Advertisement

ಶ್ರೀಕೃಷ್ಣ ಬಾಲನಿಕೇತನದ ಮಕ್ಕಳ ಉತ್ತಮ ಸಾಧನೆ

06:00 AM May 29, 2018 | |

ಉಡುಪಿ: ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದ ಮಕ್ಕಳು ಉತ್ತಮ ಅಂಕ ಪಡೆದಿದ್ದಾರೆ. ಬಾಲನಿಕೇತನ ಬಡಕುಟುಂಬದವರು, ಅನಾಥ ಮಕ್ಕಳಿಗೆ ಆಶ್ರಯ ನೀಡಿ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸುತ್ತಿದೆ.

Advertisement

ಮನೋಜ್‌ ಶಾಲೆಗೆ ದ್ವಿತೀಯ
ಇಂದಿರಾನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮನೋಜ್‌ 545 ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈತ ಮೂರನೇ ತರಗತಿಯಲ್ಲಿದ್ದಾಗ ಚೈಲ್ಡ್‌ ಲೈನ್‌ನಿಂದ ಬಾಲನಿಕೇತನಕ್ಕೆ ಸೇರಿಸಲ್ಪಟ್ಟಿದ್ದ. ಬಾಲನಿಕೇತನದ ದಾನಿಗಳು ಇವನ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಭದ್ರಾವತಿಯ ಕವಿತಾ
ಭದ್ರಾವತಿ ಮೂಲದ ಬಡ ಕುಟುಂಬದ ಕವಿತಾ 4ನೇ ತರಗತಿಗೆ ಬಾಲನಿಕೇತನಕ್ಕೆ ಸೇರ್ಪಡೆಗೊಂಡಿದ್ದಳು. ತಂದೆಗೆ ಅನಾರೋಗ್ಯವಿದ್ದು, ಕವಿತಾಳ ತಾಯಿ ತನ್ನ ಐದು ಮಕ್ಕಳನ್ನು ಸಾಕುತ್ತಿದ್ದರು. ಕವಿತಾ ಅಪೌಷ್ಠಿಕತೆಯಿಂದ ಬಳಲುತ್ತಿದ್ದಳು. ಅನಂತರ ಬಾಲ ನಿಕೇತನದಲ್ಲಿ ಉತ್ತಮ ಬೆಳವಣಿಗೆ ಕಂಡಳು. ಈಕೆಗೆ ಎಸೆಸ್ಸೆಲ್ಸಿಯಲ್ಲಿ 458 ಅಂಕಗಳು ಲಭಿಸಿವೆ.

ಕ್ರೀಡಾಪಟು ಅಶ್ವತ್ಥ್
ರಸ್ತೆಬದಿ ಚಿಂದಿ ಹೆಕ್ಕಿ ಜೀವನ ನಡೆಸುತ್ತಿದ್ದ ಮಹಿಳೆಯ ಪುತ್ರನಾಗಿ ರುವ ಅಶ್ವಥ್‌ ಚೈಲ್ಡ್‌ ಲೈನ್‌ ಸಂಸ್ಥೆಯ ಮುಖಾಂತರ ಬಾಲನಿಕೇತನಕ್ಕೆ 2010ನೇ ಇಸವಿಯಲ್ಲಿ ಸೇರ್ಪಡೆಗೊಂಡ. ಈತ ಉತ್ತಮ ಕ್ರೀಡಾ ಪಟು. ಯೋಗಾಸನ, ನಾಟಕ, ಯಕ್ಷಗಾನ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದಾನೆ. ಈತ ಎಸೆಸ್ಸೆಲ್ಲಿಯಲ್ಲಿ 429 ಅಂಕಗಳನ್ನು ಪಡೆದಿದ್ದಾನೆ. 

ತಂದೆಯಿಲ್ಲದ ಸಲ್ಮಾ 
ಚಿಕ್ಕ ಪ್ರಾಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಸಲ್ಮಾ ತನ್ನ ತಾಯಿಯ ಜತೆ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಳು. ಸಾಕಲು ಕಷ್ಟವಾದಾಗ ತಾಯಿ ಈಕೆಯನ್ನು ಬಾಲನಿಕೇತನಕ್ಕೆ ಸೇರ್ಪಡೆಗೊಳಿಸಿದರು. ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಸಲ್ಮಾ ಎಸೆಸ್ಸೆಲ್ಸಿಯಲ್ಲಿ 416 ಅಂಕ ಪಡೆದಿದ್ದಾಳೆ.

Advertisement

ಗುಡಿಸಲಿನಲ್ಲಿದ್ದ ಭರತ್‌
ಸಣ್ಣ ಪ್ರಾಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಭರತ್‌ ಭದ್ರಾವತಿಯಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದು ಅನಂತರ ಬಾಲನಿಕೇತನಕ್ಕೆ ಸೇರ್ಪಡೆಯಾದ. ಯೋಗಾಸನದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಈತ ಎಸೆಸ್ಸೆಲ್ಸಿಯಲ್ಲಿ 393 ಅಂಕಗಳನ್ನು ಪಡೆದಿದ್ದಾನೆ. 

ಯಶೋಗಾಥೆ ತಿಳಿಸಿ
ಹತ್ತಾರು ಕೊರತೆಗಳ ಮಧ್ಯೆ ಪರೀಕ್ಷೆ ಯನ್ನು ಗೆದ್ದು ಸ್ಫೂರ್ತಿಯಾದವರು ಹಲವರಿದ್ದಾರೆ. ಎಸೆಸೆಲ್ಸಿ  ಪರೀಕ್ಷೆಯಲ್ಲಿ ಹೀಗೆಯೇ ನಿಮ್ಮ ಸುತ್ತಮುತ್ತ ಕಷ್ಟದ ಕಲ್ಲು ಮುಳ್ಳುಗಳ ಮಧ್ಯೆಯೇ ಮಹತ್ತರ ಸಾಧನೆ ಮಾಡಿದ್ದವರಿದ್ದರೆ ಅವರ ದೂರವಾಣಿ ಸಂಖ್ಯೆ, ಹೆಸರು ತಿಳಿಸಿ. ನಾವು ಅವರ ಬಗ್ಗೆ ಪ್ರಕಟಿಸುತ್ತೇವೆ, ಉಳಿದವರಿಗೂ ಸ್ಫೂರ್ತಿಯಾಗಲಿ. 
ನಮ್ಮ ವಾಟ್ಸಪ್‌ ಸಂಖ್ಯೆ 
99641 69554

Advertisement

Udayavani is now on Telegram. Click here to join our channel and stay updated with the latest news.

Next