ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿರುವ “ರಾಣ’ ಚಿತ್ರ ನ.11ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈಗ ಚಿತ್ರತಂಡ ಬಿಡುಗಡೆ ಪೂರ್ವವಾಗಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡುತ್ತಿದ್ದು, ಇಂದು ಕಲರ್‌ಫುಲ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಚಿತ್ರದಲ್ಲಿ ಶ್ರೇಯಸ್ ಭರ್ಜರಿ ಫೈಟ್ ಮಾಡಿದ್ದು, ಟ್ರೇಲರ್‌ನಲ್ಲಿರುವ ಆ್ಯಕ್ಷನ್ ದೃಶ್ಯಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಮೂಲಕ ಶ್ರೇಯಸ್ ಖುಷಿಯಾಗಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅರ್ಧದಷ್ಟು ಮಂದಿ ಮೂಲತಃ ಬೆಂಗಳೂರಿನವರಾಗಿರುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದು ಬದುಕು ಕಟ್ಟಿಕೊಂಡವರು. ಇಂತಹದ್ದೇ ಓರ್ವ ಹಳ್ಳಿ ಹುಡುಗ ಪೇಟೆಗೆ ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಆಗ ಅವನಿಗೆ ಎದುರಾಗುವ ಸಮಸ್ಯೆಗಳು ಏನು? ಆತ ಹೇಗೆ ಕಷ್ಟಗಳನ್ನು ಮೆಟ್ಟಿ ನಿಲ್ಲುತ್ತಾನೆ ಎಂಬ ಸಾರಾಂಶದಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಗೆಳೆತನದ ಮಹತ್ವ ತೋರಿಸಲಾಗಿದೆ. ಗೆಳೆತನವೇ ಹೈಲೆಟ್ ಎಂಬುದು ಚಿತ್ರತಂಡದ ಮಾತು.
ಇದನ್ನೂ ಓದಿ:ಬಿಎಸ್‌ವೈ ಜನನಾಯಕ, ಸಿದ್ದು ಖಳನಾಯಕ; ನಳಿನ್ ಕುಮಾರ್ ಕಟೀಲ್
“ರಾಣ’ ಒಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಚಿತ್ರ. ಆ್ಯಕ್ಷನ್, ಸೆಂಟಿಮೆಂಟ್, ಲವ್, ಫ್ರೆಂಡ್‌ಶಿಪ್ ಕೂಡಿದ ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಇರುವ ಸಿನಿಮಾ ಎನ್ನುವುದು ಚಿತ್ರತಂಡದ ಮಾತು. ನಾಲ್ಕು ಆ್ಯಕ್ಷನ್, ನಾಲ್ಕು ಹಾಡುಗಳನ್ನು ಒಳಗೊಂಡಿದೆ ಎಂಬುದು ಚಿತ್ರತಂಡದ ಮಾತು. “ಗುಜ್ಜಲ್ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಪುರುಷೋತ್ತಮ್ ಚಿತ್ರ ನಿರ್ಮಿಸಿದ್ದಾರೆ. ನಂದಕಿಶೋರ್ ಈ ಚಿತ್ರದ ನಿರ್ದೇಶಕರು.