Advertisement

ಶ್ರೀ ಚನ್ನ ಬಸವ ಪಟ್ಟದ್ದೇವರ ಪಟ್ಟಾಧಿಕಾರ ಮಹೋತ್ಸವ

08:06 PM Jan 08, 2022 | Team Udayavani |

ಆಳಂದ: ದಾನ, ಧರ್ಮ ಪರೋಪಕಾರ್ಯಗಳಿಂದ ದಕ್ಕುವ ಪುಣ್ಯದ ಪ್ರಾಪ್ತಿಯಿಂದ ಮುಕ್ತಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಧರ್ಮ ಮಾರ್ಗದಲ್ಲಿ ಭಗವಂತನ ಸ್ಮರಣೆಯಲ್ಲಿ ಸಾಗಬೇಕು ಎಂದು ಪದ್ಮಶ್ರೀ ಪುರಸ್ಕೃತ ಮಹಾಲಿಂಗಪುರದ ಇಬ್ರಾಹಿಂ ಸುತಾರ ಹೇಳಿದರು.

Advertisement

ಪಟ್ಟಣದ ಶರಣ ನಗರದಲ್ಲಿನ ಸದ್ಗುರು ಶ್ರೀ ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಲಿಂ. ತೀರ್ಥಲಿಂಗ ಪಟ್ಟದ್ದೇವರ 15ನೇ ಪುಣ್ಯಾರಾಧನೆ, ಉತ್ತರಾಧಿ ಕಾರಿ ಶ್ರೀ ಚನ್ನಬಸವ ಪಟ್ಟದೇವರ 15ನೇ ಪಟ್ಟಾ ಧಿಕಾರ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು. ಪಾಪಕರ್ಮ ಮಾಡಿ ಪುಣ್ಯ ಬಯಸಿದರೆ ಸಾಧ್ಯವಿಲ್ಲ. ಸುಖ ಸ,ಋದ್ಧಿಗೆ ಸತ್ಕರ್ಮಗಳ ಮಾರ್ಗವೇ ದಾರಿ ಎಂದು ನುಡಿದರು.

ಅಕ್ಕಲಕೋಟ ಮಠದ ಶ್ರೀ ಚಿಕ್ಕರೇವಣಸಿದ್ಧ ಶಿವಶರಣ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯಳಸಂಗಿ ಸಿದ್ಧಾರೂಢ ಮಠದ ಶ್ರೀ ಪರಮಾನಂದ ಮಹಾ ಸ್ವಾಮೀಜಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಭಕ್ತರನ್ನು ಆಶೀರ್ವದಿಸಿದರು. ಇದಕ್ಕೂ ಮುನ್ನ ರೇವಣಸಿದ್ಧ ಶಿವಶರಣರ ಶಿಲಾಮೂರ್ತಿಗೆ ನಾಣ್ಯದ ತುಲಾಭಾರ ನೆರವೇರಿತು.

ಮೈಂದರ್ಗಿ ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದೇವರು, ನೀಲಕೇರಿ ಮಠದ ಘನಲಿಂಗ ಮಹಾ ಸ್ವಾಮೀಜಿ, ಸೊಲ್ಲಾಪುರ ಜಿಲ್ಲೆಯ ಬರೂರದ ಆನಂದ ಶಾಸ್ತ್ರೀ, ತೋಳನೂರಿನ ಸಿದ್ಧಯ್ಯ ಸ್ವಾಮೀಜಿ, ಪತ್ರಕರ್ತ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ, ಸ್ಥಳೀಯ ದೇವಾಂಗ ಹಟಗಾರ ಸಮಾಜದ ಅಧ್ಯಕ್ಷ ಸೂರ್ಯಕಾಂತ ತಟ್ಟಿ, ಕ್ಷೀರಾಲಿಂಗ ಅಲ್ಮದ್‌, ಬಸರಾಜ ಭೂಸನೂರ, ಭೀಮಣ್ಣ ಶಟಗುಂಡೆ, ಸಿದ್ಧಾರೂಢ ಕಂಟೆ, ಕಾಂತಯ್ಯ ಗುಳೆದಗುಡ್ಡ, ರಾಜು ಮಮನೆ, ಶ್ರೀಶೈಲ ಉಳ್ಳೆ, ಶ್ರೀಮಂತ ಜವರಿ, ಗುರುನಾಥ ಕಳಸೆ, ಅಶೋಕ ಮೇತ್ರೆ, ಸಿದ್ಧು ತಟ್ಟೆ, ಶಿವಲಿಂಗಪ್ಪ ಷಣ್ಮುಖ, ಶ್ರೀಮಂತ ಧನ್ನಾ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next