Advertisement

ಶ್ರೇಯಸ್‌ ಅಯ್ಯರ್‌ ಭಾರೀ ಖುಷ್‌!

07:49 AM May 04, 2022 | Team Udayavani |

ಮುಂಬಯಿ: ಕೂಟದ ಬಲಾಡ್ಯ ತಂಡವಾಗಿರುವ ರಾಜಸ್ಥಾನ್‌ ರಾಯಲ್ಸ್‌ಗೆ ಆಘಾತವಿಕ್ಕಿ ಸತತ 5 ಪಂದ್ಯಗಳ ಸೋಲಿನ ಸರಪಳಿಯನ್ನು ಕಡಿದುಕೊಂಡ ಖುಷಿಯಲ್ಲಿದೆ ಕೋಲ್ಕತಾ ನೈಟ್‌ರೈಡರ್.

Advertisement

ನಾಯಕ ಶ್ರೇಯಸ್‌ ಅಯ್ಯರ್‌ ಅವರಂತೂ ಹೊಸ ಹುರುಪಿನಲ್ಲಿದ್ದಾರೆ. ತಂಡದ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

“ಪವರ್‌ ಪ್ಲೇ ಅವಧಿಯಲ್ಲಿ ನಮ್ಮ ಬೌಲಿಂಗ್‌ ಉತ್ತಮ ಮಟ್ಟದಲ್ಲಿತ್ತು. ಇಲ್ಲಿ ನೀಡಿದ್ದು 36 ರನ್‌ ಮಾತ್ರ. ಜತೆಗೆ ಪಡಿಕ್ಕಲ್‌ ವಿಕೆಟ್‌ ಕೂಡ ಕೆಡವಿದೆವು. ಅಪಾಯಕಾರಿ ಜಾಸ್‌ ಬಟ್ಲರ್‌ ಅವರನ್ನೂ ಬೇಗನೇ ವಾಪಸ್‌ ಕಳುಹಿಸುವಲ್ಲಿ ಯಶಸ್ವಿಯಾದೆವು. ಇಂಥದೊಂದು ಆರಂಭ ನಮಗೆ ಬಹಳ ಅಗತ್ಯವಿತ್ತು…’ ಎಂದು ಶ್ರೇಯಸ್‌ ಅಯ್ಯರ್‌ ಹೇಳಿದರು.

ಉಮೇಶ್‌ ಯಾದವ್‌ ಸ್ಪೆಲ್‌
“ಉಮೇಶ್‌ ಯಾದವ್‌ ಅವರ ಆರಂಭಿಕ ಸ್ಪೆಲ್‌ ನಮ್ಮ ಪಾಲಿನ ದೊಡ್ಡ ಯಶಸ್ಸು. ಅವರೀಗ ತಮ್ಮ ವೇಗವನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗೆಯೇ ಸುನೀಲ್‌ ನಾರಾಯಣ್‌ ಕೂಡ ಉತ್ತಮ ಲಯದಲ್ಲಿದ್ದಾರೆ. ಅಗತ್ಯ ಸಂದರ್ಭದಲ್ಲಿ ವಿಕೆಟ್‌ ಕೀಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ಅವರ ಓವರ್‌ಗಳಲ್ಲಿ ಬಹಳ ಎಚ್ಚರಿಕೆಯಿಂದ ಆಡುತ್ತಾರೆ’ ಎಂದರು.

ಯುವ ಆಟಗಾರ ರಿಂಕು ಸಿಂಗ್‌ ಸಾಧನೆ ಬಗ್ಗೆ ಶ್ರೇಯಸ್‌ ಅಯ್ಯರ್‌ ಭಾರೀ ಸಂತಸ ವ್ಯಕ್ತಪಡಿಸಿದರು. “ರಿಂಕು ಆಡುತ್ತಿರುವ ಎರಡನೆಯದೋ ಮೂರನೆಯದೋ ಪಂದ್ಯ ಇದಾಗಿದೆ. ಇಲ್ಲಿ ಅಮೋಘ ಪ್ರದರ್ಶನವಿತ್ತರು. ಅವರು ಹೊಸ ಆಟಗಾರ ಎಂದು ಯಾರೂ ಹೇಳುವಂತಿರಲಿಲ್ಲ. ಭವಿಷ್ಯದಲ್ಲಿ ಅವರು ನಮ್ಮ ತಂಡದ ಆಸ್ತಿಯಾಗಲಿದ್ದಾರೆ’ ಎಂದರು.

Advertisement

ಅಮೋಘ ಫೀಲ್ಡಿಂಗ್‌
“ಪಂದ್ಯಕ್ಕೂ ಮುನ್ನ, ನಮ್ಮ ಫೀಲ್ಡಿಂಗ್‌ ಉತ್ತಮ ಮಟ್ಟದಲ್ಲಿರಬೇಕು ಎಂದು ರಿಂಕು, ಮಾವಿ ಮತ್ತು ಅನುಕೂಲ್‌ ಬಳಿ ಹೇಳಿದ್ದೆ. ಇದನ್ನು ಮೂವರೂ ಸಮರ್ಥವಾಗಿ ನಿಭಾಯಿಸಿದರು. ನಮ್ಮ ಜಯದಲ್ಲಿ ಕ್ಷೇತ್ರರಕ್ಷಣೆ ಪಾತ್ರವೂ ಮಹತ್ವದ್ದಾಗಿತ್ತು’ ಎಂದು ಶ್ರೇಯಸ್‌ ಅಯ್ಯರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next