Advertisement

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಶವ ಪತ್ತೆ… ಈ ವರ್ಷದ ನಾಲ್ಕನೇ ಪ್ರಕರಣ

09:03 AM Feb 02, 2024 | Team Udayavani |

ವಾಷಿಂಗ್ಟನ್: ಅಮೆರಿಕದಲ್ಲಿ ಗುರುವಾರ ಭಾರತೀಯ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿ ಪತ್ತೆಯಾಗಿದ್ದು, ಈ ವರ್ಷದ ನಾಲ್ಕನೇ ಘಟನೆಯಾಗಿದೆ.
ಮೃತ ವಿದ್ಯಾರ್ಥಿಯನ್ನು ಓಹಿಯೋದ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಕಲಿಯುತ್ತಿರುವ ಶ್ರೇಯಸ್ ರೆಡ್ಡಿ ಬೆನಿಗರ್ ಎಂದು ಹೇಳಲಾಗಿದೆ.

Advertisement

ಘಟನೆ ಬಗ್ಗೆ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ದುಃಖ ವ್ಯಕ್ತಪಡಿಸಿದ್ದು ಬೇನಿಗರ್ ಅವರ ಸಾವಿನ ರಹಸ್ಯವನ್ನು ಭೇದಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದೆ.

ಈ ಕುರಿತು ಟ್ವೀಟ್ ಮಾಡಿದ ಭಾರತದ ಕಾನ್ಸುಲೇಟ್ ಜನರಲ್ ”ಓಹಿಯೋದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಬೆನಿಗೇರಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಘಟನೆ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ರಾಯಭಾರ ಕಚೇರಿಯು ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು. ಕುಟುಂಬಕ್ಕೆ ನೀಡಬಹುದಾದ ಎಲ್ಲಾ ನೆರವು ನೀಡಲಿದೆ ಎಂದು ಪೋಸ್ಟ್ ಮಾಡಿದ್ದಾರೆ.

ನಾಲ್ಕನೇ ಪ್ರಕರಣ:
ಈ ವಾರದ ಆರಂಭದಲ್ಲಿ, ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಶವವಾಗಿ ಪತ್ತೆಯಾಗಿದ್ದರು. ಭಾನುವಾರದಿಂದ ನೀಲ್ ನಾಪತ್ತೆಯಾಗಿದ್ದರು ಇದಾದ ಗಂಟೆಗಳ ನಂತರ, ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ನೀಲ್ ಶವ ಪತ್ತೆಯಾಗಿತ್ತು.

ಇನ್ನೊಂದು ಪ್ರಕರಣದಲ್ಲಿ ಹರಿಯಾಣದ ಪಂಚಕುಲದ ನಿವಾಸಿ ವಿವೇಕ್ ಸೈನಿ ಅವರನ್ನು ಜನವರಿ 16 ರಂದು ಜಾರ್ಜಿಯಾದ ಲಿಥೋನಿಯಾದಲ್ಲಿ ನಿರಾಶ್ರಿತ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ತಲೆಗೆ ಬಡಿದು ಸಾಯಿಸಿದ್ದ.

Advertisement

ಮೂರನೇ ಪ್ರಕರಣದಲ್ಲಿ ಭಾರತೀಯ ವಿದ್ಯಾರ್ಥಿ ಅಕುಲ್ ಧವನ್ ಈ ವರ್ಷದ ಜನವರಿಯಲ್ಲಿ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದ (ಯುಐಯುಸಿ) ಹೊರಗೆ ಶವವಾಗಿ ಪತ್ತೆಯಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Champai Soren: ಇಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಚಂಪೈ ಸೋರೆನ್ ಪ್ರಮಾಣ ವಚನ

 

Advertisement

Udayavani is now on Telegram. Click here to join our channel and stay updated with the latest news.

Next