ಢಾಕಾ: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 87 ರನ್ ಗಳ ಮುನ್ನಡೆ ಸಾಧಿಸಿದೆ.
ಬಾಂಗ್ಲಾದ 227 ರನ್ ಗೆ ಉತ್ತರವಾಗಿ ರಾಹುಲ್ ಬಳಗವು ಮೊದಲ ಇನ್ನಿಂಗ್ ನಲ್ಲಿ 314 ರನ್ ಗಳಿಸಿದೆ.
ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದ್ದಲ್ಲಿಂದ ದಿನದಾಟ ಆರಂಭಿಸಿದ ಭಾರತ ತಂಡವು ಇಂದು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 94 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಪಂತ್ ಮತ್ತು ಅಯ್ಯರ್ ನೆರವಾದರು. ಐದನೇ ವಿಕೆಟ್ ಗೆ 159 ರನ್ ಜೊತೆಯಾಟವಾಡಿದರು.
ಇದನ್ನೂ ಓದಿ:ಕಾನೂನು ಸಮರದಲ್ಲಿ ಸದಸ್ಯತ್ವ ಉಳಿಸಿಕೊಂಡ ಮಹಾಲಿಂಗಪುರ ಪುರಸಭೆ 3 ಸದಸ್ಯೆಯರು
ವೇಗವಾಗಿ ಬ್ಯಾಟ್ ಬೀಸಿದ ಪಂತ್ ಐದು ಸಿಕ್ಸರ್ ನೆರವಿನಿಂದ 93 ರನ್ ಮಾಡಿದರೆ, ಅಯ್ಯರ್ 87 ರನ್ ಗಳಿಸಿದರು. ಬಾಂಗ್ಲಾ ಪರ ತೈಜುಲ್ ಇಸ್ಲಾಂ ಮತ್ತು ಶಕೀಬ್ ತಲಾ ನಾಲ್ಕು ವಿಕೆಟ್ ಕಿತ್ತರು. ಭಾರತ ತಂಡ 314 ರನ್ ಗೆ ಆಲೌಟಾಯಿತು.
ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡವು ಆರು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಏಳು ರನ್ ಮಾಡಿದೆ.