Advertisement

ವಸುಧಾರಾಕ್ಕೆ ಕೃಷ್ಣಾಪುರ ಶ್ರೀಗಳು

01:39 AM Oct 12, 2021 | Team Udayavani |

ಉಡುಪಿ: ಪರ್ಯಾಯ ಪೂರ್ವಭಾವಿ ಸಂಚಾರ ದಲ್ಲಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸಾಗರ ತೀರ್ಥ ಶ್ರೀಪಾದರು ಭಾರತದ ಕೊನೆಯ ಗ್ರಾಮ ಮಾನಾದಲ್ಲಿರುವ ವಸುಧಾರಾಕ್ಕೆ ರವಿವಾರ ಭೇಟಿ ನೀಡಿ ದರಲ್ಲದೇ ಬದರಿಯ ಅಲಕಾನಂದ ನದಿಯಲ್ಲಿ ಸ್ನಾನ ಮಾಡಿದರು.

Advertisement

ಬದರೀ ಕ್ಷೇತ್ರದಿಂದ 8 ಕಿ.ಮೀ. ಉತ್ತರದಲ್ಲಿರುವ ವಸು ಧಾರಾ ಚೀನ ಗಡಿಯಲ್ಲಿದೆ. ವಸುಧಾರಾ ದಲ್ಲಿ ಹಯಗ್ರೀವ ದೇವರ ಅವತಾರ ವಾಯಿತು. ಅಲ್ಲಿ ಬ್ರಹ್ಮನಿಗೆ ನಾಲ್ಕು ವೇದಗಳ ಉಪದೇಶವಾಗಿ ನಾಲ್ಕು ವೇದಗಳು ನಾಲ್ಕು ಧಾರೆಗಳಾಗಿ ಹರಿಯುತ್ತಿವೆ ಎಂಬ ನಂಬಿಕೆ ಇದೆ.

ಇಲ್ಲಿ ಯಾವುದೇ ದೇವಾಲಯಗಳಿಲ್ಲ. ಒಂದು ಕಡೆಯಲ್ಲಿ ಅಲಕಾನಂದ ನದಿ ಪ್ರವಹಿಸುತ್ತಿದ್ದರೆ ಇನ್ನೊಂದು ಮಗ್ಗುಲಲ್ಲಿ ಹಿಮಾಲಯ ಪರ್ವತ ವಿದ್ದು ನಡುವಿನ ದಾರಿಯಲ್ಲಿ ಸಾಗ ಬೇಕು. ಬದರಿ ಬಳಿಕ ಪಾಂಡವರು ಕೊನೆ ಕಾಲದಲ್ಲಿ ಹೋದ ದಾರಿ ಮಾನಾದಲ್ಲಿದ್ದು ಇಲ್ಲಿಂದ ಮುಂದು ವರಿದರೆ ವಸುಧಾರಾ ಸಿಗುತ್ತದೆ. ಭಾರೀ ಚಳಿ ಇರುವ ಎತ್ತರದ ಪ್ರದೇಶವಿದು.

ಇದನ್ನೂ ಓದಿ:ಸರ್ಕಾರಿ ಅಧಿಕಾರಿಗೆ ನೋಟ್‌ ಬರೆದಿಟ್ಟ ಕಳ್ಳ!

Advertisement

Udayavani is now on Telegram. Click here to join our channel and stay updated with the latest news.

Next