ತೆಕ್ಕಟ್ಟೆ : ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿಯ ಶ್ರೀಹರಿಹರ ಕ್ಷೇತ್ರ, ಆನೆಗುಡ್ಡೆ ಶ್ರೀ ವಿನಾಯಕ ದೇಗುಲ, ಶ್ರೀ ಸೂರ್ಯನಾರಾಯಣ ದೇಗುಲ, ನಾಗಾಚಲ ಶ್ರೀ ಅಯ್ಯಪ್ಪ ಸ್ವಾ ಮಿ ದೇವಸ್ಥಾನಗಳು ಜಿಲ್ಲೆಯಲ್ಲಿಯೇ ಪ್ರಸಿದ್ಧವಾಗಿದೆ.
ಈ ಪುಣ್ಯ ಕ್ಷೇತ್ರದಲ್ಲಿ ರಾ.ಹೆ.66 ಕ್ಕೆ ಹೊಂದಿಕೊಂಡು ಅಪೂರ್ವ ಶೈಲಿಯ ಶಿಲಾ ಶಿಲ್ಪ ವೈಶಿಷ್ಟ್ಯತೆಯನ್ನು ಒಳಗೊಂಡ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲವು ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ. ಶರನ್ನವರಾತ್ರಿ ಮಹೋತ್ಸವವು ಸೆ.29 ರವಿವಾರದಿಂದ ಮೊದಲ್ಗೊಂಡು ಅ.8 ಮಂಗಳವಾರ ವಿಜಯ ದಶಮಿಯ ಪರ್ಯಂತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.
ಅ.7 ಸೋಮವಾರ ಮಹಾ ನವಮಿಯಂದು ಬೆಳಗ್ಗೆ ಗಂಟೆ 5.30 ರಿಂದ ತ್ರಿಕಾಲ ಪೂಜೆಯ ಜತೆಗೆ ವಿಶೇಷ ಅಲಂಕಾರದೊಂದಿಗೆ ಶುಂಭಹಾ ಪೂಜಾ, ನವ ಚಂಡಿಕಾ ಹೋಮ, ಬೆಳಗ್ಗೆ ಗಂಟೆ 8.30ರಿಂದ ಚಂಡಿಕಾ ಹೋಮ, ಮಧ್ಯಾಹ್ನ ಗಂಟೆ12.30ಕ್ಕೆ ಮಹಾಪೂಜೆ , ಅನ್ನಸಂತರ್ಪಣೆ, ಸಂಜೆ ಗಂಟೆ 6ರಿಂದ ರಂಗಪೂಜೆ, ಚಂಡಿಕಾ ಪಾರಾಯಣ, ದುರ್ಗಾದೀಪ ನಮಸ್ಕಾರ, ಮಹಾ ಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿದೆ.
ಅ.8 ಮಂಗಳವಾರ ವಿಜಯ ದಶಮಿಯಂದು ಬೆಳಗ್ಗೆ ತ್ರಿಕಾಲ ಪೂಜೆಯ ಜತೆಯಲ್ಲಿ ಮಕ್ಕಳಿಗೆ ಅಕ್ಷರ ಅಭಆಸ, ಅನ್ನ ಪ್ರಾಶನ, , ಬೆಳಗ್ಗೆ ಗಂಟೆ 8.30ರಿಂದ ಸಾಮೂಹಿಕ ಚಂಡಿಕಾ ಹೋಮ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ ,ಅನ್ನಸಂತರ್ಪಣೆ . ಸಂಜೆ ಗಂಟೆ 6ರಿಂದ ರಂಗಪೂಜೆ, ಚಂಡಿಕಾ ಪಾರಾಯಣ, ಪಲ್ಲಕ್ಕಿ ಉತ್ಸವ, ತೊಟ್ಟಿಲು ಸೇವೆ, ಅಷ್ಟವಧಾನ ಸೇವೆ ನಡೆಯಲಿದೆ.
ಸ್ವಪ್ನ ಸೂಚನೆ: ಮೂಲತಃ ಗಂಗೊಳ್ಳಿಯ ಹೊಸ್ಮನೆ ಕೀರ್ತಿಶೇಷ ಗೌರಮ್ಮ ಮತ್ತು ಮಂಜುನಾಥ ಶೇರೆಗಾರ ಪುತ್ರರಾದ ದೇವಿ ಆರಾಧಕ ಉದ್ಯಮಿ ದೇವರಾಯ ಶೇರೆಗಾರ ಅವರು ಕುಂಭಾಸಿಯಲ್ಲಿ ಮನೆ ನಿರ್ಮಿಸಿ ನಂತರ ಸಮೀಪದ ಜಾಗವನ್ನು ಖರೀದಿಸಿ ನಿವೇಶನ ನಿರ್ಮಿಸಬೇಕು ಎನ್ನುವ ಯೋಜನೆಯಲ್ಲಿದ್ದ ಅವರಿಗೆ ಸ್ವಪ್ನದಲ್ಲಿ ಆರಾಧ್ಯ ದೇವತೆ ಪ್ರತ್ಯಕ್ಷಳಾಗಿ ನೆಲೆ ಕಲ್ಪಿಸುವಂತೆ ಪ್ರೇರೆಪಿಸಿದರು ಎಂದು ಹೇಳಲಾಗಿದೆ .ಈ ಭೂಮಿ ಹಿಂದೆ ಬ್ರಾಹ್ಮಣ ಕುಟುಂಬವೊಂದರ ವಶದಲ್ಲಿದ್ದು ಆ ಕುಟುಂಬದವರು ಶ್ರೀ ವಾದಿರಾಜ ಗುರುಗಳು ಅನುಗ್ರಹಿಸಿ ನೀಡಿದ್ದ ದೇವಿಯ ಚೆ„ತನ್ಯವೊಂದನ್ನು ಇಲ್ಲಿ ಪೂಜಿಸುತ್ತಿದ್ದರು.
ಅಪೂರ್ವ ಶೈಲಿಯ ಶಿಲಾ ಶಿಲ್ಪ ವೈಶಿಷ್ಟ್ಯತೆ, ಅದ್ಭುತ ಮರದ ಕುಸುರಿ ಕೆತ್ತನೆ : ಪಯ್ಯನ್ನೂರಿನ ಜ್ಯೋತಿ ಮಾಧವನ್ ಪೊದುವಾಳರ ಮಾರ್ಗದರ್ಶನ, ವಾಸ್ತು ಶಿಲ್ಪಿ ಮುನಿಯಂಗಳ ಮಹೇಶ ಭಟ್ಟರ ಶಿಲ್ಪಕಲೆ, ಕಾರ್ಕಳದ ಶಿಲ್ಪಿ ಸತೀಶ್ ಆಚಾರ್ ರ ಕಲ್ಲುಕೆತ್ತನೆ, ಬಾಕೂìರಿನ ಕಾಷ್ಠ ಶಿಲ್ಪಿ ಶ್ರೀಪತಿ ಆಚಾರ್ ರ ಮರದ ಕುಸುರಿ ಕೆತ್ತನೆ ಹಾಗೂ ತಮಿಳುನಾಡಿನ ಕುಶಲಿಗಳಿಂದ ಲೋಹ ಶಿಲ್ಪಕಲೆ ಅದ್ಭುತವಾಗಿ ಮೇಳೆ„ಸಿ ಈ ದೇವಾಲಯ ಸರ್ವಾಂಗ ಸುಂದರವಾಗಿ ರೂಪುಗೊಂಡಿದೆ.
ದೇಗುಲದ ಒಳ ಪ್ರಕಾರದಲ್ಲಿ ನ ಕಾಷ್ಠಶಿಲ್ಪದಲ್ಲಿ ಅಭಿವ್ಯಕ್ತಗೊಂಡ ಕಂಬಗಳಲ್ಲಿ ಮೆದಳೆದುನಿಂತಿರುವ ನೃತ್ಯ ಕನ್ನಿಕೆಯರು, ನಾಗ ಕನ್ನಿಕೆಯರು, ನೃತ್ಯ ಬಾಲೆಯರ ವಿವಿಧ ಕಲಾತ್ಮಕ ಭಂಗಿಯನ್ನು ಒಳಗೊಂಡ ಕುಸುರಿ ಕೆಲಸಗಳು ಆಕರ್ಷಕವಾಗಿದೆ. ಹೊಯ್ಸಳ ಶೈಲಿಯಲ್ಲಿ ನ ನವದುರ್ಗೆಯರು , ಚೋಳ ಶೈಲಿಯ ಅಷ್ಟ ಲಕ್ಷ್ಮೀ ಹಾಗೂ ವಿವಿಧ ಪ್ರಾಕಾರದ ಹೂ ಬಳ್ಳಿ, ಪ್ರಾಣಿ, ಪಕ್ಷಿಗಳ ಕೆತ್ತನೆಗಳು ನೋಡುಗರನ್ನು ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ಯುತ್ತಿದೆ.