Advertisement

ಶ್ರೀ ಅಮೃತೇಶ್ವರ ಯಕ್ಷಗಾನ ಮಂಡಳಿ :ಮುಂಬಯಿ ಪ್ರವಾಸ ಸಮಾರೋಪ

05:00 PM Jul 11, 2019 | Vishnu Das |

ಮುಂಬಯಿ: ವಾಮಂಜೂರು ಪರಿಸರದ ಹವ್ಯಾಸಿ ಕಲಾವಿದರು ಒಂದು ಸೇರಿ ಶ್ರೀ ಅಮೃತೇಶ್ವರ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಇದೀಗ ಉತ್ತಮ ಯಕ್ಷಗಾನ ತಂಡವಾಗಿ ಮೂಡಿ ಬರುವಲ್ಲಿ ಈ ಕಲಾವಿದರ ಪರಿಶ್ರಮ ಮೆಚ್ಚುವಂಥದ್ದಾಗಿದೆ. ಈ ತಂಡವನ್ನು ಮುಂಬಯಿಗೆ ತರಿಸಿ ಇಲ್ಲಿ ಐದು ದಿನಗಳ ಕಾಲ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡುವ ಸುಯೋಗವು ನನ್ನ ಪಾಲಿಗೆ ದೊರೆತಿರುವುದು ಶ್ರೀ ಅಮೃತೇಶ್ವರ ದೇವರ ಕೃಪೆಯಿಂದ ಸಾಧ್ಯವಾಯಿತು ಎಂದು ಶ್ರೀ ಅಮೃತೇಶ್ವರ ಯಕ್ಷಗಾನ ಮಂಡಳಿ ತಿರುವೈಲು ವಾಮಂಜೂರು ತಂಡದ ಮುಂಬಯಿ ಸಂಚಾಲಕ ಮತ್ತು ಶ್ರೀ ಅಮೃತೇಶ್ವರ ಆಂಗ್ಲಮಾಧ್ಯಮ ಶಾಲೆ ವಾಮಂಜೂರು ಇದರ ಸಂಸ್ಥಾಪಕರಾದ ಸೀತಾರಾಮ ಜಾಣು ಶೆಟ್ಟಿ ಅವರು ನುಡಿದರು.

Advertisement

ಅವರು ಜು. 7ರಂದು ಐರೋಲಿಯ ಹೆಗ್ಗಡೆ ಭವನದಲ್ಲಿ ನಡೆದ ಶ್ರೀ ಅಮೃತೇಶ್ವರ ಯಕ್ಷಗಾನ ಮಂಡಳಿ ವಾಮಂಜೂರು ಇದರ ಮುಂಬಯಿ ಪ್ರವಾಸದ ಪಂಚಯಕ್ಷಾಮೃತ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಐದು ದಿನಗಳ ಯಕ್ಷಗಾನ ಕಾರ್ಯಕ್ರಮಕ್ಕೆ ಮುಂಬಯಿಯಲ್ಲಿ ನೆಲೆಸಿರುವ ಕಲಾರಸಿಕರು, ವಾಮಂಜೂರಿನ ಕಲಾಭಿಮಾನಿಗಳ ಪ್ರೋತ್ಸಾಹದಿಂದ ಯಶಸ್ವಿ ಯಾಗಿ ಜರಗಿತು. ಇಂತಹ ಪ್ರೋತ್ಸಾಹ, ಮಾರ್ಗದರ್ಶನ, ನಿರಂತರವಾಗಿ ಈ ತಂಡದ ಮೇಲಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಡಳಿಯ ಹೆಸರು ರಾರಾಜಿಸುವುದರಲ್ಲಿ ಸಂಶಯವಿಲ್ಲ ಎಂದು ನುಡಿದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಅತಿಥಿಯಾಗಿ ಪಾಲ್ಗೊಂಡ ಭವಾನಿ ಶಿಪ್ಪಿಂಗ್‌ ಸಂಸ್ಥೆಯ ಸಿಎಂಡಿ ಕೆ. ಡಿ. ಶೆಟ್ಟಿ ಅವರು ಮಾತನಾಡಿ, ಮೊದಲ ಬಾರಿಗೆ ಮುಂಬಯಿಗೆ ಆಗಮಿಸಿದ ಈ ತಂಡವು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿ ಮುಂಬಯಿ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀ ಕ್ಷೇತ್ರದ ದೇವರ ಅನುಗ್ರಹ ಈ ತಂಡಕ್ಕೆ ಇದೆ ಎನ್ನಲು ಸಂತೋಷವಾಗುತ್ತಿದೆ. ಇಂತಹ ಕಲಾವಿದರಿಂದಲೇ ನಮ್ಮ ಪ್ರಸಿದ್ಧ ಕಲೆಯು ಬೆಳೆಯಲು ಸಾಧ್ಯ. ಉತ್ತಮ ಪ್ರತಿಭೆಗಳನ್ನು ಹೊಂದಿರುವ ತಂಡಕ್ಕೆ ನಮ್ಮ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದರು.

ಇನ್ನೋರ್ವ ಅತಿಥಿ ಘನ್ಸೋಲಿ ಶ್ರೀ ಮೂಕಾಂ ಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ ಎಂಬುವುದು ನಮ್ಮ ನಾಡಿನ ಗೌರವಯುತ ಶ್ರೀಮಂತ ಕಲೆಯಾಗಿದೆ. ಈ ಕಲೆಯು ಭಕ್ತಿಪೂರ್ವಕರಾದ ಕಲೆ. ಇದರಿಂದ ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಹೆಚ್ಚಿ ಉತ್ತಮ ಮನುಷ್ಯರನ್ನಾಗಿ ಬದುಕಲು ಪ್ರೇರೇಪಿಸುತ್ತದೆ ಎಂದು ನುಡಿದು ಶುಭಹಾರೈಸಿದರು.

ಗೌರವ ಅತಿಥಿಯಾಗಿ ಆಗಮಿ ಸಿದ ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ ಮಾತನಾ ಡಿ, ಮಕ್ಕಳು ಶ್ರದ್ಧೆಯಿಂದ ಈ ಕಲೆಯನ್ನು ಕಲಿತು ಪ್ರದರ್ಶಿಸುತ್ತಿರುವುದನ್ನು ನೋಡಿದಾಗ ಸಂತೋಷವಾಗು ತ್ತಿದೆ. ಯಕ್ಷಗಾನವನ್ನು ಪ್ರದರ್ಶಿ

Advertisement

ಸುವುದೆಂದರೆ ಅದು ಸುಲಭದ ಕೆಲಸವಲ್ಲ. ಆದರೆ ಈ ಕಲಾವಿದರು ಶ್ರದ್ಧೆಯಿಂದ ಕಲೆಯನ್ನು ಗೌರವಪೂರ್ವಕವಾಗಿ ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ತಂಡವು ಮುಂದೆ ಇನ್ನಷ್ಟು ಪ್ರಸಿದ್ಧಿಯನ್ನು ಪಡೆಯುವುದರಲ್ಲಿ ಎರಡು ಮಾತಿಲ್ಲ ಎಂದರು.

ಸಮಾರಂಭದಲ್ಲಿ ಯಕ್ಷಗುರು ರಾಕೇಶ್‌ ರೈ ಅಡ್ಕ ಮತ್ತು ತುಳು ಚಲನಚಿತ್ರ, ರಂಗಭೂಮಿ ಕಲಾವಿದ ಭೋಜರಾಜ್‌ ವಾಮಂಜೂರು ಅವರನ್ನು ಸಮ್ಮಾನಿಸಲಾಯಿತು. ಮುಂಬಯಿ ಸಂಚಾಲಕರಾದ ಸೀತಾರಾಮ ಜಾಣು ಶೆಟ್ಟಿ ಮತ್ತು ಸತ್ಯಾ ಎಸ್‌. ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ನ್ಯೂ ಪನ್ವೇಲ್‌ ನಗರ ಸೇವಕ ಸಂತೋಷ್‌ ಶೆಟ್ಟಿ, ಕಲ್ಯಾಣ್‌ ಗುರುದೇವ್‌ ಭಾಸ್ಕರ್‌ ಶೆಟ್ಟಿ, ಕೃಷ್ಣರಾಜ್‌ ಉಪಾಧ್ಯಾಯ, ಅಮೃತೇಶ್ವರ ದೇವಸ್ಥಾನ ವಾಮಂಜೂರು ಇದರ ಆಡಳಿತ ಮೊಕ್ತೇಸರ ಬಿ. ಚಂದ್ರಹಾಸ್‌ ರೈ, ಸುಬ್ಬಯ್ಯ ಶೆಟ್ಟಿ ಲಿಂಗಮಾರ್‌ಗುತ್ತು, ಓಂ ಪ್ರಕಾಶ್‌ ಶೆಟ್ಟಿ ವಾಮಂಜೂರು, ಯಕ್ಷಗಾನ ಮಂಡಳಿಯ ಅಧ್ಯಕ್ಷ ದೀಪಕ್‌ ಶೆಟ್ಟಿ, ವಾಮಂಜೂರು ನಗರ ಸೇವಕಿ ಹೇಮಲತಾ ರಘು ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು. ಕಲಾವಿದ ಅಶ್ವಿ‌ನ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿದೆ.

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next