ರಂದು ಬೆಳಗ್ಗೆ 6 ರಿಂದ ಮಹಾಸಂಪ್ರೋಕ್ಷಣೆ, ಚಂಡಿಕಾಯಾಗ, ಮಧ್ಯಾಹ್ನ ಮಹಾಪೂಜೆ, ಅನ್ನಪ್ರಸಾದವನ್ನು ಆಯೋಜಿಸಲಾಗಿದೆ. ಫೆ. 25 ರಿಂದ ಫೆ. 27 ರವರೆಗೆ ಸಂಜೆ 5 ರಿಂದ ಸಂಕೀರ್ತನೆ, ಭಜನಾ ಕಾರ್ಯಕ್ರಮ ನೆರವೇರಲಿದೆ. ಫೆ. 28 ರಂದು ಅಪರಾಹ್ನ 4 ರಿಂದ ಕೃತಿ ದಿನೇಶ್ ಚಡಗ ಇವರಿಂದ ಭರತನಾಟ್ಯ ಕಾರ್ಯಕ್ರಮ, ಅಪರಾಹ್ನ 4.30 ರಿಂದ ಧಾರ್ಮಿಕ ಸಭೆ, ಸಂಜೆ 5.30 ರಿಂದ ಬಾಲಚಂದ್ರ ರೈ ದಂಪತಿ ಹೊಟೇಲ್ ವರುಣ್ ಇವರ ಸೇವಾರ್ಥಕವಾಗಿ ಶ್ರೀ ಗೀತಾಂಬಿಕಾ ಯಕ್ಷಗಾನ ಕಲಾಮಂಡಳಿಯ ಕಲಾವಿದರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಬಯಲಾಟ ನಡೆದು ಅನಂತರ ಅನ್ನಪ್ರಸಾದ ವಿತರಣೆಯಾಗಲಿದೆ.