ಹೊಸದಿಲ್ಲಿ: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಅವರು ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೂ ಅಯ್ಯರ್ ಲಭ್ಯವಾಗುವುದು ಕಷ್ಟ ಎನ್ನಲಾಗಿದೆ.
ಶುಕ್ರವಾರದಿಂದ (ಫೆಬ್ರವರಿ 17) ದೆಹಲಿಯಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಗೆ ಶ್ರೇಯಸ್ ಅಯ್ಯರ್ ಫಿಟ್‌ನೆಸ್ ಮರಳಿ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬೆನ್ನುನೋವಿನಿಂದ ಬಳಲುತ್ತಿರುವ ಅಯ್ಯರ್ ಇನ್ನೂ ಪೂರ್ಣ ಫಿಟ್ ಆಗಿಲ್ಲ.
ಅಯ್ಯರ್ ಮೊದಲ ಪಂದ್ಯಕ್ಕಾಗಿ ಭಾರತೀಯ ತಂಡದೊಂದಿಗೆ ನಾಗ್ಪುರಕ್ಕೆ ಹೋಗಿದ್ದರು, ಆದರೆ ನಂತರ ಚೇತರಿಸಿಕೊಳ್ಳಲೆಂದಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಿದರು.
ಇದನ್ನೂ ಓದಿ:ವಿಜಯ್ ‘ಭೀಮ’ನಿಗೆ ನಾಯಕಿಯಾದ ಅಶ್ವಿನಿ
ಅಯ್ಯರ್ ಬಹುತೇಕ ಹೊರಗುಳಿಯುವುದರೊಂದಿಗೆ, ಟೆಸ್ಟ್ ಪದಾರ್ಪಣೆಯಲ್ಲಿ ಕೇವಲ 8 ರನ್ ಗಳಿಸಿದ ನಂತರ ಸೂರ್ಯಕುಮಾರ್ ಯಾದವ್ ಮತ್ತೊಂದು ಅವಕಾಶವನ್ನು ಪಡೆಯುವ ಸಾಧ್ಯತೆಯಿದೆ. ವಿಶ್ವದ ನಂ. 1 ಟಿ20 ಬ್ಯಾಟರ್ ಆಗಿರುವ ಸೂರ್ಯ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ.